Saturday, July 13, 2024

ಪ್ರಾಯೋಗಿಕ ಆವೃತ್ತಿ

ದಲಿತರನ್ನು ಏಕೆ ಮುಖ್ಯಮಂತ್ರಿ ಮಾಡಲಿಲ್ಲ : ಪಿ.ಎಂ.ನರೇಂದ್ರಸ್ವಾಮಿ

2004 ರಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿದ್ದ ಸಂದರ್ಭದಲ್ಲಿ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಿದ ಜೆಡಿಎಸ್ ಪಕ್ಷಕ್ಕೆ ದಲಿತ ವರ್ಗಕ್ಕೆ ಸೇರಿದ ಮಲ್ಲಿಕಾರ್ಜುನ ಖರ್ಗೆ ಕಣ್ಣಿಗೆ ಬಿದ್ದಿರಲಿಲ್ವಾ, ತಾವು ಎರಡು ಬಾರಿ ಸಿಎಂ ಆಗಿದ್ರಿ,ಆ ಸಂದರ್ಭದಲ್ಲೂ ನಿಮ್ಮ ಪಕ್ಷದಿಂದ ಆಯ್ಕೆಯಾಗಿದ್ದ ದಲಿತ ವರ್ಗದ ಶಾಸಕರನ್ನು ಸಿಎಂ ಮಾಡಬಹುದಿತ್ತಲ್ವಾ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು,ಕುಮಾರಸ್ವಾಮಿ ಅವರು ಗುರುವಾರ ಮಳವಳ್ಳಿಯಲ್ಲಿ ತಾಲ್ಲೂಕು ಆಡಳಿತದಿಂದ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾನು ಮಣ್ಣಿಗೆ ಹೋಗುವ ಮುನ್ನ ನಮ್ಮ ಪಕ್ಷದಿಂದ ದಲಿತರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಬೇಕೆಂದು ಹೇಳಿದ್ದಾರೆ. ನೀವು ಸದೃಢರಾಗಿದ್ದ ಸಂದರ್ಭದಲ್ಲಿ ನಿಮ್ಮ ಪಕ್ಷದಲ್ಲಿ ನಾಲ್ವರು ದಲಿತ ಶಾಸಕರಿದ್ದರು, ಅವರನ್ನು ಏಕೆ ಮಾಡಲಿಲ್ಲ.

ಸರ್ಕಾರಿ ವೇದಿಕೆಯಲ್ಲಿ ದಲಿತ ಮುಖ್ಯಮಂತ್ರಿ ವಿಚಾರ ಪ್ರಸ್ತಾಪ ಮಾಡಿರುವುದಲ್ಲದೆ ಮುಂದಿನ ಚುನಾವಣೆಯಲ್ಲಿ ಮಳವಳ್ಳಿ ಕ್ಷೇತ್ರದಿಂದ ಮತ್ತೊಮ್ಮೆ ಹಾಲಿ ಶಾಸಕರನ್ನು ಗೆಲ್ಲಿಸಿ ಎಂದು ಹೇಳುತ್ತೀರಲ್ಲ ನಿಮಗಿದು ಅವರಿಗೆ ಶೋಭೆ ತರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಜೀವನ,ಸಾಧನೆ,ಸಂವಿಧಾನದ ವಿಚಾರವಾಗಿ ಮಾತನಾಡಬಹುದಿತ್ತು.

ಆದರೆ ಅವರು ಸರ್ಕಾರಿ ಕಾರ್ಯಕ್ರಮದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರೂ ತಾಲ್ಲೂಕು ಹಾಗೂ ಜಿಲ್ಲಾಡಳಿತ ಅವಕಾಶ ನೀಡಿದ್ದು ಎಷ್ಟು ಸರಿ.ಈತ ತಪ್ಪು ಮಾಡಿದ್ರೆ ಮನ್ನಿಸಿ ಮತ್ತೊಂದು ಬಾರಿ ಅವಕಾಶ ಕೊಡಿ ಎನ್ನುವ ಕುಮಾರಸ್ವಾಮಿ ಅವರೇ,ನಿಮ್ಮ ಮಗ ನಿಖಿಲ್ ಕುಮಾರಸ್ವಾಮಿಗೆ ಮಳವಳ್ಳಿಯಲ್ಲಿ ಕಡಿಮೆ ಮತಗಳನ್ನು ಕೊಡಿಸಿದ್ದು ಇದೇ ಶಾಸಕ ಎಂಬುದು ನೆನಪಿನಲ್ಲಿ ಇಲ್ಲವೇ? ಚುನಾವಣೆ ಸಮೀಪಿಸುತ್ತಿದ್ದಂತೆ ಮಂಡ್ಯಕ್ಕೆ ಬಂದು ಜನರ ಕಣ್ಣೊರೆಸುವ ತಂತ್ರ ಮಾಡಬೇಡಿ.ಸುಳ್ಳು ಭರವಸೆ ನೀಡಿ ಮಳವಳ್ಳಿ ಕ್ಷೇತ್ರದ ಅಭಿವೃದ್ಧಿ ಕುಂಠಿತ ಮಾಡಬೇಡಿ ಎಂದು ವಾಗ್ದಾಳಿ ನಡೆಸಿದರು.

ಚುನಾವಣೆಗೆ ಇನ್ನು ಒಂದು ವರ್ಷವಿದೆ. ಆಗಲೇ ನಿಮಗೆ ಭಯ ಕಾಡುತ್ತಿದೆಯೇ ಎಂದು ಪ್ರಶ್ನಿಸಿದ ಅವರು, ಚುನಾವಣೆ ಸಮೀಪಿ ಸುತ್ತಿದ್ದಂತೆ ನಿಮಗೆ ಮಂಡ್ಯ ನೆನೆಪಿಗೆ ಬರುತ್ತದೆಯೇ ಎಂದು ಟೀಕಿಸಿದರು.
ಕುಮಾರಸ್ವಾಮಿಯವರೇ ಇನ್ನು ಮುಂದಾದರೂ ಸುಳ್ಳು ಹೇಳುವುದನ್ನು ಬಿಡಿ, ೧೨೩ ಸ್ಥಾನ ಬಂದರೆ ದಲಿತ ಮುಖ್ಯಮಂತ್ರಿ ಮಾಡುವುದಾಗಿ ನೀವೇ ಘೋಷಿಸಿ ಎಂದು ಸವಾಲು ಹಾಕಿದರು.

ಮಂಡ್ಯ ಹಾಗೂ ಹಾಸನ ನಮಗೆ ಎರಡು ಕಣ್ಣಗುಳಿದ್ದಂತೆ ಎಂದು ಹೇಳುತ್ತೀರಿ. ನೀವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಾಸನಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರಿ,ರಾಮನಗರಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರಿ ಎಂಬ ಬಗ್ಗೆ ದಾಖಲೆ ಸಮೇತ ಮುಂದಿಡುತ್ತೇನೆ.ಆದರೆಮಂಡ್ಯಕ್ಕೆ ಎಷ್ಟು ಅನುದಾನ ಕೊಟ್ಟಿದ್ದೀರಿ ಎಂಬುದನ್ನು ಹೇಳಿ.ಮಂಡ್ಯದ ಜನರಿಗೆ ಎಲ್ಲವೂ ತಿಳಿದಿದೆ.

ನನ್ನ ಅವಧಿಯಲ್ಲಿ ಪೂರಿಗಾಲಿ ಹನಿ ನೀರಾವರಿ ಯೋಜನೆಯನ್ನು ತಂದಿದ್ದೆ.30 ಸಾವಿರ ಎಕರೆಗೆ ನೀರುಣಿಸುವ ಯೋಜನೆ ಯಾವ ದುಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನು ನಿಮ್ಮ ಕಾರ್ಕರ್ತರಲ್ಲಿ ಕೇಳಿ ತಿಳಿದುಕೊಳ್ಳಿ. ರಾಜಕೀಯ ಉದ್ದೇಶಕ್ಕೋಸ್ಕರ ನೀವು ಅನುಷ್ಠಾನ ಮಾಡಲಿಲ್ಲ. ಯಾಕೆ ನಮ್ಮ ಅಭಿವೃದ್ಧಿ ಕೆಲಸಗಳು ನಿಮಗೆ ಬೇಡವೇ, ನಿಮ್ಮ ಶಿಷ್ಯ ಇದುವರೆಗೂ ಯಾವುದಾದರೂ ಯೋಜನೆ ತಂದಿದ್ದಾರೆಯೇ, ಅಥವಾ ಇಂತಹ ಯೋಜನೆಯನ್ನು ಅನುಷ್ಠಾನ ಮಾಡಿಕೊಡಿ ಎಂದು ಕೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ಎಸ್ಸಿ ,ಎಸ್ಟಿ ಸಮುದಾಯದ ಬಗ್ಗೆ ನಿಮಗೆ ಅಷ್ಟು ಕಾಳಜಿ ಇದ್ದರೆ ಎಸ್ಸಿಪಿ ಹಾಗೂ ಟಿಎಸ್ಪಿ ಯೋಜನೆಯಲ್ಲಿ ಬರೋಬ್ಬರಿ ೧೯ ಸಾವಿರ ಕೋಟಿ ಅನುದಾನವನ್ನು ಸರ್ಕಾರ ವಾಪಸ್ ಪಡೆಯಿತು. ನೀವು ಆಗ ಸದನದಲ್ಲೆ ಇದ್ದರೂ ಏಕೆ ಒಂದು ಮಾತನಾಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಕ್ಷೇತ್ರಕ್ಕೆ ನಿಮ್ಮ ಶಿಷ್ಯನ ಕೊಡುಗೆ ಏನೆಂದು ನಿಮ್ಮ ಕಾರ್ಯಕರ್ತರನ್ನೆ ಕೇಳಿ ಚೆನ್ನಾಗಿ ಹೇಳುತ್ತಾರೆ. ನಾವು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ ಎಂದರು. ನೀವು ಎರಡು ಬಾರಿ ಮುಖ್ಯಮಂತ್ರಿ ಯಾಗಿದ್ದವರು ನಿಮ್ಮ ಬಗ್ಗೆ ನಮಗೆ ಗೌರವವಿದೆ. ಇನ್ನು ಮುಂದಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ಎಂದು ಹೇಳಿದರು.

ನಿಖಿಲ್ ಸೋಲಿಗೆ ನಿಮ್ಮವರೇ ಕಾರಣ: ನಿಮ್ಮ ಆಡಳಿತಾವಧಿಯಲ್ಲಿ ನಿಮ್ಮ ಪುತ್ರ ನಿಖಿಲ ಸೋಲಿಗೆ ನಿಮ್ಮವರೇ ಕಾರಣ. ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ನಿಮ್ಮವರೇ 8 ಶಾಸಕರು, ಅದರಲ್ಲಿ ಮೂವರು ಮಂತ್ರಿಗಳು ಹಾಗೂ ಮೂವರು ವಿಧಾನ ಪರಿಷತ್ ಸದಸ್ಯರಿದ್ದರು. ನಿಮ್ಮ ಶಿಷ್ಯ ಮಳವಳ್ಳಿಯಲ್ಲಿ ಎಷ್ಟು ಅಂತರದ ಲೀಡ್ ಕೊಟ್ಟರೂ ಎಂಬುದು ತಿಳಿದಿದೆ. ಅಂತಹ ಶಾಸಕರನ್ನು ಮತ್ತೊಮ್ಮೆ ಗೆಲ್ಲಿಸಿ ಎನ್ನುತ್ತೀರಲ್ಲ.
ಮಳವಳ್ಳಿಯಲ್ಲಿ ಅಭಿವೃದ್ಧಿ ಎನ್ನುವುದು ಶೂನ್ಯವಾಗಿದೆ. ತಾಲ್ಲೂಕಿನಲ್ಲಿ ಭಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ನಿಮ್ಮ ಕಾರ್ಯಕರ್ತರನ್ನು ಕೇಳಿ ತಿಳಿದುಕೊಳ್ಳಿ. ಜಲ ಜೀವನ್ ಮಿಷನ್ ಯೋಜನೆ ಸಂಪೂರ್ಣ ಹಳ್ಳ ಹಿಡಿದಿದೆ. ಗುಣಮಟ್ಟದ ಕಾಮಗಾರಿ ಎಲ್ಲೂ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಇನ್ನು ಮುಂದೆ ಮಳವಳ್ಳಿಗೆ ಬಂದಾಗ ಅಭಿವೃದ್ಧಿ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಿ, ಅದು ಬಿಟ್ಟು ವೇದಿಕೆಗಳನ್ನು ಸುಳ್ಳು ಹೇಳಿಕೆಗೆ ಬಳಸಿಕೊಳ್ಳಬೇಡಿ ಎಂದು ಹರಿಹಾಯ್ದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್,ಜಿ.ಪಂ.ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ನಗರಾಧ್ಯಕ್ಷ ರುದ್ರಪ್ಪ,ನಗರಸಭೆ ಸದಸ್ಯ ಶ್ರೀಧರ್ ಮತ್ತಿತರರು ಇದ್ದರು.

ಇದನ್ನೂ ಓದಿ : ಜನಸಾಗರದ ಮಧ್ಯೆ ಮಾಜಿ ಸಚಿವ ನರೇಂದ್ರಸ್ವಾಮಿ ಜನ್ಮದಿನ ಆಚರಣೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!