ಶ್ರೀರಂಗಪಟ್ಟಣ ತಾಲ್ಲೂಕಿನ ಸಬ್ಬನಕುಪ್ಪೆಯ ರೈತ ಕೆಂಪೇಗೌಡ ಉಜ್ಜೀವನ್ ಬ್ಯಾಂಕಿನಲ್ಲಿ ಸಾಲ ಪಡೆದು ಸಕಾಲದಲ್ಲಿ ಸಾಲ ಮರುಪಾವತಿ ಮಾಡಲಿಲ್ಲ ಎಂಬ ಕಾರಣದಿಂದ ಬ್ಯಾಂಕ್ ಅಧಿಕಾರಿಗಳು ಕೆಂಪೇಗೌಡ ಅವರ ಮನೆಯನ್ನು ಜಪ್ತಿ ಮಾಡಿದ್ದರು.
ಉಜ್ಜೀವನ್ ಬ್ಯಾಂಕಿನ ಜಪ್ತಿ ಕ್ರಮವನ್ನು ಖಂಡಿಸಿ ಬಿಜೆಪಿ ನಾಯಕರಾದ ಕೆ.ಎಸ್.ನಂಜಂಡೇಗೌಡರ ನಾಯಕತ್ವದಲ್ಲಿ ಬ್ಯಾಂಕ್ ಮುಂದೆ ರೈತರು ಜಮಾಯಿಸಿ ಪ್ರತಿಭಟನೆ ನಡೆಸಿದರು.
ಕೆಂಪೇಗೌಡ ಅವರ ಜಪ್ತಿ ಮಾಡಿರುವ ಕ್ರಮ ಸರಿಯಿಲ್ಲವೆಂದು ಕಿಡಿಕಾರಿದ ರೈತರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಬ್ಯಾಂಕಿನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ರೈತ ಕೆಂಪೇಗೌಡರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.




