Thursday, September 19, 2024

ಪ್ರಾಯೋಗಿಕ ಆವೃತ್ತಿ

ನಮ್ಮಅಭಿವೃದ್ಧಿಗೆ ನಾವೇ ಕಾರಣಕರ್ತರು : ಕೆ.ನಾಗಣ್ಣಗೌಡ

`ಸ್ವಾಮಿ ವಿವೇಕಾನಂದ ಅವರು ಹೇಳಿರುವ ಹಾಗೆ ನಮ್ಮಅಭಿವೃದ್ಧಿಗೆ ನಾವೇ ಕಾರಣಕರ್ತರು’, ಸಮಾಜದಲ್ಲಿ  ಹುಟ್ಟಿದ ಮೇಲೆ ಸಾಧನೆ ಮಾಡಿ ಸಾಧಿಸಿದರವಿಗೆ ಸಾವಿಲ್ಲ ಎಂಬುದು ಅರಿಯಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಅಧ್ಯಕ್ಷ ಕೆ.ನಾಗಣ್ಣಗೌಡ ಹೇಳಿದರು.

ಮಂಡ್ಯ ನಗರದ ಜಿಲ್ಲಾ ಬಾವಲಭವನದಲ್ಲಿ ಜಿಲ್ಲಾಡಳಿತ, ಜಿ.ಪಂ., ಬಾಲಭವನ ಸೊಸೈಟಿ ಬೆಂಗಳೂರು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲಭವನ ಸಮಿತಿ ಆಯೋಜಿಸಿದ್ದ ಗಾಂಧಿಜಯಂತಿ ಪ್ರಯುಕ್ತ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ದಿನಗಳಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳು ಶೈಕ್ಷಣಿಕವಾಗಿ ಸಾಧನೆ ಮಾಡುತ್ತಿದ್ದಾರೆ, ಐಎಎಸ್, ಕೆಎಎಸ್, ಐಪಿಎಸ್ ಹುದ್ದೆಗಳ ಪಡೆಯುವ ಹಂಬಲ ಚಲ ಗುರಿ ಇರಿಸಿಕೊಳ್ಳಿ, ಅಪ್ಪ, ಅಮ್ಮಂದಿರ ಕಣ್ಣೀರು ಒರಿಸುವ ಪ್ರಜೆಗಳಾಗಿ ಬೆಳೆಯಿರಿ ಎಂದು ಕಿವಿಮಾತು ಹೇಳಿದರು.

ಹೊಸ ಜಾಗಗಳಲ್ಲಿ ಒಬ್ಬಂಟಿಯಾಗಿರುವಾಗ ಮಕ್ಕಳು ಎಚ್ಚರಿಕೆಯಿಂದ ಜಾಗರೂಕತೆಯಿಂದ ಇರುವುದು ಅವಶ್ಯ, ಯಾವುದೇ ಅನಾಹುತ ಜರುಗುವ ಸನ್ನಿವೇಶಗಳು ಕಂಡ ಬಂದ ತಕ್ಷಣ ರಕ್ಷಣೆ ಪಡೆದುಕೊಳ್ಳಿ, ಪಾರಾಗುವ ಕೌಶಲಜ್ಞಾನ ಹೆಚ್ಚಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನಾಗರಾಜು ಮಾತನಾಡಿ, ಜಿಲ್ಲೆಯಲ್ಲಿ 10 ಲಕ್ಷಕ್ಕೂ ಹೆಚ್ಚು 18 ವರ್ಷದೊಳಗಿನ ಮಕ್ಕಳಿದ್ದಾರೆ, ಅವರಿಗೆ ರಕ್ಷಣೆ ಕೊಡುಲು, ರಕ್ಷಣಾತ್ಮಕ ತರಬೇತಿ ನೀಡಲು ಹಂತ ಹಂತವಾಗಿ ಸಿದ್ದತೆ ಮಾಡಲಾಗುತ್ತಿದೆ ಎಂದು ನುಡಿದರು.

ಪೋಷಕರು ಮಕ್ಕಳ ಬಗ್ಗೆ ಕಾಳಜಿ, ಜವಾಬ್ದಾರಿ, ಎಚ್ಚರಿಕೆವಹಸಿಬೇಕಿದೆ, ಮಕ್ಕಳಿಗೆ-ಪೋಷಕರಿಗೆ ತರಬೇತಿ ನೀಡುವುದರ ಬಗ್ಗೆ ಚಿಂತನೆ ನಡೆಯುತ್ತಿದೆ, ಮಕ್ಕಳ ಆಗು-ಹೋಗುಗಳನ್ನು ನೋಡಿಕೊಳ್ಳಬೇಕಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿವಿಧ ಶಾಲೆಗಳಿಂದ ವಿವಿಧ ವಯೋಮಾನದ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪ್ರಬಂಧ ಸ್ಪರ್ಧೆ ನಡೆದು, ವಿಜೇತ ಸ್ಪರ್ಧಾರ್ಥಿಗಳಿಗೆ ನಗದು ಬಹುಮಾನ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಯೋಗೇಶ್, ಮಕ್ಕಳ ಸಹಾಯವಾಣಿ ಮುಖ್ಯಸ್ಥ ಮಿಕ್ಕೆರೆ ವೆಂಕಟೇಶ್, ಶಂಕರೇಗೌಡ, ರಾಜೇಂದ್ರಕುಮಾರ್, ಕೋಮಲ್‌ಕುಮಾರ್, ಭಾಲಭವನ ಮೇಲ್ವಿಚಾರಕಿ ಕೋಮಲಾ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!