Tuesday, November 24, 2026

ಪ್ರಾಯೋಗಿಕ ಆವೃತ್ತಿ

ಭಾರತ ಜೋಡೋ ಯಾತ್ರೆಯ ವಿಶಿಷ್ಟ ಪ್ರಚಾರ


  • 5 ಸಾವಿರ ಟಿ-ಶರ್ಟ್- 10 ಸಾವಿರ ಕ್ಯಾಪ್ ವಿತರಣೆಗೆ ಸಿದ್ದ

  • ಕಾರುಗಳಲ್ಲಿ ಮಿಂಚಿದ ಕಾಂಗ್ರೆಸ್ ನಾಯಕರ ಭಾವಚಿತ್ರಗಳು

ಮಂಡ್ಯದಲ್ಲಿ ಜೋಡೋ ಮೇನಿಯಾ ಶುರುವಾಗಿದೆ. ಭಾರತ ಐಕ್ಯತಾ ಯಾತ್ರೆಯ, ಮಂಡ್ಯ ಜಿಲ್ಲಾ ಸಮಿತಿ ಸದಸ್ಯರಾದ ಎಂ.ಜೆ.ಸಿದ್ದರೂಡ ಅವರು ವಿಶೇಷ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದಾರೆ.

ತಮ್ಮ ಫಾರ್ಚುನರ್ ವಾಹನಕ್ಕೆ  ಎಐಸಿಸಿ ವರಿಷ್ಠ ರಾಹುಲ್ ಗಾಂಧಿ, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ವಿರೋಧ ಪಕ್ಷದ ನಾಯಕರದ ಸಿದ್ದರಾಮಯ್ಯ ಭಾವಚಿತ್ರದ ಸ್ಟಿಕ್ಕರ್ ಹಾಕಿಕೊಂಡು ಪ್ರಚಾರ ಕೈಗೊಂಡಿದ್ದಾರೆ.

ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ  ಕಾರ್ಯಕರ್ತರಿಗೆ  ಕಾಂಗ್ರೆಸ್ ನಾಯಕರ ಚಿತ್ರಗಳನ್ನು ಒಳಗೊಂಡ  5,000 ಟಿ-ಶರ್ಟ್, 10,000  ಕ್ಯಾಪ್ (ಟೋಪಿ), 20,000 ನೀರಿನ ಬಾಟಲ್ ಗಳನ್ನು ವಿತರಣೆ ಮಾಡಲು ಸಜ್ಜುಗೊಳಿಸಲಾಗಿದೆ. ಅಲ್ಲದೇ ಯಾತ್ರೆ ಬಗ್ಗೆ ಜನರಿಗೆ ತಿಳಿಸಲು ಆಟೋದಲ್ಲಿ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ.

ಈ ಸಂದರ್ಭದಲ್ಲಿ ಮಂಡ್ಯ ಜಿಲ್ಲಾ ಸಮಿತಿ ಸದಸ್ಯ ಎಂ.ಜೆ.ಸಿದ್ದರೂಡ ಮಾತನಾಡಿ. ನಮ್ಮ ಎಐಸಿಸಿ ವರಿಷ್ಠರಾದ ರಾಹುಲ್ ಗಾಂಧಿ ಅವರು ಭವಿಷ್ಯದ ಬಗ್ಗೆ ಆತಂಕಗೊಂಡಿರುವ ದೇಶದ ಯುವಕ ಯುವತಿಯರಿಗೆ ಉದ್ಯೋಗ ಒದಗಿಸುವ ಉದ್ಧೇಶದಿಂದ ಭಾರತ ಜೋಡೋ ಯಾತ್ರೆ ಕೈಗೊಂಡಿದ್ದಾರೆ ಎಂದರು.

ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಿ ಜನ ಸಾಮಾನ್ಯರಿಗೆ ಅನುಕೂಲ ಮಾಡಿ ಕೊಡುವುದು, ದೇಶದಲ್ಲಿ ಶಾಂತಿ ಸಾಮರಸ್ಯ ಕಾಪಾಡಿ, ಭ್ರಷ್ಟಾಚಾರ ಕಡಿವಾಣ ಹಾಕಿ, ರೈತರಿಗೆ ಭದ್ರತೆ ಒದಗಿಸಲು ರಾಹುಲ್ ಗಾಂಧಿ ಆವರು ಕನ್ಯಾಕುಮಾರಿ ಇಂದ ಕಾಶ್ಮೀರವರಾದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದರು.

ಮಂಡ್ಯಕ್ಕೆ ಅ.3ರಂದು ಜೋಡೋ ಯಾತ್ರೆ ಬರಲಿದೆ,  ನಮ್ಮ ನಾಯಕರು ವಿಶ್ವಾಸ ಇರಿಸಿ ಜಿಲ್ಲಾ ಜೋಡೋ ಯಾತ್ರೆಯ ಸದಸ್ಯರನ್ನಾಗಿ ಮಾಡಿದ್ದಾರೆ, ಇದಕ್ಕೆ ನಾನು ಕೂಡ ಕೈಲಾದ ಮಟ್ಟಕ್ಕೆ ಸ್ಪಂದಿಸಬೇಕೆಂದು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಹಸ್ರಾರು ಮಂದಿಗೆ ಮೂರು ದಿನವೂ  ಕಬ್ಬಿನ ಹಾಲು ವಿತರಣೆ ವ್ಯವಸ್ಥೆ ಮಾಡುತ್ತಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಮುಖಂಡರಾದ ಅಶೋಕ್, ಅಂಜನ ಶ್ರೀಕಾಂತ್, ವಿಜಯ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ