ಕೋವಿಡ್ ದಿನಗಳಲ್ಲಿನ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳು ಅಭ್ಯಾಸ ಮಾಡಿ ಉತ್ತಮ ಅಂಕಗಳಿಸಿ ಉತ್ತೀರ್ಣರಾಗಿರುವುದು ಶ್ಲಾಘನೀಯ ಎಂದು ಪಿಇಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಜೆ.ಮಹಾದೇವ ಹೇಳಿದರು.
ಮಂಡ್ಯ ನಗರದ ಪಿಇಎಸ್ ಕಾಲೇಜು ಆವರಣದಲ್ಲಿರುವ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಕಾಲೇಜು ಆಯೋಜಿಸಿದ್ದ ಆಡಳಿತ ಮಂಡಳಿ, ಅಧ್ಯಾಪಕರ, ಪೋಷಕರ, ವಿದ್ಯಾರ್ಥಿಗಳ ಸಂಯುಕ್ತ ಸಭೆ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
2 ವರ್ಷ ಕೋವಿಡ್ ಸಮಯವಾಗಿತ್ತು
ತರಗತಿ ಇಲ್ಲದಿದ್ದರೂ ಆನ್ಲೈನ್ ಮತ್ತು ಆಫ್ಲೈನ್ ತರಗತಿಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಪಾಠ ಕೇಳಿ ಉತ್ತಮ ಅಂಕ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. 2021-22ನೇ ಸಾಲಿನಲ್ಲಿ 177ವಿದ್ಯಾರ್ಥಿಗಳು ಉನ್ನತಶ್ರೇಣಿ ಅಂಕಪಡೆದಿದ್ದು, ವಾಣಿಜ್ಯ ವಿಭಾಗದಿಂದ 101, ವಿಜ್ಞಾನ ವಿಭಾಗದಿಂದ 66, ಕಲಾ ವಿಭಾಗದಿಂದ 13ಮಂದಿ, ಇತರೆ 22ಮಂದಿ ಒಟ್ಟಾರೆ 187 ಮಂದಿ ಉತ್ತಮ ಅಂಕಪಡೆದು ಕೀರ್ತೀ ತಂದಿದ್ದಾರೆ ಎಂದರು.
2020-21ನೇ ಸಾಲಿನಲ್ಲಿ 11ಇದ್ದ ಸಂಖ್ಯೆ ಈಗ 177ಕ್ಕೇ ಏರಿಕೆಕಂಡಿದೆ, ಹಾಗಾಗಿ ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಆಡಳಿತ ಮಂಡಳಿಗೆ ಕೀರ್ತಿ ಸಲ್ಲುವಂತೆ ಮಾಡಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇವೆ , ವಿಶ್ವ ವಿದ್ಯಾನಿಲಯ ಮಟ್ಟದಲ್ಲಿ ಪಿಇಎಸ್ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದೀರಿ ಎಂದು ತಿಳಿಸಿದರು.
ಪ್ರಸ್ತುತ ವರ್ಷದಲ್ಲಿ ದಾಖಲಾಗಿರುವ ಪ್ರಥಮ, ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ನಿಮ್ಮ ಸಾಧನೆ ಪ್ರೇರಣೆಯಾಗಲಿ, ನಿಮ್ಮಂತಯೇ ಇವರು ಮುಂದಿನ ವರ್ಷ ಪ್ರತಿಭಾ ಪುರಸ್ಕಾರಕ್ಕೆ ಭಾಜನಾರಾಗಲಿ ಎಂದು ಕಿವಿಮಾತೇಳಿದರು.

ಪಿಇಎಸ್ ಸಂಸ್ಥೆ ಸ್ಥಾಪಕರಾದ ಕೆ.ವಿ.ಶಂಕರಗೌಡ ಮತ್ತು ಮಾಜಿ ಅಧ್ಯಕ್ಷರಾದ ಎಚ್.ಡಿ.ಚೌಡಯ್ಯ ಅವರ ಕನಸು, ಗ್ರಾಮೀಣ ಮನೆಗಳಲ್ಲಿ ಇಂಜನಿಯರ್, ವೈದ್ಯರು, ಉನ್ನತಮಟ್ಟದ ಅಧಿಕಾರಿಗಳು ಇರಬೇಕು ಎನ್ನುವ ಆಶಯ ಈಡೇರಬೇಕಿದೆ. ಹಾಲಿ ಅಧ್ಯಕ್ಷರಾದ ವಿಜಯಾ ಆನಂದ ಅವರ ಆಕಾಂಕ್ಷೆಗಳು, ನಿಮ್ಮ ಮೂಲಕ ಪ್ರವರ್ಧಮಾನಕ್ಕೆ ಬರಬೇಕಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ 74ನೇ ರಾಜ್ಯಮಟ್ಟದ ಗಣರಾಜ್ಯೋತ್ಸವ ಪಥಸಂಚನಗದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿ ಎ.ಎನ್. ನಿಶಾಂತ್ರನ್ನು ವಿಶೇಷವಾಗಿ ಗಣ್ಯರು ಅಭಿನಂದಿಸಿದರು. ವಿದ್ಯಾರ್ಥಿಗಳ ಪೋಷಕರು ಆಡಳಿತ ಮಂಡಳಿಯವರೊಂದಿಗೆ ಚರ್ಚಿಸಿದರು, ಬಳಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪೋಷಕರ ಸಮ್ಮುಖದಲ್ಲಿ ಪ್ರತಿಭಾ ಪುರಸ್ಕಾರ ನೀಡಿ ಗಣ್ಯರು ಗೌರವಿಸಿದರು.
ಕಾರ್ಯಕ್ರಮದಲ್ಲಿ ಜಂಟಿ ಕಾರ್ಯದರ್ಶಿ ಕೆ.ಆರ್.ದಯಾನಂದ, ಟ್ರಸ್ಟಿ ಮುದ್ದೇಗೌಡ, ಅಧ್ಯಾಪಕರಾದ ಡಾ.ನರಸಿಂಹ, ಪ್ರೊ.ಶಿವಕುಮಾರ್, ಪ್ರೊ.ಮರಿಯಯ್ಯ, ಪ್ರೊ.ಡೇವಿಡ್ ಮತ್ತಿತರರಿದ್ದರು.




