ಮೈಸೂರು ರಾಜಮನೆತನದ ತ್ಯಾಗ-ಕೊಡುಗೆ ಅವಿಸ್ಮರಣೀಯ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು.
ಮಂಡ್ಯ ನಗರದಲ್ಲಿರುವ ಕರ್ನಾಟಕಸಂಘದ ಕೆ.ವಿ.ಎಸ್.ಎಸ್.ಭವನದಲ್ಲಿ ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಆಯೋಜಿಸಿದ್ದ ವೈದ್ಯರು-ಅಭಿಯಂತರರು-ಶಿಕ್ಷಕರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಳೇ ಮೈಸೂರು ಪ್ರಾಂತ್ಯದ ಜನತೆ ನೆಮ್ಮದಿಯಾಗಿರಲು ಒಡೆಯರ್ ರಾಜಮನೆತದ ಕೊಡುಗೆ-ತ್ಯಾಗ ಮಾದರಿಯಾಗಿದೆ, ಇಂತಹವರ ಆಡಳಿತದಲ್ಲಿ ನಾಡಿನ ಜನತೆ ಪ್ರಗತಿ ಕಾಣುತ್ತಿರುವುದು ಸೌಭಾಗ್ಯ ಎಂದು ಸ್ಮರಿಸಿದರು.
ಅಕ್ಷರ ಮತ್ತು ಆರೋಗ್ಯ ಇಂದಿನ ಜನತೆಗೆ ಅತ್ಯವಶ್ಯಕ, ಯಾವುದೇ ದೇಶ-ನಾಡಿಗೆ ಅಕ್ಷರ-ಆರೋಗ್ಯ ಯೋಜನೆಗಳು ಅಮೂಲ್ಯವಾದರೆ ದೃಡವಾದ ಜನರು ಮತ್ತು ಸರ್ಕಾರ ಸೌಖ್ಯವಾಗಿರುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶಾಸಕ ಮಧು ಜಿ.ಮಾದೇಗೌಡ, ಮಂಡ್ಯ ಮಧುರ ಲಯನ್ಸ್ ಸಂಸ್ಥೆ ಅಧ್ಯಕ್ಷೆ ಸಿ.ತಾಗರಾಜು, ಸಾರ್ವಜನಿಕ ಸಂಪರ್ಕ ಜಿಲ್ಲಾಧ್ಯಕ್ಷ ಕೆ.ಎಲ್.ರಾಜಶೇಖರ್, ಆಡಳಿತಾಧಿಕಾರಿ ಆನಂದ್, ಡಾ.ಎನ್.ಕೃಷ್ನೇಗೌಡ, ಸನ್ಮಾನಿತರಾದ ಶಿಕ್ಷಕ ಜನಾರ್ಧನಕೊಂಡ್ಲಿ, ಮಕ್ಕಳ ತಜ್ಞ ಡಾ.ಗೋಪಾಲಕೃಷ್ಣ ಗುಪ್ತ, ಅಭಿಯಂತರರಾದ ಜಗದೀಶ್,ಜಯರಾಮಯ್ಯ, ಕಾರ್ಯದರ್ಶಿ ಸಿದ್ದರಾಮೇಗೌಡ, ಖಜಾಂಚಿ ದೇವೇಗೌಡ ಮತ್ತಿತರರಿದ್ದರು.




