ಮಳವಳ್ಳಿ ತಾಲ್ಲೂಕಿನ ದುಗ್ಗನಹಳ್ಳಿ ಕೃಷಿ ಪತ್ತಿನಸಹಕಾರ ಸಂಘದಲ್ಲಿ ಅವ್ಯವಹಾರ ನಡೆದಿರುವ ಅನುಮಾನವಿದ್ದು, ಕೂಡಲೇ ಮೇಲ್ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘದ ನಿರ್ದೇಶಕರು ಹಾಗೂ ಷೇರುದಾರರು ಆಗ್ರಹಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ದುಗ್ಗನಹಳ್ಳಿ ಪ್ರಾಥಮಿಕ ಕೃಷಿ
ಪತ್ತಿನ ಸಹಕಾರ ಸಂಘದ ಷೇರುದಾರ ವೀರಭದ್ರ ಮಾತನಾಡಿ, ಸಂಘದ ಸಿಇಓ ಟಿ.ರಾಜು ಅವರು
ಸಂಘವನ್ನು ಅಭಿವೃದ್ದಿ ಪಡಿಸಲು ಬಂದಿದ್ದಾರೋ ಅಥವಾ ರಾಜಕೀಯ ಮಾಡಲು ಬಂದಿದ್ದಾರೋ
ತಿಳಿಯದಂತಾಗಿದೆ. ಸರ್ವಾಧಿಕಾರಿಯಂತೆ ವರ್ತನೆ ತೋರುವ ರಾಜುರವರು ಸರ್ವ ಸದಸ್ಯರ ಸಭೆಯಲ್ಲಿ
ಅಧ್ಯಕ್ಷರು, ನಿರ್ದೇಶಕರು ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ನಾನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳುತ್ತಾರೆಂದು ದೂರಿದರು.
ಟಿ.ರಾಜುರವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಸಂಘದ ನಿರ್ದೇಶಕರನ್ನು ಇಬ್ಬಾಗ ಮಾಡಿದ್ದಾರೆ. ಸಂಘದ ವತಿ ಯಿಂದ 32 ಲಕ್ಷ ರೂ. ವೆಚ್ಚದಲ್ಲಿ ಗೋದಾಮು, ಸಭಾಂಗಣ ಹಾಗೂ ಕಚೇರಿಯ ನೂತನ
ಕಟ್ಟಡ ನಿರ್ಮಾಣ ಮತ್ತು ಉದ್ಘಾಟನೆ ಸಂಬಂಧ ಸಾಮಾನ್ಯ ಸಭೆಯಲ್ಲಿ ಯಾವುದೇ ಚರ್ಚೆ
ನಡೆಸಿಲ್ಲ, ಸರ್ವ ಸದಸ್ಯರ ಗಮನಕ್ಕೂ ತಂದಿಲ್ಲ, ಉದ್ಘಾಟನೆಯನ್ನು ಶಿಷ್ಟಚಾರದ ಮೂಲಕ
ಮಾಡದೇ ಷೇರುದಾರರನ್ನು ನಿರ್ಲಕ್ಷಿಸಿ ತರತುರಿಯಲ್ಲಿ ರಜೆ ದಿನದಂದು ಬೆಳಿಗ್ಗೆ ಏಳು
ಗಂಟೆಯಲ್ಲಿ ಉದ್ಘಾಟನೆ ಮಾಡಿದ್ದಾರೆಂದು ಕಿಡಿಕಾರಿದರು.
ನೂತನ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಅವ್ಯವಹಾರ ನಡೆದಿರುವ ಬಗ್ಗೆ ಸಂಶಯದ ಜೊತೆಗೆ
ಗುಣಮಟ್ಟದವನ್ನು ಪರಿಶೀಲಿಸಬೇಕೆಂದು ಜಿಲ್ಲಾ ಸಹಕಾರ ನಿಬಂಧಕರಿಗೆ ದೂರು ನೀಡಲಾಗಿದೆ.
ಪರಿಶೀಲನೆ ನಡೆಸಿ ವರದಿ ನೀಡುವ ಮೊದಲೇ ಕಟ್ಟಡವನ್ನು ಉದ್ಘಾಟಿಸಲಾಗಿದೆ, ಕೂಡಲೇ
ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಆಡಿಟ್ನಲ್ಲಿ 83 ಸಾವಿರ ರೂ. ವ್ಯತ್ಯಾಸ ಕಂಡು ಬಂತು, ಅದನ್ನು ಕಟ್ಟಿಕೊಡುತ್ತೇನೆಂದು ಹೇಳಿದ ಸಿಇಓ ರಾಜು
ಪ್ರಸಕ್ತ ಸಾಲಿನ ಸರ್ವ ಸದಸ್ಯರ ಸಭೆಯಲ್ಲಿ ಸಂಘಕ್ಕೆ ಖರ್ಚು ಮಾಡಿದ್ದೇನೆಂದು ಹೇಳಿದರು, ಖರ್ಚು ಮಾಡಿದ್ದರೇ ಅದಕ್ಕೆ ಮಾಹಿತಿ ಕೊಡುತ್ತಿಲ್ಲ ಏಕೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ಸಂಘದ ನಿರ್ದೇಶಕರಾದ ಮಂಚಯ್ಯ, ಸುರೇಶ್, ಪ್ರಮೀಳ, ಚನ್ನಮ್ಮ,
ಷೇರುದಾರರಾದ ಶಿವಕುಮಾರ್, ಎಂ.ವಿ ಕೃಷ್ಣ, ರಮೇಶ್, ಅಭಿಲಾಷ್ಗೌಡ, ಮನು,ವೆಂಕಟೇಶ್,
ಪುಟ್ಟನಂಜ ಸೇರಿದಂತೆ ಇತರರಿದ್ದರು.




