Tuesday, November 24, 2026

ಪ್ರಾಯೋಗಿಕ ಆವೃತ್ತಿ

ಟಿಪ್ಪು ಸಂಬಂಧಿತ ಶಿಲಾಫಲಕದ ಬಗ್ಗೆ ಪರಾಮರ್ಶೆ ನಡೆಸಲಿ : ಆರ್.ಅಶೋಕ್

ಕೆ.ಆರ್.ಎಸ್ ಅಣೆಕಟ್ಟೆಗೆ ಶಿಲಾನ್ಯಾಸ ಮಾಡಿದ್ದೆ ಟಿಪ್ಪು ಸುಲ್ತಾನ್ ಎಂದು ಹೇಳಿರುವ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್.ಅಶೋಕ್,  ಟಿಪ್ಪು ಸಂಬಂಧಿತ ಶಿಲಾಫಲಕದ ಬಗ್ಗೆ ಪರಾಮರ್ಶೆ ಮಾಡಿ, ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ಮೈಸೂರು ರಾಜಮನೆತನಕ್ಕೆ ಕಳಂತ ತರುವಂತಹ ಹೇಳಿಕೆಗಳನ್ನು ನೀಡುತ್ತಿದ್ದು, ಕಾಂಗ್ರೆಸ್ ಸರ್ಕಾರ ಕೆ.ಆರ್.ಎಸ್. ಗೆ  ಟಿಪ್ಪು ಸುಲ್ತಾನ್ ಸಾಗರ ಎಂದು ಮರುನಾಮಕರಣ ಮಾಡಲು ಹುನ್ನಾರ ನಡೆಸುತ್ತಿದೆ ಎಂದರು.

ಪದೇ ಪದೇ ಟಿಪ್ಪು ಸುಲ್ತಾನರ ಹೆಸರು ತಂದು ಕಳಂಕಿತ ಹೇಳಿಕೆಗಳನ್ನು ನೀಡುತ್ತಿದು, ಇದೇ ಹಾದಿಯಲ್ಲಿ ನಡೆದಿರುವ ಸಚಿವ ಹೆಚ್.ಸಿ.ಮಹದೇವಪ್ಪ ಅವರು ಯಾವುದೋ ಇದುವರೆಗೂ ಕಾಣದ ಶಿಲನ್ಯಾಸವನ್ನು ಇಟ್ಟುಕೊಂಡು ಕೆ.ಆರ್.ಎಸ್‌ನ ಹೆಸರು ಬದಲಿಸಲು ಪೀಠಿಕೆ ಹಾಕಿದ್ದಾರೆ. ಕೆಆರ್‌ಎಸ್ ಹೆಸರು ಬದಲಿಸಲು ಯಾರದೋ ಕೈವಾಡವಿದ್ದು, ಹುನ್ನಾರವೆಸಗುತ್ತಿದ್ದಾರೆ ಎಂದು ಅನುಮಾನ ವ್ಯಕ್ತಪಡಿಸಿದರು.

1911ರಲ್ಲಿ ನಾಲ್ವಡಿ ಅವರಿಗೆ ಅಣೆಕಟ್ಟೆ ಕಟ್ಟಲು 80 ಅಡಿಗಳಿಗೆ ಅನುಮತಿ ದೊರೆತಿತ್ತು, ಆದರೂ 124 ಅಡಿಗಳಿಗೆ ನಾಲ್ವಡಿಯವರು ಅಣೆಕಟ್ಟೆ ಕಟ್ಟಿದರು, ಕಟ್ಟೆಕಟ್ಟುವ ಆರಂಭಕ್ಕೆ 2.34 ಕೋಟಿ ರೂ ಹಣ ವ್ಯಯಿಸಲಾಗಿತ್ತು. ಪೂರ್ಣಗೊಳಿಸಲು ಅರಮನೆಯ ಹಾಗೂ ಮಹಾರಾಣಿಯರ ಒಡವೆಗಳನ್ನು ಮುಂಬೈನಲ್ಲಿ ಮಾರಿ ಅಣೆಕಟ್ಟೆ ಪೂರ್ಣಗೊಳಿಸಿದ್ದನ್ನು ಹಳೆ ಮೈಸೂರು ಭಾಗದ ಜನತೆ ಮರೆತಿಲ್ಲ. ಪ್ರಾರಂಭದಿಂದ ಇಲ್ಲಿಯವರೆಗೂ ದಾಖಲೆಗಳಿವೆ. ಈ ಟಿಪ್ಪು ಶಿಲಾನ್ಯಾಸಕ್ಕೆ ಇರುವದ ದಾಖಲೆಯಾದರೂ ಏನೆಂದು ಪ್ರಶ್ನಿಸಿದರು.

ನಾಲ್ವಡಿಗೆ ಹೋಲಿಗೆ ಸರಿಯಲ್ಲ

ಸಿದ್ದರಾಮಯ್ಯ ಅವರ ಸಪುತ್ರ ಸಿದ್ದರಾಮಯ್ಯರನ್ನು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಹೋಲಿಕೆ ಮಾಡಿದ್ದು, ಕೆ.ಆರ್.ಎಸ್ ಅಣೆಕಟ್ಟೆ ಕಟ್ಟಿದ ಒಡೆಯರು ಯಾರ ಮೇಲು ಸಾಲದ ಹೊರೆ ಹಾಕಲಿಲ್ಲ, ಆದರೆ ಸಿದ್ದರಾಮಯ್ಯ ಕಳೆದ 2 ವರ್ಷಗಳಲ್ಲಿ 2 ಲಕ್ಷ ಕೋಟಿ ಸಾಲದ ಹೊರೆ ಹಾಕಿದ್ದಾರ ಎಂದು ದೂರಿದರು.

ನಾಲ್ವಡಿ ಕೃಷ್ಣರಾಜ ಒಡೆಯರು ಆಗಿನ ಕಾಲದಲ್ಲಿಯೇ ಮೈಸೂರು ವಿಶ್ವ ವಿದ್ಯಾಲಯ ಸ್ಥಾಪಿಸಿದರು. ಸಿದ್ದರಾಮಯ್ಯ 9 ವಿವಿಗಳನ್ನು ಮುಳುಗಿಸಿದ್ದು, ಮಂಡ್ಯ ವಿವಿಯನ್ನೂ ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಮಾಜಿ ಶಾಸಕ ಎಲ್.ನಾಗೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್, ಮುಖಂಡರಾದ ಅಶೋಕ್ ಜಯರಾಂ, ಎಸ್. ಸಚ್ಚಿದಾನಂದ, ವಸಂತ್‌ಕುಮಾರ್, ಅಶೋಕ್ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ