Thursday, September 19, 2024

ಪ್ರಾಯೋಗಿಕ ಆವೃತ್ತಿ

ಖಾಸಗಿ ಜಮೀನಿನಲ್ಲಿರುವ ಜನವಸತಿಗಳು ಕಂದಾಯ ಗ್ರಾಮಗಳಾಗಲಿವೆ


  • ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿಸಲು ಸರ್ಕಾರದ ಸುತ್ತೋಲೆ

  • ಕುರುಬರಹಟ್ಟಿ, ಹಾಡಿ, ಮಜರ, ದೂಡಿ, ಪಾಳ್ಯ, ಕ್ಯಾಂಪ್ ಗಳನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ

ರಾಜ್ಯದಲ್ಲಿ ಖಾಸಗಿ ಜಮೀನುಗಳಲ್ಲಿ ನೆಲೆಗೊಂಡಿರುವ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಕ್ರಮಕೈಗೊಳ್ಳುವಂತೆ ಸರ್ಕಾರ ಮಂಗಳವಾರ ಸುತ್ತೋಲೆ ಹೊರಡಿಸಿದೆ.

ಹಲವಾರು ಜನವಸತಿಗಳು ವಿಶೇಷವಾಗಿ ಲಂಬಾಣಿ ತಾಂಡ, ಗೊಲ್ಲರಹಟ್ಟಿ, ವಡ್ಡರಹಟ್ಟಿ, ನಾಯಕರ ಹಟ್ಟಿ, ಕುರುಬರಹಟ್ಟಿ, ಹಾಡಿ, ಮಜರ, ದೂಡಿ, ಪಾಳ್ಯ, ಕ್ಯಾಂಪ್, ಕಾಲೋನಿ, ಇತ್ಯಾದಿ, ಹೆಸರುಗಳಿಂದ ಗುರುತಿಸಲ್ಪಟ್ಟಿರುವ ಜನವಸತಿಗಳು ದಾಖಲೆರಹಿತವಾಗಿಯೇ ಸಮಾಜದ ಮುಖ್ಯ ವಾಹಿನಿಗೆ ಬರದೇ ಉಳಿದುಕೊಂಡಿವೆ, ಇಂತಹ ಜನವಸತಿಗಳನ್ನು ಕಂದಾಯ ಗ್ರಾಮಗಳಾಗಿ ಅಥವಾ ಅಸ್ತಿತ್ವದಲ್ಲಿರುವ ಕಂದಾಯ ಗ್ರಾಮದ ಭಾಗವಾಗಿ ಪರಿವರ್ತಿಸಬೇಕೆಂದು ಸರ್ಕಾರವು ಉದ್ದೇಶಿಸಿದೆ.


  • ಸರ್ಕಾರವು ಖಾಸಗಿ ಜಮೀನುಗಳಲ್ಲಿ ಮನೆಗಳನ್ನು ಕಟ್ಟಿಕೊಂಡು ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ ಕೊಡುವುದು, ಆ ಜಾಗಗಳನ್ನು ಗ್ರಾಮಗಳಿಗೆ ವಿಲೀನಗೊಳಿಸುವ ಕ್ರಮ ಸೂಕ್ತ ಕ್ರಮವಾಗಿದೆ.
  • ಖಾಸಗಿ ಜಮೀನುಗಳಲ್ಲಿ ವಾಸವಿದ್ದು ಅತಂತ್ರರಾಗಿದ್ದವರಿಗೆ ಅನುವಾಗುತ್ತಿರುವುದರಿಂದ ಇದನ್ನು ಸ್ವಾಗತಿಸುತ್ತೇವೆ.
  • ಆದರೆ ಖಾಸಗಿ ಜಾಗಗಳಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವುದಲ್ಲದೆ, ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವ ಜನರಿಗೆ ಮನೆಯ ಹಕ್ಕು ಪತ್ರ ಕೊಡುವುದೇ ಒಂದು ದೊಡ್ಡ ಧೀರ್ಘವಾಧಿಯ ನೀತಿಯಾಗಿದೆ. ಇದಕ್ಕಾಗಿ ತಹಸೀಲ್ದಾರ್, ಸಹಾಯಕ ಆಯುಕ್ತರ ಕಛೇರಿಗಳನ್ನು ಅಲೆಸುವ ರೀತಿ ಸುತ್ತೋಲೆ ಹೇಳುತ್ತಿದೆ.
  • ಕಂಪನಿಗಳಿಗೆ, ವಾಣಿಜ್ಯ ಬಳಕೆಗಾಗಿ ಭೂಪರಿವರ್ತನೆಗೆ 24 ಗಂಟೆಯಲ್ಲಿ ಎಲ್ಲಾ ಕೆಲಸ ಮಾಡಿ ಮುಗಿಸುವ ಏಕ ಗವಾಕ್ಷಿ ವ್ಯವಸ್ಥೆ ಇದೆ. ಆದರೆ ಬಡವರು, ರೈತರು ಗುಡಿಸಲು ಕಟ್ಟಿಕೊಂಡಿರುವ ಭೂಮಿ ಪರಿವರ್ತನೆ ಮಾಡಲು ಧೀರ್ಘಕಾಲ ಯಾಕೆ?
  • ಜನರು ನೆಮ್ಮದಿಯಿಂದ ಬದುಕಲು ನೆರವು ನೀಡಬೇಕೆಂದಿದ್ದರೆ ಕಛೇರಿಗಳನ್ನು ಅಲೆಸುವುದನ್ನು ಕೈಬಿಡಬೇಕೆಂದು ಈ ಮೂಲಕ ಮನವಿ‌.
ಕುಮಾರ್ ಸಮತಳ
ಕಾರ್ಯದರ್ಶಿ ಮಂಡಳಿ
ಭೂಮಿ ಮತ್ತು ವಸತಿ ಹಕ್ಕು‌ ವಂಚಿತರ ಹೋರಾಟ ಸಮಿತಿ.

ಅಲ್ಲದೇ ಅಲ್ಲಿನ ನಿವಾಸಿಗಳಿಗೆ ವಾಸ್ತವ್ಯದ ಹಕ್ಕು, ದಾಖಲೆಗಳನ್ನು ಒದಗಿಸಿ, ಅಂತಹ ಕುಟುಂಬಗಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದು, ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕಾಲಕಾಲಕ್ಕೆ ಉಲ್ಲೇಖಗಳನ್ವಯ ಸರ್ಕಾರವು ಮಾರ್ಗಸೂಚಿಗಳನ್ನು ಹೊರಡಿಸಿದೆ.

ಸರ್ಕಾರವು ಕರ್ನಾಟಕ ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ತಂದು ಕಲಂ 38-ಎ ಮತ್ತು ನಿಯಮ 9-ಸಿ ಸೇರ್ಪಡೆಗೊಳಿಸುವ ಮೂಲಕ ಖಾಸಗಿ ಜಮೀನಿನಲ್ಲಿ ನೆಲೆಗೊಂಡಿರುವ ದಾಖಲೆರಹಿತ ಜನವಸತಿ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಅವಕಾಶ ಕಲ್ಪಿಸಿದೆ. ಖಾಸಗಿ ಜಮೀನುಗಳಲ್ಲಿ ನೆಲೆಸಿರುವ ದಾಖಲೆರಹಿತ ಜನವಸತಿಗಳನ್ನು ಕಂದಾಯ ಗ್ರಾಮ ಹಾಗೂ ಗ್ರಾಮದ ಭಾಗವಾಗಿ ಪರಿವರ್ತಿಸಿ ಅಲ್ಲಿಯ ನಿವಾಸಿಗಳಿಗೆ ಹಕ್ಕು ಪತ್ರವನ್ನು ನೀಡಲು ಸರ್ಕಾರವು ಒಟ್ಟು 27 ಮಾರ್ಗಸೂಚಿಗಳನ್ನು ಸೂಚಿಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!