Thursday, May 16, 2024

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಬ್ಯಾಗ್ ಲೆಸ್ ಡೇ

ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಬ್ಯಾಗ್ ರಹಿತವಾಗಿ ಶಾಲೆಗೆ ಬರುವಂತೆ ಮಾಡಲು ಆದೇಶ ಹೊರಡಿಸಲು ಚಿಂತನೆ ನಡೆಸಿದೆ.

ಈ ಆದೇಶ ಜಾರಿಯಾದರೆ ಶಾಲೆಗಳಲ್ಲಿ ವಾರದ ಒಂದು ದಿನ ಅಂದರೆ ಶನಿವಾರದ ದಿನ ಮಕ್ಕಳು ಬ್ಯಾಗನ್ನು ತೆಗೆದುಕೊಂಡು ಹೋಗುವ ಅವಶ್ಯಕತೆ ಇರುವುದಿಲ್ಲ. ಬದಲು ಆ ದಿನ ಮಕ್ಕಳು ಶಾಲೆಯಲ್ಲಿ ಆಟ, ಯೋಗ, ಕಥೆ, ನಾಟಕಗಳ ಮೂಲಕ ಕಾಲ ಕಳೆಯಬಹುದಾಗಿದ್ದು ಸರ್ಕಾರದ ಈ ನಿಯಮ‌ ಶೀಘ್ರವಾಗಿ ಜಾರಿಬರುವ ಸಾಧ್ಯತೆ ಇದೆ.

ಪಾಲಕರು ಬ್ಯಾಗ್‌ಲೆಸ್ ಡೇ ನಿರ್ಧಾರ ಸ್ವಾಗತಿಸಿದ್ದಾರೆ, ಈಗಿನಿಂದಲೇ ಜಾರಿಗೆ ತರಬೇಕೆಂದು ಪ್ರತಿಕ್ರಿಯಿಸಿದ್ದಾರೆ, 2 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಯಾವುದೇ ಹೋಮ್‌ ವರ್ಕ್ ಇಲ್ಲ ಮತ್ತು ವಾರದಲ್ಲಿ ಒಂದು ದಿನ ಶಾಲಾ ಬ್ಯಾಗ್ ಇಲ್ಲದೆ ವಿದ್ಯಾರ್ಥಿಗಳು ಶಾಲೆಗೆ ಬರಬಹುದಾಗಿದೆ.

ಹೊಸ ಶಿಕ್ಷಣ ನೀತಿ (NEP)ಯು ಕನಿಷ್ಠ 50 ಪ್ರತಿ ಶತ ಕಲಿಯುವವರನ್ನು ವೃತ್ತಿಪರ ಶಿಕ್ಷಣಕ್ಕೆ ಸೇರ್ಪಡೆ ಮಾಡುವಂತೆ ತಿಳಿಸುತ್ತದೆ,  6 ನೇ ತರಗತಿಯಲ್ಲೇ ವಿದ್ಯಾರ್ಥಿಗಳು ವೃತ್ತಿಪರ ವಿಷಯಗಳಿಗೆ ತೆರೆದು ಕೊಂಡರೆ ಒಳ್ಳೆಯದು

ಪ್ರತಿ ವಿದ್ಯಾರ್ಥಿಯು 6-8 ನೇ ತರಗತಿಗಳ ಸಮಯದಲ್ಲಿ ಮೋಜಿನ ಕೋರ್ಸ್ ಅನ್ನು ತೆಗೆದುಕೊಳ್ಳುತ್ತಾರೆ, ಇದು ಮರಗೆಲಸ, ವಿದ್ಯುತ್ ಕೆಲಸ, ಲೋಹದ ಕೆಲಸ, ತೋಟಗಾರಿಕೆ, ಕುಂಬಾರಿಕೆ ತಯಾರಿಕೆ ಇತ್ಯಾದಿಗಳಂತಹ ಪ್ರಮುಖ ವೃತ್ತಿಪರ ಕರಕುಶಲ ವಸ್ತುಗಳ ಮಾದರಿಯ ಸಮೀಕ್ಷೆ ಮತ್ತು ಅನುಭವವನ್ನು ನೀಡುತ್ತದೆ ಎಂಬುದನ್ನು ಹೊಸ ಶಿಕ್ಷಣ ನೀತಿಯು ತಿಳಿಸುತ್ತದೆ.

ಬ್ಯಾಗ್ ಲೆಸ್ ದಿನಗಳಲ್ಲಿ ವಿದ್ಯಾರ್ಥಿಗಳು ಬಡಗಿಗಳು, ತೋಟಗಾರರು, ಕುಂಬಾರರು, ಕಲಾವಿದರು ಮುಂತಾದ ಸ್ಥಳೀಯ ವೃತ್ತಿಪರ ತಜ್ಞರೊಂದಿಗೆ ಸಂವಾದಿಸಿ ಕಲಿಕೆಯಲ್ಲಿ ತೊಡಗುತ್ತಾರೆ.  ಹೊಸ ಶಿಕ್ಷಣ ನೀತಿ ಆನ್‌ಲೈನ್ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಒತ್ತು ನೀಡುವುದರೊಂದಿಗೆ ವೃತ್ತಿಪರ ಕೋರ್ಸ್‌ಗಳನ್ನು ಆನ್‌ಲೈನ್‌ನಲ್ಲಿಯೂ ಲಭ್ಯಗೊಳಿಸಲು ಶಿಫಾರಸ್ಸು ಮಾಡಿದೆ.

ಹೊಸ ಶಿಕ್ಷಣ ನೀತಿಯ ಪ್ರಕಾರ, ಕಲೆಗಳು, ರಸಪ್ರಶ್ನೆಗಳು, ಕ್ರೀಡೆಗಳು ಮತ್ತು ವೃತ್ತಿಪರ ಕರಕುಶಲ ಕೌಶಲ್ಗಯಳನ್ನು ಒಳಗೊಂಡಿರುವ ವಿವಿಧ ರೀತಿಯ ಚಟುವಟಿಕೆಗಳಿಗೆ ವರ್ಷ ಪೂರ್ತಿ ವಾರಕ್ಕೊಂದು ದಿನ ಬ್ಯಾಗ್‌ಲೆಸ್ ದಿನ ಜಾರಿಗೆ ತರಲು ಮುಂದಾಗಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!