Friday, September 20, 2024

ಪ್ರಾಯೋಗಿಕ ಆವೃತ್ತಿ

ಯುವ ದಸರಾ : ವಿದ್ಯಾರ್ಥಿ- ವಿದ್ಯಾರ್ಥಿನಿಯರಿಂದ ವರ್ಣರಂಜಿತ ಕಾರ್ಯಕ್ರಮ

ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಯುವದಸರಾ ಕಾರ್ಯಕ್ರಮ ಸೆ.29 ರಿಂದ ಅ.2 ರವರೆಗೆ ನಡೆಯಲಿದ್ದು, ಸೆ.29 ರಂದು ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ನೃತ್ಯ ಪ್ರದರ್ಶನ ಮತ್ತು ಸಮೂಹ ಗಾನ, ಮಂಡ್ಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸೆಮಿಕ್ಲಾಸಿಕಲ್ ನೃತ್ಯ ಮತ್ತು ಸಮೂಹ ಗಾನ ಕಾರ್ಯಕ್ರಮಗಳು ನಡೆಯಲಿವೆ.

ಪ್ರತಿದಿನ ಸಂಜೆ 5ಗಂಟೆಯಿಂದ 7ಗಂಟೆವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸೆ.29ರಂದು ಬಿ.ಜಿ ನಗರ ನಾಗಮಂಗಲ ಬಿ.ಜಿ.ಎಸ್. ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕ್ಲಾಸಿಕಲ್ ನೃತ್ಯ ಮತ್ತ ಭರತ ನಾಟ್ಯ, ಶ್ರೀರಂಗಪಟ್ಟಣ ಮಹಾರಾಜ ತಾಂತ್ರಿಕ ವಿದ್ಯಾಲಯದ ವತಿಯಿಂದ ನೃತ್ಯ ರೂಪಕ, ಪಾಂಡವಪುರ ತಾಲ್ಲೂಕಿನ ಎಸ್.ಇ.ಟಿ ಪಾಲಿಟೆಕ್ನಿಕ್ ಮೇಲುಕೋಟೆ ರವರ ವತಿಯಿಂದ ಸಾಮೂಹಿಕ ಗಾಯನ, ನೃತ್ಯ ಮತ್ತು ಸ್ಕಿಟ್, ಪಾಂಡವಪುರ ತಾಲ್ಲೂಕಿನ ಬೆಳಕು ಸ್ಕೂಲ್ ಆಫ್ ಆಟ್ರ್ಸ್ ವತಿಯಿಂದ ಭರತ ನಾಟ್ಯ ಕಾರ್ಯಕ್ರಮಗಳು ನಡೆಯಲಿವೆ.

ಸೆ.30ರಂದು ಮಂಡ್ಯ ನರ್ಸಿಂಗ್ ಕಾಲೇಜು ವತಿಯಿಂದ ಡ್ಯಾನ್ಸ್, ಎಸ್.ಡಿ ಜಯರಾಂ ನರ್ಸಿಂಗ್ ಕಾಲೇಜು ವತಿಯಿಂದ ಭರತ ನಾಟ್ಯ ಮತ್ತು ಜಾನಪದ ನೃತ್ಯ, ಮಂಡ್ಯ ಸ್ಯಾಂಜೋ ನರ್ಸಿಂಗ್ ಕಾಲೇಜು ವತಿಯಿಂದ ಶಾಸ್ತ್ರೀಯ ನೃತ್ಯ, ಪಾಶ್ಚಾತ್ಯ ನೃತ್ಯ, ಕೋಲಾಟ, ಕೇರಳ ಸಾಂಸ್ಕೃತಿಕ ನೃತ್ಯ ಮತ್ತು ಜಾರ್ಖಂಡ್ ಸಾಂಸ್ಕೃತಿಕ ನೃತ್ಯ, ಮಳವಳ್ಳಿ ಮೈಸೂರು ರಸ್ತೆ ವಿದ್ಯಾಪ್ಯಾರಾ ಮೆಡಿಕಲ್ ವಿಜ್ಞಾನ ಸಂಸ್ಥೆಯ ವತಿಯಿಂದ ಸಮೂಹ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಅ.1 ರಂದು ಮಂಡ್ಯ ಶಂಕರೇಗೌಡ ಬಿ.ಇಡಿ ಕಾಲೇಜು ವತಿಯಿಂದ ನಾಟಕ (ಜಲಗಾರ-ಕುವೆಂಪು), ಸೆಂಟ್ ಜೋಸೆಪ್ ಬಿ.ಇಡಿ ಕಾಲೇಜು ವತಿಯಿಂದ ಕಂಸಾಳೆ, ಪಾಂಡವಪುರ ಜಯಂತಿನಗರ ಶಂಭುಲಿಂಗೇಶ್ವರ ಬಿ.ಇಡಿ ಕಾಲೇಜು ವತಿಯಿಂದ ಪುನೀತ್ ರಾಜ್ ಕುಮಾರ್ ಥೀಮ್, ಮಂಡ್ಯ ಸರ್ಕಾರಿ ಮಹಿಳಾ ಕಾಲೇಜು ವತಿಯಿಂದ ಕನ್ನಡ ಮತ್ತು ಸಂಸ್ಕøತಿ ಜಾನಪದ ಕಲೆ, ಮಂಡ್ಯ ವಿಶ್ವವಿದ್ಯಾನಿಲಯದ ವತಿಯಿಂದ ಜಾನಪದ ಗೀತೆ ಮತ್ತು ರಂಗ ಗೀತೆ, ನಾಗಮಂಗಲ ಆದಿಚುಂಚನಗಿರಿ ಕಲೆ ಮತ್ತು ವಾಣಿಜ್ಯ ಕಾಲೇಜುರವರ ವತಿಯಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಎಸ್.ಟಿ.ಜಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ನೃತ್ಯ ಕಾರ್ಯಕ್ರಮ, ಪಾಂಡವಪುರ ವಿಜಯ ಪ್ರಥಮ ದರ್ಜೆ ಕಾಲೇಜು ವತಿಯಿಂದ ಜಾನಪದ ನೃತ್ಯ, ಶ್ರೀರಂಗಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಸ್ಯಾಕ್ಸೋ ಪೋನ್ ನುಡಿಸುವುದು, ಶ್ರೀರಂಗಪಟ್ಟಣ ಪರಿವರ್ತನ ಪ್ರಥಮ ದರ್ಜೆ ಕಾಲೇಜು ಜಾನಪದ ನೃತ್ಯ, ಪೂಜಾ ಕುಣಿತ, ವೀರಗಾಸೆ, ರಂಗಕುಣಿತ ಮತ್ತು ಪಟ್ಟಕುಣಿತ ಹಾಗೂ ಸಮರ್ಥನಂ ಟ್ರಸ್ಟ್ ವತಿಯಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ.

ಅ.2 ರಂದು ಪಾಂಡವಪುರ ತಾಲ್ಲೂಕಿನ ಚಿನಕುರಳಿಯ ಸರ್ಕಾರಿ ಪದವಿ ಕಾಲೇಜು ವತಿಯಿಂದ ಜಾನಪದ ನೃತ್ಯ, ಮಂಡ್ಯ ಕಾರ್ಮಲ್ ಪಿ.ಯು ಕಾಲೇಜು ವತಿಯಿಂದ ಭರತ ನಾಟ್ಯ ಮತ್ತು ಸೆಮಿ ಕ್ಲಾಸಿಕಲ್, ಮಂಡ್ಯ ಆದರ್ಶ ಪಿ.ಯು ಕಾಲೇಜು ವತಿಯಿಂದ ಸಮೂಹ ನೃತ್ಯ, ಮಂಡ್ಯ ರೋಟರಿ ಪಿ.ಯು ಕಾಲೇಜು ವತಿಯಿಂದ ಕರ್ನಾಟಕ ಸಾಂಸ್ಕøತಿಕ ವೈಭವ ನಡೆಯಲಿದೆ.

ಮಳವಳ್ಳಿ ಭಗವಾನ್ ಬುದ್ಧ ಪದವಿ ಪೂರ್ವ ಕಾಲೇಜು ವತಿಯಿಂದ ಜಾನಪದ ನೃತ್ಯ, ಮಳವಳ್ಳಿ ವಿದ್ಯಾವಿಕಾಸ ಶಾಲೆ ವತಿಯಿಂದ ಪುಲ್ವಾಮ ದಾಳಿ, ಶ್ರೀರಂಗಪಟ್ಟಣ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಜಾನಪದ ಆಧಾರಿತ ಸಮೂಹ ನೃತ್ಯ, ಶ್ರೀರಂಗಪಟ್ಟಣ ತಾಲ್ಲೂಕು ನಗುವಿನಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಬಿಂಬಿಸುವ ನೃತ್ಯ, ಮೈಸೂರು ಅದಮ್ಯ ರಂಗ ಶಾಲೆ ವತಿಯಿಂದ ನಾಟಕ `ಹಾಲೋ ಯಮ’ ಕಾರ್ಯಕ್ರಮಗಳು ನಡೆಯಲಿವೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!