Monday, November 23, 2026

ಪ್ರಾಯೋಗಿಕ ಆವೃತ್ತಿ

99 ಅಡಿಗೆ ಇಳಿದ KRS ನೀರಿನ ಮಟ್ಟ

ತಮಿಳುನಾಡಿಗೆ ನಿರಂತರ ನೀರು ಹರಿಸುತ್ತಿರುವ ಪರಿಣಾಮ ಕೆಆರ್’ಎಸ್ ಜಲಾಶಯದ ನೀರಿನ ಮಟ್ಟ 99.86 ಅಡಿಗಿಳಿದಿದೆ. ಅಲ್ಲದೆ ಇನ್ನೂ ನೀರು ಹರಿಸುವಿಕೆ ಮುಂದುವರಿಯುತ್ತಿರುವ ಪರಿಣಾಮ ಮತ್ತಷ್ಟು ಅಡಿ ನೀರಿನ ಮಟ್ಟ ಕುಸಿತದ ಭೀತಿ ಉಂಟಾಗಿದ್ದು ಅಚ್ಚುಕಟ್ಟು ಪ್ರದೇಶದ ಕೃಷಿ ಹಾಗೂ ಕುಡಿಯುವ ನೀರಿನ ಅಭಾವ ಕುರಿತು ರೈತರಲ್ಲಿ ಆತಂಕ ಎದುರಾಗಿದೆ.

ಶನಿವಾರ ಬೆಳಿಗ್ಗೆ 8 ಗಂಟೆಯ ಕಾ.ನೀ.ನಿ.ದ ಮಾಹಿತಿಯಂತೆ, ನದಿ ಹಾಗೂ ನಾಲೆಗೆ 7128 ಕ್ಯೂಸೆಕ್ ನೀರಿನ ಹೊರಹರಿವು ಹಾಗೂ 2870 ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದೆ.

124.80 ಗರಿಷ್ಠ ಮಟ್ಟದ ಜಲಾಶಯದಲ್ಲಿ ಕಳೆದ ಜು.3 ರಂದು 78.30 ಅಡಿಯಿದ್ದ ನೀರಿನ ಮಟ್ಟ ಕೊಡಗಿನಲ್ಲಿ ಉತ್ತಮ ಮಳೆಯಾಗಿ 113 ಅಂದರೆ 35 ಅಡಿ ನೀರಿನ ಮಟ್ಟ ಏರಿಕೆ ಕಂಡಿತ್ತು. ಬಳಿಕ ನಾಲೆಗಿಂತ ನದಿಗೆ ಹೆಚ್ಚು ನೀರು ಹರಿಸಿದ ಪರಿಣಾಮ 14 ಅಡಿಯಷ್ಟು ನೀರಿನ ಮಟ್ಟ ಕುಸಿದಿದೆ.

ಕಳೆದ ವರ್ಷ ಇದೆ ದಿನ 124.56 ಅಡಿ ನೀರಿನ ಮಟ್ಟ, 26814 ಕ್ಯೂಸೆಕ್ ಒಳಹರಿವು ಹಾಗೂ 18529 ಕ್ಯೂಸೆಕ್ ಹೊರಹರಿವು ದಾಖಲಾಗಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ