Friday, September 20, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ: ಆರೋಪಿಗೆ 4 ವರ್ಷ ಜೈಲು

ಅಪ್ರಾಪ್ತ ಬಾಲಕಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಿಗೆ 4 ವರ್ಷ ಸಾದಾಸಜೆ ಹಾಗೂ ₹ 12 ಸಾವಿರ ದಂಡ ವಿಧಿಸಿ ನಗರದ ಪೋಕ್ಸೊ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಮೋಹನ್’ಕುಮಾರ್ ಎಸ್.ಎಂ ಆಲಿಯಾಸ್ ಮೋಹನ ಶಿಕ್ಷೆಗೊಳಗಾದ ಆರೋಪಿ.

2023ರಲ್ಲಿ ಕೆ.ಆರ್.ಪೇಟೆ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದ ಪ್ರಕರಣ ಸಂಬಂಧ ಪಿಎಸ್’ಐ ಎಂ.ಕೆ.ದೀಪಕ್ ನ್ಯಾಯಾಲಯಕ್ಕೆ ಎಫ್’ಐಆರ್ ಸಲ್ಲಿಸಿದ್ದರು. ಮಂಡ್ಯ ಎಫ್.ಟಿ.ಎಸ್.ಸಿ-1 ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶಬಾನಾಬೇಗಂ ಲಾಡ್’ಖಾನ್ ಅವರು ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ.

ಪೋಕ್ಸೋ ಕಾಯಿದೆ ಕಲಂ 8ರಡಿ ಅಪರಾಧಕ್ಕೆ 3 ವರ್ಷ ಸಾದಾಸಜೆ ಹಾಗೂ ₹ 2 ಸಾವಿರ ದಂಡ ಹಾಗೂ ಕಲಂ 12 ರಡಿ ಅಪರಾಧಕ್ಕೆ 1 ವರ್ಷ ಸಾದಾಸಜೆ ಹಾಗೂ ₹ 10 ಸಾವಿರ ದಂಡ ವಿಧಿಸಿ ತೀಪು ನೀಡಿದ್ದಾರೆ. ನೊಂದ ಬಾಲಕಿಗೆ ₹ 10 ಸಾವಿರ ಪರಿಹಾರ ನೀಡುವಂತೆ ಆದೇಶಿಸಿದ್ದಾರೆ. ನೊಂದ ಬಾಲಕಿ ಪರ ಸರ್ಕಾರಿ ವಿಶೇಷ ಅಭಿಯೋಜಕರಾದ ಎಂ.ಜೆ.ಪೂರ್ಣಿಮಾ ವಾದ ಮಂಡಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!