Friday, September 20, 2024

ಪ್ರಾಯೋಗಿಕ ಆವೃತ್ತಿ

ಕಾಂಗ್ರೆಸ್ ವಿರುದ್ಧ ಲಹರಿ ವೇಲು ದೂರು ದಾಖಲಿಸಿದ್ದು ಏಕೆ ?

ದಕ್ಷಿಣ ಭಾರತದ ಪ್ರಸಿದ್ದ ಲಹರಿ ಆಡಿಯೋ ಕಂಪನಿ ಮಾಲೀಕ ಲಹರಿ ವೇಲು ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಇತ್ತೀಚೆಗಷ್ಟೇ ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ `ಕೆಜಿಎಫ್‌’ ಚಿತ್ರದಲ್ಲಿನ ಹಾಡನ್ನು ಆಧರಿಸಿ ರಾಹುಲ್‌ ಗಾಂಧಿ ಅವರ ವಿಡಿಯೋ ಮಾಡಿತ್ತು. ಈ ಹಾಡನ್ನು ತನ್ನೆಲ್ಲ ಸೋಷಿಯಲ್‌ ಮೀಡಿಯಾ ವೇದಿಕೆಗಳಲ್ಲಿ ಹಂಚಿಕೊಂಡಿತ್ತು. ಭಾರತ್‌ ಜೋಡೋ ಯಾತ್ರಾ ಎಂದೂ ಅದರಲ್ಲಿ ನಮೂದಿಸಿತ್ತು. ಹೀಗಿರುವಾಗಲೇ ಕೆಜಿಎಫ್‌ ಚಿತ್ರದ ಹಾಡುಗಳನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದ ಲಹರಿ ವೇಲು ಮಾಲಿಕತ್ವದ  MRTಆಡಿಯೋ ಸಂಸ್ಥೆ, ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ರಾಹುಲ್‌ ಗಾಂಧಿ ಸೇರಿ, ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಸುಪ್ರಿಯಾ ಶ್ರೀನೆಟ್ ಮತ್ತು ಭಾರತ್ ಜೋಡೋ ಯಾತ್ರೆಯ ಉಸ್ತುವಾರಿ ಜೈರಾಮ್ ರಮೇಶ್ ವಿರುದ್ಧ ಎಂಆರ್‌ಟಿ ಆಡಿಯೋ ಸಂಸ್ಥೆ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ದಾಖಲಿಸಿದೆ. ಆಡಿಯೋ ಸಂಸ್ಥೆಯೂ ಕಾಂಗ್ರೆಸ್ ಮತ್ತು ಅವರ ಪದಾಧಿಕಾರಿಗಳ ವಿರುದ್ಧ ಸೆಕ್ಷನ್ 403, 465 ಮತ್ತು 120B R/W, ಸೆಕ್ಷನ್ 34 ಮತ್ತು ಸೆಕ್ಷನ್ 66 ರ ಮಾಹಿತಿ ತಂತ್ರಜ್ಞಾನ ಕಾಯಿದೆ, 2000 ಮತ್ತು ಸೆಕ್ಷನ್ 63ರ ಹಕ್ಕುಸ್ವಾಮ್ಯ ಕಾಯಿದೆ, 1957ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿದೆ. ಆ ವಿಡಿಯೋದಲ್ಲಿ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯ ಲಾಂಛನವನ್ನೂ ಬಳಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!