Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಂಗಾಂಗ ದಾನ ಮಾಡಿ ಮತ್ತೊಬ್ಬರಿಗೆ ನೆರವಾಗಿ : ಕಂಬದಹಳ್ಳಿ ಪುಟ್ಟಸ್ವಾಮಿ

ರಕ್ತದಾನ ಮಾಡುವ ಮೂಲಕ ತುರ್ತು ಸಂದರ್ಭದಲ್ಲಿ ನೆರವಾಗಬೇಕು, ನಾವು ಸತ್ತ ನಂತರ ದೇಹದ ಅಂಗಾಂಗಗಳು ಮಣ್ಣಿನಲ್ಲಿ ಮಣ್ಣು ಮಾಡುವ ಬದಲು ಬೇರೊಬ್ಬರಿಗೆ ನೆರವಾಗುವ ನಿಟ್ಟಿನಲ್ಲಿ ಸಾಗಬೇಕು ಎಂದು ಶ್ರೀಪ್ರಸನ್ನ ಲಕ್ಷ್ಮೀವೆಂಕಟೇಶ್ವರ ಸೇವಾ ಟ್ರಸ್ಟ್‌ ಅಧ್ಯಕ್ಷ ಕಂಬದಹಳ್ಳಿ ಪುಟ್ಟಸ್ವಾಮಿ ಸಲಹೆ ನೀಡಿದರು.

ಮಂಡ್ಯ ತಾಲ್ಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀವೆಂಕಟೇಶ್ವರ ಸೇವಾ ಟ್ರಸ್ಟ್‌, ಗ್ರಾಮ ಪಂಚಾಯಿತಿ ಕಂಬದಹಳ್ಳಿ, ಶ್ರೀ ಆದಿಚುಂಚನಗಿರಿ ವೈದ್ಯಕೀಯ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ನಡೆದ ಬೃಹತ್‌ ರಕ್ತದಾನ ಮತ್ತು ನೇತ್ರದಾನ ಶಿಬಿರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಆಕಸ್ಮಿಕವಾಗಿ ಮರಣ ಹೊಂದಿದ ಚಿಕ್ಕಮಗಳೂರಿನಲ್ಲಿ  ಯುವತಿಯ ಅಂಗಾಂಗಗಳನ್ನು ಒಂಬತ್ತು ಜನರಿಗೆ ದಾನ ಮಾಡಲಾಯಿತು. ಆ ಕುಟುಂಬವು ಆ ದುಃಖದಲ್ಲಿಯೂ ದೊಡ್ಡತನ ಮೆರೆದರು. ಅದರಲ್ಲಿ ಅವರ ಮಾನವೀಯತೆಯನ್ನು ಪ್ರತಿಯೊಬ್ಬರೂ ಶ್ಲಾಘಿಸಬೇಕು. ಇಂತಹ ಮಾನವೀಯತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಶ್ಲಾಘಿಸಿದರು. ನೇತ್ರದಾನಕ್ಕೆ ಮೊದಲಿಗರಾಗಿ ಕಂಬದಹಳ್ಳಿ ಪುಟ್ಟಸ್ವಾಮಿ ಹೆಸರು  ನೋಂದಣಿ ಮಾಡಿಕೊಂಡರು.

ಬೇಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಅಶ್ವಿನಿ ಮಾತನಾಡಿ, ಗಾಂಧೀಜಿ ಅವರ ಆಸೆಯಂತೆ ತಂಬಾಕು ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂಬ ನಿಲುವನ್ನು ತಾಳಿದ್ದೇವೆ, ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ಹಿರಿಯರ ಆರೋಗ್ಯ ದೃಷ್ಟಿಯಿಂದ ತಂಬಾಕು ಚಟದಿಂದ ದೂರ ಇರಬೇಕು. ತಂಬಾಕು ಚಟದಿಂದ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್‌ ರೋಗ ಸೇರಿದಂತೆ ಮಾರಣಾಂತಿಕ ರೋಗಗಳಿಗೆ ತುತ್ತಾಗಬೇಕಾಗುತ್ತದೆ. ಹಾಗಾಗಿ ತಂಬಾಕು ಮುಕ್ತ ಗ್ರಾಮಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ 28 ಯೂನಿಟ್‌ ರಕ್ತ ಸಂಗ್ರಹಿಸಿದರೆ ಬರೋಬ್ಬರಿ 48 ಜನರು ನೇತ್ರದಾನ ನೋಂದಣಿ ಮಾಡಿಸಿಕೊಂಡು ಹಿರಿಮೆ ಮೆರೆದ ಗ್ರಾಮಸ್ಥರು. ಕಾರ್ಯಕ್ರಮದಲ್ಲಿ ಕಂಬದಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೆಂಕಟೇಶ್, ಪ್ರಸನ್ನ ಸೇವಾ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಕುಮಾರ್‌ಗೌಡ, ತಂಬಾಕು ಜಿಲ್ಲಾ ನಿಯಂತ್ರಣಾಧಿಕಾರಿ ತಿಮ್ಮರಾಜು, ಡಾ.ವಿಜಯ್‌ ಹೂಗಾರ್, ಡಾ.ಫಿರ್ದೂಸ್‌, ಗ್ರಾಮ ಪಂಚಾಯಿತಿ ಸದಸ್ಯರಾದ ರಂಜಿತಾ, ತಾಯಮ್ಮ, ಹೇಮಲತಾ, ನಾಗರಾಜು, ನಾಗೇಶ್‌ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!