Friday, November 20, 2026

ಪ್ರಾಯೋಗಿಕ ಆವೃತ್ತಿ

ಐತಿಹಾಸಿಕ ಶ್ರೀರಂಗಪಟ್ಟಣ ದಸರಾಗೆ ಸುತ್ತೂರುಶ್ರೀ ಚಾಲನೆ

ಐತಿಹಾಸಿಕ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಬುಧವಾರ ಸಂಜೆ ಅಧಿಕೃತವಾಗಿ ಚಾಲನೆಗೊಂಡಿತು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಚಾಮುಂಡೇಶ್ವರಿ ತಾಯಿಯ ವಿಗ್ರಹವನ್ನೊತ್ತ ಜಂಬೂಸವಾರಿಗೆ ಪುಷ್ಟಾರ್ಚನೆ ಮಾಡುವ ಮೂಲಕ ದಸರಾವನ್ನು ಉದ್ಘಾಟಿಸಿದರು.

ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಅವರ ಆರೋಗ್ಯದ ದೃಷ್ಠಿಯಿಂದ ದಸರಾ ಉದ್ಘಾಟನೆಗೆ ಆಹ್ವಾನಿಸಿಲ್ಲ, ನಾನು 1983ರಿಂದ ದೇವಗೌಡ ಜೊತೆ ಇದ್ದವನು, ಅವರ ಮೇಲೆ ಅಪಾರವಾದ ಗೌರವವಿದೆ, ಅವರ ಪೋಟೋವನ್ನು ಮನೆಯಲ್ಲಿಟ್ಟು ಪೂಜಿಸುತ್ತೇನೆ. ಅವರಿಗೆ ತಾಯಿ ಚಾಮುಂಡೇಶ್ವರಿ, ನಿಮಿಷಾಂಭದೇವಿ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸಿದರು.

ಅಂಬಾರಿ ಹೊತ್ತ ಮಹೇಂದ್ರನ ಜೊತೆ ಕಾವೇರಿ ಮತ್ತು ವಿಜಯ ಆನೆಗಳು ಹೆಜ್ಜೆ ಹಾಕಿದವು. ವೀರಗಾಸೆ, ಡೊಳ್ಳುಕುಣಿತ, ಟಮಟೆ, ಸೋಮನ ಕುಣಿತ, ನವಿಲು ಕುಣಿತ ಸೇರಿದಂತೆ ಹತ್ತಾರು ಕಲಾ ತಂಡಗಳ ಪ್ರದರ್ಶನ ಮನಸೂರೆಗೊಳಿಸಿತು.

ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್‍ನ ಬನ್ನಿಮಂಟಪದ ಬಳಿ ಗಜರಾಜ ಮಹೇಂದ್ರ ಮೇಲೆ ವಿರಾಜಮಾನಳಾದ ತಾಯಿ ಚಾಮುಂಡೇಶ್ವರಿಯ ಮರೆವಣಿಗೆ ನಡೆಯಿತು.

ರೇಷ್ಮೆ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ನಾರಾಯಣಗೌಡ, ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ, ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತಾ ಹುಲ್ಮನಿ, ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ರುದ್ರೆನ್, ಉಪವಿಭಾಗಾಧಿಕಾರಿಗಳಾದ ಬಿ.ಸಿ ಶಿವಂದಾಮೂರ್ತಿ, ಆರ್.ಐಶ್ವರ್ಯ, ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸೆ.29ರ ದಸರಾ ಕಾರ್ಯಕ್ರಮಗಳ ವಿವರ

ಶ್ರೀರಂಗಪಟ್ಟಣ ದಸರಾ ಮಹೋತ್ಸವದ ಅಂಗವಾಗಿ ಸೆ.29 ರಂದು ನಡೆಯುವ ಕಾರ್ಯಕ್ರಮದ ವಿವರ ಇಂತಿದೆ. ಬೆಳಿಗ್ಗೆ 6 ಗಂಟೆಗೆ ಕರಿಘಟ್ಟ ದೇವಸ್ಥಾನದ ಪಾದದಿಂದ ದೇವಸ್ಥಾನದ ಮೇಲ್ಭಾಗದವರಿಗೆ ಚಾರಣ ನಡೆಯಲಿದೆ.

ಬೆಳಿಗ್ಗೆ 10 ಗಂಟೆಗೆ ಶ್ರೀರಂಗಪಟ್ಟಣ ತಾಲ್ಲೂಕು ಕ್ರೀಡಾಂಗಣದಲ್ಲಿ ಕಬ್ಬಡಿ, ಖೋ ಖೋ ವಾಲಿಬಾಲ್ ಸ್ಪರ್ಧೆಗಳು ನಡೆಯಲಿದೆ.  ಬೆಳಿಗ್ಗೆ 9 ರಿಂದ 10 ರವರೆಗೆ ಶ್ರೀರಂಗ ವೇದಿಕೆಯಲ್ಲಿ‌ ಸ್ಥಳೀಯ ಕಲಾವಿದರಾದ ಹೆಚ್. ಹೆಚ್. ಮಂಜುನಾಥ್, ಶ್ರೀ ಜಗದ್ಗುರು ರೇವಣ್ಣ ಸಿದ್ದೇಶ್ವರ ರವರಿಂದ ತತ್ವಪದ,ಜಾನಪದ ಗೀತೆ, ಭಾವಗೀತೆ, ದಾಸರ ಪದಗಳು, ಮಂಡ್ಯದ ಸಂತೆ ಕಸಲಗೆರೆಯಿಂದ ಬಸವರಾಜು, ಶಿವಗಂಗಾ ಸಾಂಸ್ಕøತಿಕ ಯುವಕರ ಸಂಘದ ವತಿಯಿಂದ ಜಾನಪದ ಗೀತೆ ಕಾರ್ಯಕ್ರಮಗಳು ನಡೆಯಲಿವೆ.

ರೈತ ದಸರಾ

ಬೆಳಿಗ್ಗೆ 10 ಗಂಟೆಯಿಂದ 3 ಗಂಟೆಯವರೆಗೆ ಶ್ರೀರಂಗ ವೇದಿಕೆಯಲ್ಲಿ ರೈತ ದಸರಾನಡೆಯಲಿದೆ. ಕೃಷಿ ಇಲಾಖೆ, ರೇಷ್ಮೆ ಇಲಾಖೆ, ಮೀನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ ವತಿಯಿಂದ ಮಂಡ್ಯ ವಿ.ಸಿ.ಫಾರಂ, ವಲಯ ಕೃಷಿ ಸಂಶೋಧನಾ ಕೇಂದ್ರ ಪ್ರಾಧ್ಯಾಪಕ ಡಾ.ಕೇಶವಯ್ಯ ಮತ್ತು ಆಹಾರ ಸುರಕ್ಷತೆ ಗುಣಮಟ್ಟ ಪ್ರಧಿಕಾರ ಜಿಲ್ಲಾ ಅಂಕಿತ ಅಧಿಕಾರಿ ಡಾ.ಬೆಟ್ಟ ಸ್ವಾಮಿ ಅವರಿಂದ ಕಬ್ಬು ಕೃಷಿಯಲ್ಲಿ ಆಧುನಿಕ ತಂತ್ರ್ರ ಜ್ಞಾನಗಳ ಅಳವಡಿಕೆ, “ಕಬ್ಬಿನ ಸುಸ್ಥಿರ ಬೇಸಾಯ ಪದ್ಧತಿ”(”(SSI-Sustainable Sugarcane Initiative) ಸಾವಯವ, ರಾಸಯನಿಕ ಮುಕ್ತ ಗುಣಮಟ್ಟದ ಬೆಲ್ಲ, ತಯಾರಿಕೆ ಸಂಬಂಧ ಉಪನ್ಯಾಸ ನಡೆಯಲಿದೆ.

ಯುವ ದಸರಾ

ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವತಿಯಿಂದ ನೃತ್ಯ ಪ್ರದರ್ಶನ ಮತ್ತು ಸಮೂಹ ಗಾನ, ಮಂಡ್ಯ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜು ವತಿಯಿಂದ ಸೆಮಿಕ್ಲಾಸಿಕಲ್ ನೃತ್ಯ ಮತ್ತು ಸಮೂಹ ಗಾನ, ಬಿ.ಜಿ ನಗರ ನಾಗಮಂಗಲ ಬಿ.ಜಿ.ಎಸ್. ಇನ್ಸ್‍ಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕ್ಲಾಸಿಕಲ್ ನೃತ್ಯ ಮತ್ತ ಭರತ ನಾಟ್ಯ, ಶ್ರೀರಂಗಪಟ್ಟಣ ಮಹಾರಾಜ ತಾಂತ್ರಿಕ ವಿದ್ಯಾಲಯದ ವತಿಯಿಂದ ನೃತ್ಯ ರೂಪಕ ಕಾರ್ಯಕ್ರಮ ನಡೆಯಲಿವೆ.

ಪಾಂಡವಪುರ ತಾಲ್ಲೂಕಿನ ಎಸ್.ಇ.ಟಿ ಪಾಲಿಟೆಕ್ನಿಕ್ ಮೇಲುಕೋಟೆ ರವರ ವತಿಯಿಂದ ಸಾಮೂಹಿಕ ಗಾಯನ, ನೃತ್ಯ ಮತ್ತು ಸ್ಕಿಟ್, ಪಾಂಡವಪುರ ತಾಲ್ಲೂಕಿನ ಬೆಳಕು ಸ್ಕೂಲ್ ಆಫ್ ಆಟ್ರ್ಸ್ ವತಿಯಿಂದ ಭರತ ನಾಟ್ಯ (ಶ್ರೀಮತಿ ಇಂಧೂಶ್ರೀ), ನಡೆಯಲಿದೆ.

ರಾತ್ರಿ 7 ಗಂಟೆಗೆ ಶಿವಮೊಗ್ಗ ದೀಪಿಕಾ ರವರಿಂದ ಸುಗಮ ಸಂಗೀತ ಹಾಗೂ ಅರ್ಜುನ್ ಜನ್ಯ ಮತ್ತು ತಂಡ ಹಾಗೂ ಮಂಗಲಿ ಮತ್ತು ತಂಡದಿಂದ ಕಾರ್ಯಕ್ರಮಗಳು ನಡೆಯಲಿವೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ