Friday, September 20, 2024

ಪ್ರಾಯೋಗಿಕ ಆವೃತ್ತಿ

ಭಾರತ್ ಜೋಡೋ ಪಾದಯಾತ್ರೆ ಯಶಸ್ವಿಗೆ ಮನವಿ

ಭಾರತ್ ಜೋಡೋ ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖ‌ಂಡರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಪರಿಶಿಷ್ಟ ಜಾತಿ ಮತ್ತು ಪಂಗಡದ ಕಾಂಗ್ರೆಸ್ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ ಮನವಿ ಮಾಡಿದರು.

ಮದ್ದೂರು ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ 8 ಜಿಲ್ಲೆಗಳಲ್ಲಿ 511 ಕೀ.ಮೀ. ದೂರ 21 ದಿನಗಳು ಪಾದಯಾತ್ರೆ ನಡೆಯಲಿದೆ. ಶುಕ್ರವಾರ ಚಾಮರಾಜನಗರ ಜಿಲ್ಲೆಗೆ ಬರಲಿದೆ ಅಕ್ಟೋಬರ್ 3ಕ್ಕೆ ಜಿಲ್ಲೆಯ ಗಡಿಭಾಗ ಶ್ರೀರಂಗಪಟ್ಟಣಕ್ಕೆ ಪಾದಯಾತ್ರೆ ಬರಲಿದ್ದು, ಪಾದಯಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಮುಖಂಡರು ಭಾಗವಹಿಸುವ ಮೂಲಕ ಅಭೂತಪೂರ್ವ ಯಶಸ್ಸು ತಂದುಕೊಡಬೇಕು ಎಂದು ಮನವಿ ಮಾಡಿದರು.

ಮದ್ದೂರು ವಿಧಾನ ಸಭಾ ಕ್ಷೇತ್ರದಿಂದ ಅಂದಾಜು 35,000 ಸಾವಿರ ಜನ ಪಾಲ್ಗೊಳ್ಳಲಿದ್ದಾರೆ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯ 5000 ಜನ ಭಾಗವಹಿಸಲಿದ್ದಾರೆ ಎಂದರು. ದೇಶದ ಯುವಶಕ್ತಿಗೆ ಉದ್ಯೋಗಾವಕಾಶ ಒದಗಿಸಲು,ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆದು ದೇಶದ ಜನರಲ್ಲಿ ಹಸಿವು ನೀಗಿಸಲು, ದೇಶದಲ್ಲಿ ಶಾಂತಿ, ಸಾಮರಸ್ಯ ಕಾಪಾಡಲು, ನಮ್ಮ ಅನ್ನದಾತನ ಬದುಕು ಭದ್ರಪಡಿಸುವುದು ರಾಹುಲ್ ಗಾಂಧಿಯವರ ಪಾದಯಾತ್ರೆಯ ಮೂಲ ಉದ್ದೇಶವಾಗಿದೆ ಎಂದರು.

ಸಭೆಯಲ್ಲಿ ತಿಮ್ಮಯ್ಯ, ಪ್ರಸನ್ನಕುಮಾರ್, ದೀಪಕ್ ಕುಮಾರ್, ವಿನಯ್, ರಾಮು, ಈಶ್ವರ್. ಚಾಮನಹಳ್ಳಿ ಕುಮಾರ್. ಪ್ರಕಾಶ್, ಸಾಗರ್,ನಾಗಭೂಷಣ್, ವಿಜಯ್, ಶಿವೇಂದ್ರಕುಮಾರ್, ರಾಮಣ್ಣ,ಮಹದೇವ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!