Monday, May 6, 2024

ಪ್ರಾಯೋಗಿಕ ಆವೃತ್ತಿ

ಸಂಸತ್ ಮೇಲಿನ ದಾಳಿ ಬೆನ್ನಲ್ಲೇ ಲೋಕಸಭೆಯಿಂದ 14 ವಿರೋಧ ಪಕ್ಷದ ಸಂಸದರ ಅಮಾನತು

ಸಂಸತ್ತಿನಲ್ಲಿ ಭಾರೀ ಭದ್ರತಾ ಲೋಪ ಉಂಟಾದ ಒಂದು ದಿನದ ನಂತರ ಸದನದ ಕಲಾಪಕ್ಕೆ ಅಡ್ಡಿಪಡಿಸಿದ ಕಾರಣಕ್ಕಾಗಿ ಗುರುವಾರ ಒಟ್ಟು 14 ಪ್ರತಿಪಕ್ಷ ಸಂಸದರನ್ನು ಲೋಕಸಭೆಯಿಂದ ಮತ್ತು ಒಬ್ಬ ಸದಸ್ಯರನ್ನು  ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ.

ಅಮಾನತುಗೊಂಡಿರುವ 14 ಸಂಸದರ ಪೈಕಿ ಒಂಬತ್ತು ಮಂದಿ ಕಾಂಗ್ರೆಸ್‌ ಪಕ್ಷದವರು, ಇಬ್ಬರು ಸಿಪಿಎಂ, ಒಬ್ಬರು ಸಿಪಿಐ ಮತ್ತು ಇಬ್ಬರು ಡಿಎಂಕೆ ಪಕ್ಷದವರಾಗಿದ್ದಾರೆ. ತೃಣಮೂಲ ಕಾಂಗ್ರೆಸ್ ಪಕ್ಷ ಸಂಸದ ಡೆರೆಕ್ ಒ’ಬ್ರೇನ್ ಅವರನ್ನು ಮೊನ್ನೆಯಷ್ಟೆ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು.

ಕಾಂಗ್ರೆಸ್ ಸಂಸದರಾದ ಮಾಣಿಕಂ ಟ್ಯಾಗೋರ್, ಎಂಡಿ ಜಾವೇದ್, ವಿಕೆ ಶ್ರೀಕಂದನ್, ಬೆನ್ನಿ ಬೆಹನನ್, ಡಿಎಂಕೆ ಸಂಸದರಾದ ಕೆ ಕನಿಮೋಳಿ ಮತ್ತು ಎಸ್‌ಆರ್ ಪಾರ್ಥಿಬನ್, ಸಿಪಿಎಂ ಸಂಸದರಾದ ಪಿಆರ್ ನಟರಾಜನ್ ಮತ್ತು ಎಸ್ ವೆಂಕಟೇಶನ್ ಮತ್ತು ಸಿಪಿಐ ಸಂಸದ ಕೆ ಸುಬ್ಬರಾಯನ್ ಅಮಾನತುಗೊಂಡವರಲ್ಲಿ ಸೇರಿದ್ದಾರೆ.

ಏತನ್ಮಧ್ಯೆ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒಬ್ರಿಯಾನ್ ಅವರನ್ನು ಈ ಅಧಿವೇಶನದ ಉಳಿದ ಅವಧಿಗೆ “ಅಶಿಸ್ತಿನ ವರ್ತನೆ”ಗಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಆದರೆ, ಅವರು  ಅಮಾನತು ಗೊಂಡಿದ್ದರೂ ಸದನದಿಂದ ಹೊರಬರಲು ನಿರಾಕರಿಸಿದರು ಮತ್ತು ಬಿಜೆಪಿಯ ಪಿಯೂಷ್ ಗೋಯಲ್ ಅವರು ಈ ವಿಷಯವನ್ನು ಸದನದ ವಿಶೇಷಾಧಿಕಾರ ಸಮಿತಿಗೆ ಕಳುಹಿಸಿದ್ದಾರೆ.

ಈ ಬಗ್ಗೆ ಕಾಂಗ್ರೆಸ್ ರಾಜ್ಯಸಭಾ ಸಂಸದ ಕೆಸಿ ವೇಣುಗೋಪಾಲ್ ಪ್ರತಿಕ್ರಿಯಿಸಿ, ಸಂಸದನ್ನು ಅಮಾನತು  ಮಾಡಿರುವುದು “ಭಯಾನಕ, ಪ್ರಜಾಪ್ರಭುತ್ವ ವಿರೋಧಿ ಕ್ರಮ” ಎಂದು ಖಂಡಿಸಿದ್ದಾರೆ.

“ನಿನ್ನೆ ಸಂಸತ್ತಿನಲ್ಲಿ ಆಘಾತಕಾರಿ ಭದ್ರತಾ ಲೋಪದ ಬಗ್ಗೆ ಸರ್ಕಾರದಿಂದ ಉತ್ತರವನ್ನು ಕೋರಿದ್ದಕ್ಕಾಗಿ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಭಯಾನಕ, ಅಪ್ರಜಾಸತ್ತಾತ್ಮಕ ನಡೆ ಒಂದೆಡೆ, ಉತ್ತರದಾಯಿತ್ವಕ್ಕೆ ಒತ್ತಾಯಿಸಿ ಐವರು ಸಂಸದರನ್ನು ಅಮಾನತುಗೊಳಿಸಲಾಗಿದೆ ಮತ್ತೊಂದೆಡೆ, ಅದರ ವಿರುದ್ಧ ಯಾವುದೇ ಕ್ರಮವಿಲ್ಲ. ಕಿಡಿಗೇಡಿಗಳ ಪ್ರವೇಶಕ್ಕೆ ಅನುಕೂಲ ಮಾಡಿಕೊಟ್ಟ ಬಿಜೆಪಿ ಸಂಸದನ ಮೇಲೆ ಯಾವುದೇ ಕ್ರಮವಿಲ್ಲ, ಇದು ಪ್ರಜಾಪ್ರಭುತ್ವದ ಕೊಲೆ, ಬಿಜೆಪಿ ಸರ್ಕಾರ ಸಂಸತ್ತನ್ನು ರಬ್ಬರ್ ಸ್ಟಾಂಪ್‌ಗೆ ಇಳಿಸಿದೆ. ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ನೆಪವೂ ಉಳಿದಿಲ್ಲ ಎಂದು ಅವರು ಟ್ವೀಟರ್ ನಲ್ಲಿ ಬರೆದು ಕಿಡಿಕಾರಿದ್ದಾರೆ.

“>

ಹಿಂದಿನ ದಿನ, ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಐದು ಕಾಂಗ್ರೆಸ್ ಸಂಸದರಾದ ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಅವರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ನಿರ್ಣಯವನ್ನು ಮಂಡಿಸಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

“ಈ ಸದನವು ಸಂಸದರ ಅಧಿಕಾರವನ್ನು ಸಂಪೂರ್ಣವಾಗಿ ಕಡೆಗಣಿಸಿ, ಟಿಎನ್ ಪ್ರತಾಪನ್, ಹೈಬಿ ಈಡನ್, ಜೋತಿಮಣಿ, ರಮ್ಯಾ ಹರಿದಾಸ್ ಮತ್ತು ಡೀನ್ ಕುರಿಯಾಕೋಸ್ ಕುರ್ಯಕಸ್ ಅವರ ದುರ್ವರ್ತನೆ ಎಂದು ಪರಿಗಣಿಸಿದೆ, ಈ ಬಗ್ಗೆ ಸಭಾಪತಿಯಿಂದ ಹೆಸರಿಸಲ್ಪಟ್ಟಿದೆ ಎಂದು ವೇಣುಗೋಪಾಲ್ ಪ್ರತಿಕ್ರಿಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!