Wednesday, November 18, 2026

ಪ್ರಾಯೋಗಿಕ ಆವೃತ್ತಿ

ನಾಟಿಕೋಳಿ ಸಾರು- ರಾಗಿಮುದ್ದೆ ಊಟದ ಸ್ಪರ್ಧೆ| ಬರೋಬ್ಬರಿ 10 ಮುಂದೆ ಉಂಡು ಬೀಗಿದ ಅರಕೆರೆ ಈರೇಗೌಡ !

ಮಂಡ್ಯನಗರ ಅಂಬೇಡ್ಕರ್ ಭವನದಲ್ಲಿ ಸಿರಿಧಾನ್ಯ ಹಬ್ಬದ ಹಿನ್ನೆಲೆಯಲ್ಲಿ ನಡೆದ ರಾಗಿಮುದ್ದೆ- ನಾಟಿ ಕೋಳಿ ಸಾರು ಊಟದ ಸ್ಪರ್ಧೆಯಲ್ಲಿ ಬರೋಬ್ಬರಿ 10 ಮುಂದೆಗಳನ್ನು ಉಣ್ಣುವ ಮೂಲಕ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಈರೇಗೌಡ ಪ್ರಥಮ ಬಹುಮಾನವನ್ನು ತಮ್ಮದಾಗಿಸಿಕೊಂಡರು.

ಒಟ್ಟು 2 ಕೆಜಿ 717 ಗ್ರಾಂ ತೂಕದ ಬರೋಬ್ಬರಿ 10 ಮುದ್ದೆಗಳನ್ನು ತಿಂದು ಬೀಗಿದ ಈರೇಗೌಡ, ನೋಡುಗರ ಅಚ್ಚರಿಗೆ ಕಾರಣವಾದರು. ರಾಜ್ಯದ ವಿವಿಧೆಡೆ ನಡೆದ ಸ್ಪರ್ಧಗಳಲ್ಲಿ ಭಾಗವಹಿಸಿ ಹಲವು ಬಹುಮಾನ ಗೆದ್ದಿರುವ ಈರೇಗೌಡ ಈ ಸ್ಪರ್ಧೆಯನ್ನ ಗೆದ್ದು ಬೀಗಿದರು.

1ಕೆಜಿ 652 ಗ್ರಾಂ ತೂಕದ 6 ಮುದ್ದೆ ತಿಂದ ದಿಲೀಪ್ ದ್ವಿತೀಯ ಸ್ಥಾನ ಪಡೆದರೆ, 1ಕೆಜಿ 544 ಗ್ರಾಂ ತೂಕದ 6 ಮುದ್ದೆ ತಿಂದ ರವೀಂದ್ರ ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿ ಕೃಷಿ ಜಂಟಿ ನಿರ್ದೇಶಕ ಅಶೋಕ್ 7 ಮುದ್ದೆ ತಿಂದು ಸ್ಪರ್ಧಾಳುಗಳನ್ನ ಹುರಿದುಂಬಿಸಿದರು. ಸಾಂಪ್ರದಾಯಿಕ ಮಂಡ್ಯದ ಆಹಾರ ಪದ್ದತಿ ಉಳಿಸುವ ಉದ್ದೇಶದಿಂದ ರಾಗಿ ಮುದ್ದೆ ತಿನ್ನುವ ಸರ್ಧೆ ಆಯೋಜಿಸಲಾಗಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ