ವಿಶ್ವವಿಖ್ಯಾತ ಮೈಸೂರು ದಸರಾದ ಮೆರವಣಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ನಂದಿಧ್ವಜಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸ್ದಬ್ದಚಿತ್ರಗಳು ಜನರು ಮನಸೋರೆಗೊಂಡವರು, ಅಲ್ಲದೇ ನಾಡಿನ ವೈವಿಧ್ಯತೆಯನ್ನು ಪರಿಚಯಿಸಿವ ಕಲಾ ತಂಡ, ಸಾಂಸ್ಕೃತಿಕ ತಂಡಗಳು ನೃತ್ಯ ಪ್ರದರ್ಶನ ಮಾಡಿ ಜನರ ಗಮನ ಸೆಳೆಯುವಲ್ಲಿ ಯಶಸ್ವಿಯಾದವು.

ದಕ್ಷಿಣ ಕನ್ನಡ ಜಿಲ್ಲೆಯ ಕಂಬಳ, ಚಿತ್ರದುರ್ಗದ ಕಲ್ಲಿನಕೋಟೆ, ಬೆಳಗಾವಿಯ ಎಲ್ಲಮ್ಮದೇವಿ ದೇವಾಲಯ, ಬೀದರ್ ಜಿಲ್ಲೆ ಬವವಣ್ಣ ಹಾಗೂ ಹಾಸನ ಜಿಲ್ಲೆಯ ಗೊಮ್ಮಟೇಶ್ವರ ಹಾಗೂ ಕೆಎಂಎಫ್ ವತಿಯಿಂದ ನಂದಿನಿ ಉತ್ಪನ್ನಗಳ ಪ್ರದರ್ಶನದ ಸ್ಥಬ್ದಚಿತ್ರಗಳು ಮೆರವಣಿಗೆಯಲ್ಲಿ ಗಮನ ಸೆಳೆದವು.
ಬನ್ನಿ ಮರಕ್ಕೆ ಪೂಜೆ

ರಾಜ ವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಬನ್ನಿ ಮರಕ್ಕೆ ಸಾಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿ ಪೂಜಾ ಕೈಂಕರ್ಯ ನೆರವೇರಿಸಿದರು.
ಇಂದು ಮುಂಜಾನೆಯೇ ಮುಖ್ಯಮಂತ್ರಿ ಬಸವರಾಯ ಬೊಮ್ಮಾಯಿ ಅವರು ಚಾಮುಂಡಿ ಬೆಟ್ಟದಲ್ಲಿ ಉತ್ಸವಮೂರ್ತಿ ಮೆರವಣಿಗೆ ಚಾಲನೆ ನೀಡಿದರು. ಈ ಉತ್ಸವವು ಬೆಳ್ಳಿ ರಥದ ಮೂಲಕ ಮೆರವಣಿಗೆಯಲ್ಲಿ ಅರಮನೆಯನ್ನು ತಲುಪುವ ಸಂದರ್ಭದಲ್ಲಿ ಅದನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.




