ಮದ್ದೂರು ತಾಲೂಕು ಛಾಯಾ ಕ್ಷೇಮಾಭಿವೃದ್ಧಿ ಸಂಘದ 2021-22ನೇ ಸಾಲಿನ ಎರಡನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಎಂ.ಕೆ.ದರ್ಶನ್ ಗೌಡ ರವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ಜರುಗಿತು.
ನಂತರ 2022 ರಿಂದ 2025 ರ ಸಾಲಿನ ಕಾರ್ಯಕಾರಿ ಮಂಡಳಿಗೆ 15 ಜನ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿ ನಂತರ ನೂತನ ಕಾರ್ಯಕಾರಿ ಮಂಡಳಿ ರಚನೆಯಾಗಿ ಅಧ್ಯಕ್ಷರಾಗಿ ಜಿ.ಎಸ್. ಗುರುರಾಘವ, ಉಪಾಧ್ಯಕ್ಷರಾಗಿ ಯು.ಸಿ. ರಾಜಶೇಖರಮೂರ್ತಿ, ಕಾರ್ಯದರ್ಶಿಯಾಗಿ ಎಂ.ಆರ್. ರಾಜೇಶ್ ಖಜಾಂಚಿಯಾಗಿ ಎಂ.ಎಸ್. ನಟೇಶ್ ರವರು ಅವಿರೋಧವಾಗಿ ಆಯ್ಕೆಯಾದರು.
ಸಂಘದ ನೂತನ ಅಧ್ಯಕ್ಷರಾದ ಜಿ.ಎಸ್. ಗುರುರಾಘವ ಮಾತನಾಡಿ ಮುಂದಿನ ಎರಡು ವರ್ಷ ಸಂಘದ ಎಲ್ಲಾ ಸದಸ್ಯರ ಸರ್ವತೋಮುಖ ಅಭಿವೃದ್ಧಿಗಾಗಿ ಹಾಗೂ ಸಂಘದ ಏಳಿಗೆಗಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ಎಸ್. ಶ್ರೀಧರ್ ರವರು ನೂತನ ನಿರ್ದೇಶಕರುಗಳಾದ ಎಂ.ಸಿ. ಶಶಿಗೌಡ, ಹೆಚ್.ಆರ್. ಅನಿಲ್ ಕುಮಾರ್, ಭೈರವ, ಮಹೇಶ್, ಎಂ.ಎನ್. ಮಧು, ಹೇಮಂತ್, ಶಿವಪ್ರಸಾದ್, ಕುಮಾರ್, ಸಂಜಯ್ ಹಾಗೂ ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ನೆಚ್ಚಿನ ಸುದ್ದಿಗಳ ಓದಿಗಾಗಿ ನಮ್ಮ WhatsApp ಗ್ರೂಪ್ ಸೇರಲು 👇 ಈ ಲಿಂಕ್ ಮೇಲೆ ಸೇರಿರಿ.
https://chat.whatsapp.com/KWv6TFFjpipBRKbqUKkHKJ
ನಮ್ಮ ನುಡಿ ಕರ್ನಾಟಕ YouTube ಚಾನಲ್ ವೀಡಿಯೋ ಗಳನ್ನು ನೋಡಲು ಕೆಳಗಿನ ಲಿಂಕ್ ನ್ನು ಕ್ಲಿಕ್ ಮಾಡಿ..




