ಇಂಗ್ಲೆಂಡ್ ವಿರುದ್ಧ ಲಂಡನ್‌ನ ಓವಲ್ ಮೈದಾನದಲ್ಲಿ ನಡೆದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊಹಮ್ಮದ್ ಸಿರಾಜ್ ಹಾ ಕನ್ನಡಿಗ ಪ್ರಸಿದ್ ಕೃಷ್ಣ ಅವರ ನೇತೃತ್ವದ ಬೌಲಿಂಗ್ ದಾಳಿಯಿಂದಾಗಿ 6 ರನ್‌ಗಳ ರೋಚಕ ಗೆಲುವು ಸಾಧಿಸಿದೆ. ಆ ಮೂಲಕ ಐದು ಪಂದ ಟೆಸ್ಟ್ ಸರಣಿಯಲ್ಲಿ 2-2 ರಿಂದ ಭಾರತ- ಇಂಗ್ಲೆಂಡ್ ಸಮಬಲ ಸಾಧಿಸಿವೆ.
ಪಂದ್ಯದ ನಾಲ್ಕನೇ ದಿನ 6 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಗೆಲುವಿಗೆ 36 ರನ್‌ಗಳ ಅವಶ್ಯಕತೆ ಇತ್ತು. ಈ ನಡುವೆ ಮಂದ ಬೆಳಕಿನ ಪಂದ್ಯವನ್ನು 5ನೇ ದಿನಕ್ಕೆ ಮುಂದೂಡಲಾಗಿತ್ತು. ಇಂಗ್ಲೆಂಡ್ ಕೈಯ್ಯಲ್ಲಿದ್ದ ಪಂದ್ಯವನ್ನು ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಹಾಗೂ ಟೀಮ್. ಇಂಡಿಯಾದ ಮಿಯಾ ಭಾಯ್ ಎಂದೇ ಪ್ರಸಿದ್ದರಾಗಿರುವ ಮೊಹಮ್ಮದ್ ಸಿರಾಜ್ ಕಸಿದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ವಿಕೆಟ್ ಕಳೆದುಕೊಂಡು ಇನ್ನೇನು ಗೆಲುವಿಗೆ ಹತ್ತಿರವಿರುವಾಗ ಅಟ್ಟಿನ್‌ಸನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಮೊಹಮ್ಮದ್ ಸಿರಾಜ್ ಪಂದ್ಯದ ‘ಹೀರೋ’ ಎನಿಸಿಕೊಂಡರು.




