ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದ ಪ್ರಸಿದ್ದ ಶ್ರೀಮಹಾಶಕ್ತಿ ಮಂಚದ ಕಾಳಿಕಾಂಭ, ಶ್ರೀ ವಿಜಯನಗರೇಶ್ವರಿ , ಶ್ರೀ ಹಿರಿಯ ಮಂಚದ ಕಾಳಿಕಾಂಭ, ಶ್ರೀ ಮನೆಯಮ್ಮ, ಶ್ರೀ ಬೆಟ್ಟದ ಅರಸಮ್ಮ , ಶ್ರೀ ಕನ್ನಕಡ್ಡಯ್ಯ, ಶ್ರೀ ಮುಖದ ದೇವರು, ಶ್ರೀ ಮೂಗದೇವಮ್ಮ, ಶ್ರೀ ಪಟ್ಟದಮ್ಮ, ದೊಡ್ಡಹಬ್ಬ ಜ 15ರಿಂದ 23 ರವರೆಗೆ 9 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ಮಂಚದ ಕಾಳಿಕಾಂಭ ದೇವಸ್ಥಾನ ಆಡಳಿತ ಮಂಡಳಿ ಮುಖ್ಯಸ್ಥ ಹಾಗೂ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇವರಾಜು ತಿಳಿಸಿದರು.
ಮಳವಳ್ಳಿ ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಂಚದ ಕಾಳಿಕಾಂಭ ದೇವರ ಮಹಿಮೆ ಅಪಾರ, ಈ ದೇವರ ಉತ್ಸವಮೂರ್ತಿ ಖಜಾನೆ ಇಲಾಖೆಯಲ್ಲೂ ಹಿಡಿಯುವುದಕ್ಕೆ ಸಾಧ್ಯವಾಗದೆ ಒಂದು ಎಲೆತೋಟದ ಜಮೀನಿನಲ್ಲಿ ನೆಲದ ಒಳಗೆ ಇಡಲಾಗುವುದು, ಇದಲ್ಲದೆ ಈ ಹಬ್ಬ 5 ವರ್ಷ ಇಲ್ಲ, 7 ವರ್ಷ ಅಥವಾ 9ವರ್ಷ ಗಳಿಗೆ ಆಚರಿಸಲಾಗುತ್ತದೆ. ಕಳೆದ ಬಾರಿ ಕೋರೋನಾ ಇದ್ದದರಿಂದ ಈ ಬಾರಿ 11 ವರ್ಷಕ್ಕೆ ಆಚರಿಸಲಾಗುತ್ತಿದೆ, ಜ 15 ರಿಂದ ಪ್ರಾರಂಭವಾಗಲಿದ್ದು, ಅಂದು ರಾತ್ರಿ 12 ಗಂಟೆ ಉತ್ಸವಮೂರ್ತಿ ತಂದು ದೇವಸ್ಥಾನ ತಂದು ಅಭಿಷೇಕ ಮಾಡಿ ಪೂಜೆ ಸಲ್ಲಿಸಿ ಬಳಿಕ ಹಬ್ಬಕ್ಕೆ ಚಾಲನೆ ಸಿಗಲಿದೆ. ಸುತ್ತಮುತ್ತ 10 ಗ್ರಾಮಗಳ ಜನರು ಸೇರಿ ಈ ಗ್ರಾಮದಲ್ಲಿ ಆಚರಿಸಲಾಗುತ್ತದೆ ಎಂದರು.
ಇನ್ನೂ ಇದೇ ವೇಳೆ ಮಂಡಳಿ ಅದ್ಯಕ್ಷ ಎನ್ ನಂಜೇಗೌಡ ಮಾತನಾಡಿ, ನಮ್ಮ ಗ್ರಾ.ಪಂ ಹೆಚ್ಚು ಜನರು ಇರುವ ಪಂಚಾಯಿತಿಯಾಗಿದ್ದು, ಈ ಗ್ರಾಮದಲ್ಲಿ ಅಶೋಕ ಚಕ್ರವರ್ತಿ ರವರ ಕಾಲದ ದೇವಸ್ಥಾನಗಳು, ವೀರಕಲ್ಲು, ಶಾಸನ ಗಳು ಪತ್ತೆಯಾಗಿದೆ. ಸಾಕಷ್ಟು ಪ್ರಚಲಿತಗೊಂಡಿದೆ, ಈ ಗ್ರಾಮದಲ್ಲಿ ದೇವಸ್ಥಾನಗಳಿದ್ದು ಇದು ಒಂದು ತೀರ್ಥಕ್ಷೇತ್ರವಾಗಿದ್ದು, ಈ ಹಬ್ಬಕ್ಕೆ 48 ಗ್ರಾಮದ ಜನರು ಬಂದು ಹಬ್ಬ ಆಚರಣೆ ಮಾಡಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಎನ್. ನಂಜೇಗೌಡ , ದೇವರಾಜು, ಗ್ರಾ.ಪಂ ಮಾಜಿ ಅಧ್ಯಕ್ಷ ಪರಮೇಶ, ಶಿವ ಅರ್ಚಕ ಪಟೇಲಸೋಮಶೇಖರ, ಮಲ್ಲಯ್ಯಪ್ಪ, ಚಂದನ್ ದೀಕ್ಷಿತ್, ಮಹದೇವು, ಮಹದೇವನಾಯಕ್ ಸೇರಿದಂತೆ ಹಲವರು ಇದ್ದರು.




