Friday, September 20, 2024

ಪ್ರಾಯೋಗಿಕ ಆವೃತ್ತಿ

ಟಿಪ್ಪು ಮಾತ್ರ ಸದಾ ಕಾಲ ಜೀವಂತ

✍🏿 ಆರ್ ಜೆ

ಸಣ್ಕತೆ :

ಟಿಪ್ಪು ಮಾತ್ರ ಸದಾ ಕಾಲ ಜೀವಂತ

ಆಗಿನ್ನೂ ಪ್ರಪಂಚಕ್ಕೆ ಕಣ್ಣು ಬಿಡುತ್ತಿದ್ದ ಕಾಲ. ಬಸ್ಸು, ರೈಲು ಎಲ್ಲವನ್ನೂ ಕುತೂಹಲದಿಂದ ನೋಡುವ ವಯಸ್ಸು. ಆಗಿನ್ನೂ ಮೀಟರ್‌ ಗೇಜ್ ಜಮಾನ, ಆದ್ರೆ ಆ ಮೀಟರ್ ಗೇಜ್ ರೈಲುಗಳಲ್ಲಿಯೇ ಒಂದು ಹಸಿರು ಬಣ್ಣದ ರೈಲು ಕಿಟಕಿಗೆಲ್ಲ ಕೂಲಿಂಗ್ ಗ್ಲಾಸ್ ಹಾಕಿಕೊಂಡು ನಿಲ್ದಾಣಕ್ಕೆ ಬಂದರೆ ಅದರ ಗತ್ತು ಗೈರತ್ತು ಸಖತ್ ಎನಿಸುತ್ತಿತ್ತು.

ಬೇರೆಲ್ಲಾ ರೈಲುಗಳಿಗೆ ಕಲ್ಲಿದ್ದಲು ಇಂಜಿನ್ ಇದ್ದರೆ ಇದಕ್ಕೆ ಮಾತ್ರ ಡೀಸೆಲ್ ಇಂಜಿನ್, ಬೋಗಿಗಳು ಕಣ್ಣು ಕುಕ್ಕುವಂತೆ ಆಕರ್ಷಕವಾಗಿತ್ತು.

ಮನೆ ಹಿಂದಿನ ರೈಲು ಹಳಿಯ ಮೇಲೆ ಪ್ರತಿದಿನ ಓಡಾಡುತ್ತಿದ್ದ ಈ ರೈಲನ್ನು ನೋಡಿ ರೋಮಾಂಚನಕ್ಕೆ ಒಳಗಾಗುತ್ತಿದ್ದ ನನಗೆ ನಿಧಾನಕ್ಕೆ ತಿಳಿದದ್ದು ಈ ರೈಲಿನ ಹೆಸರು ” ಟಿಪ್ಪು ಎಕ್ಸ್‌ಪ್ರೆಸ್‌ ” ಎಂದು.

ನಂತರ ಬುದ್ದಿ ಬೆಳೆದಂತೆ ಟಿಪ್ಪು ಆತನ ಹೋರಾಟ,ವ್ಯಕ್ತಿತ್ವದಿಂದ ಆಕರ್ಷಕವಾದ, ಅದರೆ ಟಿಪ್ಪು ರೈಲಿನ ಆಕರ್ಷಣೆ ಕಡಿಮೆ ಆಯಿತು, ಈಗ ಟಿಪ್ಪು ಟ್ರೈನ್ ಇಲ್ಲ‌, ಆದ್ರೆ ಟಿಪ್ಪು ಮಾತ್ರ ಸದಾ ಕಾಲ ಜೀವಂತವಾಗಿ ಇರುತ್ತಾನೆ !!

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!