ಮಳವಳ್ಳಿ ನಗರದಲ್ಲಿ ಟ್ಯೂಷನ್ ಗೆ ತೆರಳಿದ್ದ ಮುಗ್ಧ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿ ನಂತರ ಕೊಲೆ ಮಾಡಿದ ಘಟನೆಯನ್ನು ಖಂಡಿಸಿ ಇಡೀ ಮಳವಳ್ಳಿ ಒಗ್ಗಟ್ಟಾಗಿ ಇರುವಾಗ ಮಳವಳ್ಳಿಯ ಮಾಜಿ ಮತ್ತು ಹಾಲಿ ಎಂಎಲ್ಎಗಳು ಸದರಿ ಘಟನೆಯಲ್ಲಿ ಜಟಾಪಟಿ ನಡೆಸುತ್ತಿರುವುದು ಆಶ್ಚರ್ಯ ಮೂಡಿಸಿದೆ.
ಘಟನೆ ಸಂಬಂಧ ಮಾಜಿ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅವರು ಮಳವಳ್ಳಿಯಲ್ಲಿ ಪೋಲಿಸ್ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದೆ ಇರುವುದರಿಂದ ಅಪರಾಧ ಕೃತ್ಯಗಳು ಹೆಚ್ಚಿವೆ.ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ, ವೇಶ್ಯಾವಾಟಿಕೆ,ಗಾಂಜಾ ದಂಧೆ ನಡೆಯುತ್ತಿದ್ದು, ಇದಕ್ಕೆ ಪೋಲಿಸರ ಕುಮ್ಮಕ್ಕಿದೆ ಎಂದು ಟೀಕಿಸಿದ್ದರು.
ಇದಕ್ಕೆ ಪ್ರತಿಯಾಗಿ ಹಾಲಿ ಶಾಸಕ ಅನ್ನದಾನಿ ಅವರು ಪೋಲಿಸರು ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಆರೋಪಿಯನ್ನು ಘಟನೆ ನಡೆದ ಒಂದೇ ದಿನಕ್ಕೆ ಬಂಧಿಸಿದ್ದಾರೆ.ತಾಲ್ಲೂಕಿನಲ್ಲಿ ಯಾವುದೇ ಅಕ್ರಮ ದಂಧೆ ನಡೆಯುತ್ತಿಲ್ಲ ಎಂದು ಪೋಲಿಸರನ್ನು ಸಮರ್ಥಿಸಿಕೊಂಡಿದ್ದಾರೆ.




