Friday, June 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮತದಾನಕ್ಕೆ ಉತ್ಸಾಹ ತೋರಿದ ಜನತೆ: 11ಗಂಟೆ ವೇಳೆಗೆ ಶೇ.21.24 ಮತದಾನ

ಮಂಡ್ಯ ಲೋಕಸಭಾ ಚುನಾವಣೆಗೆ ಶುಕ್ರವಾರ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ನಡೆಯುತ್ತಿದ್ದು, ಮತದಾರರು ಹೆಚ್ಚಿನ ಉತ್ಸಾಹದಿಂದ ಭಾಗವಹಿಸಿದ್ದಾರೆ. ಇದರಿಂದಾಗಿ ಬೆಳಿಗ್ಗೆ 11ಗಂಟೆ ವೇಳೆಗೆ ಶೇ.21.24 ಮತದಾನವಾಗಿದೆ.

ಪ್ರತಿ ಮತಗಟ್ಟೆಗಳಲ್ಲಿ ವಯಸ್ಕ ಮತದಾರರು, ಮಹಿಳಾ ಮತದಾರರು, ಹಿರಿಯ ನಾಗರೀಕರು, ವಿಕಲಚೇತನರು, ಸಾರ್ವಜನಿಕರು, ಅಧಿಕಾರಿಗಳು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿದ್ದಾರೆ.

ಜಿಲ್ಲಾಧಿಕಾರಿ ಡಾ ಕುಮಾರ ಅವರು ಇಂದು ಮಂಡ್ಯ ನಗರದ ಬನ್ನೂರು ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮತದಾನ ಮಾಡಿ ಪ್ರತಿಯೊಬ್ಬರೂ ತಪ್ಪದೇ ಮತದಾನ ಮಡಿ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು.

ನಂತರ ಮತಗಟ್ಟೆಯಲ್ಲಿದ್ದ ಹಿರಿಯ ವಯಸ್ಕರ ಮತದಾರರಿಂದ ಮತಗಟ್ಟೆಯಲ್ಲಿ ಮಾಡಿರುವ ವ್ಯವಸ್ಥೆ, ಮತಗಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಊಟದ ವ್ಯವಸ್ಥೆಯ ಬಗ್ಗೆ ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ಯತೀಶ್ ಉಪಸ್ಥಿತರಿದ್ದರು.

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ 11 ಗಂಟೆ ವೇಳೆಗೆ ಶೇ. 21.24% ಮತದಾನವಾಗಿದ್ದು, ವಿಧಾನಸಭಾ ಕ್ಷೇತ್ರವಾರು ವಿವರ ಕೆಳಕಂಡತಿದೆ.

ಕೆ ಆರ್ ಪೇಟೆ – ಶೇ.19.93%,
ಮದ್ದೂರು – ಶೇ.21.84%
ಮಳವಳ್ಳಿ -20.36%
ಮಂಡ್ಯ – 21.98%
ಮೇಲುಕೋಟೆ- 20.15%
ನಾಗಮಂಗಲ -21.92%
ಶ್ರೀರಂಗಪಟ್ಟಣ -21.36%
ಕೆ ಆರ್ ನಗರ – ಶೇ.22.42%

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!