Tuesday, June 25, 2024

ಪ್ರಾಯೋಗಿಕ ಆವೃತ್ತಿ

ಭ್ರಷ್ಟಾಚಾರಕ್ಕೆ ಮೂಲ ಕಾರಣಕರ್ತರೇ ಕಾಂಗ್ರೆಸಿಗರು : ಅಶ್ವಥ್ ನಾರಾಯಣ್

ಕಾಂಗ್ರೇಸ್ ನವರಿಗೆ ನೈತಿಕತೆ ಮತ್ತು ಮೌಲ್ಯವಿಲ್ಲ.ಭ್ರಷ್ಟಾಚಾರ ರಹಿತ ಎನ್ನುವ ಪದ ಅವರಿಂದ ಬರಲ್ಲ.
ಯಾಕ್ ಬರಲ್ಲ ಅಂದ್ರೆ, ಅವರ ತನು-ಮನ ಎಲ್ಲವೂ ಭ್ರಷ್ಟಾಚಾರ ಎಂದು ಸುದ್ದಿಗಾರರೊಂದಿಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಮಾತನಾಡಿದರು.

ಈಗ ಈಶ್ವರಪ್ಪನವರೇ ರಾಜೀನಾಮೆ ನೀಡಿದ್ದಾರೆ. ಇದು ಕಾಂಗ್ರೆಸ್‌ಗೆ ಸಿಕ್ಕ ಜಯ ಅಲ್ಲ. ಸಮಾಜದಲ್ಲಿ ಕಾಂಗ್ರೆಸ್ ಮುಕ್ತ ಆದಾಗಲೇ ನಮಗೆ ಜಯ ಸಿಗುವುದು.

ಕಾಂಗ್ರೆಸ್‌ನವರು 40% ಬಿಜೆಪಿ ಎಂದು ಆಪಾದನೆ ಮಾಡುತ್ತಿದ್ದಾರೆ. ಸಮಾಜದಲ್ಲಿ ಈ ಸಂಸ್ಕೃತಿ ಬಂದಿರುವುದಕ್ಕೆ ಕಾಂಗ್ರೇಸಿನವರೇ ಕಾರಣ. ಕಾಂಗ್ರೇಸಿನವರೇ 40% ಸಂಸ್ಕೃತಿಯನ್ನು ಬೆಳಸಿಕೊಂಡು ಬಂದಿರೋದು,
ಕಾಂಗ್ರೆಸ್‌ನವರದ್ದು ಕಾಮಾಲೆ ಕಣ್ಣು, ಅದೇ ಕಣ್ಣಲ್ಲಿ ಎಲ್ಲಾ ನೋಡುತ್ತಿದ್ದಾರೆ ಎಂದರು.

ಇದನ್ನೂ ಓದಿ : ದಲಿತ ಸಿಎಂ ಎನ್ನುವುದು ಬರಿ ನಾಟಕ : ಅಶ್ವಥ್ ನಾರಾಯಣ್ ವ್ಯಂಗ್ಯ

Related Articles

ಅತ್ಯಂತ ಜನಪ್ರಿಯ

error: Content is protected !!