ಪಾಂಡವಪುರ ಪಟ್ಟಣದ ಶ್ರೀ ಬನ್ನಾರಿ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹ ಟ್ರೇಡರ್ಸ್ ಅಂಗಡಿಯ ಮುಂಭಾಗದಲ್ಲಿದ್ದ ಕಡಪ ಕಲ್ಲುಗಳು, ಸಿಮೆಂಟ್ ಕಿಟಕಿ ವಸ್ತುಗಳು, ಸಿಮೆಂಟ್ ಪೈಪುಗಳು, ಸಿಮೆಂಟ್ ತುಳಸಿ ಕಟ್ಟೆಗಳು ಸೇರಿದಂತೆ ಸಿಮೆಂಟ್ ತಯಾರಿಕಾ ಸಾಮಾಗ್ರಿಗಳನ್ನು ದುಷ್ಕರ್ಮಿಗಳು ಕಳೆದ ರಾತ್ರಿ ಹೊಡೆದು ಹಾಕಿದ್ದಾರೆ.
ದುಷ್ಕರ್ಮಿಗಳ ಈ ಕೃತ್ಯದಿಂದ ಸುಮಾರು 35 ಸಾವಿರಕ್ಕೂ ಹೆಚ್ಚು ರೂಗಳಷ್ಟು ನಷ್ಟ ಉಂಟಾಗಿದ್ದು,ಪೋಲಿಸರು ದುಷ್ಕರ್ಮಿಗಳ ಪತ್ತೆ ಹಚ್ಚುವಂತೆ ಲಕ್ಷ್ಮೀ ನರಸಿಂಹ ಟ್ರೇಡರ್ಸ್ ಮಾಲೀಕರು ಆಗ್ರಹಿಸಿದ್ಧಾರೆ.