Thursday, September 19, 2024

ಪ್ರಾಯೋಗಿಕ ಆವೃತ್ತಿ

ಹಿಂದೂ ಒಂದು ಧರ್ಮ ಅಲ್ಲ| ಮೋಹನ್ ಭಾಗವತ್

ಹಿಂದೂ ಎನ್ನುವುದು ಒಂದು ಧರ್ಮವಲ್ಲ ಅದು ಒಂದು ಜೀವನ ಶೈಲಿ ಮಾತ್ರ ಎಂದು ಆರ್.ಎಸ್.ಎಸ್. ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಛತ್ತಿಸ್ ಘಡ್ ದ ಸುರ್ಗಜಾ ಜಿಲ್ಲೆಯ ಅಂಬಿಕಾಪುರದಲ್ಲಿ ಆರ್.ಎಸ್.ಎಸ್. ಮುಂಖ್ಯ ಕೇಂದ್ರ ಕಛೇರಿ ಸ್ಥಳದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ಮತ್ತು ಆರೆಸ್ಸೆಸ್ ಪರಮೋಚ್ಚ ಮುಖ್ಯಸ್ಥ ಭಾಗವತ್ ರು, ಈ ಹಿಂದೆ ಸುಪ್ರೀಂ ಕೋರ್ಟ್ ಹೇಳಿದ ಮಾತನ್ನೇ ಉಚ್ಚರಿಸಿ, ಹಿಂದೂ ಧರ್ಮ ಒಂದು ಧರ್ಮವಲ್ಲ ಅದು ಜೀವನ ಶೈಲಿ ಮಾತ್ರ ಎಂದಿದ್ದಾರೆ.

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ವ್ಯಕ್ತಿಯೂ ಹಿಂದುವೇ ಆಗಿದ್ದಾನೆ. ಇಲ್ಲಿ ಜೀವಿಸುವ ಎಲ್ಲಾ ಧರ್ಮದವರನ್ನು ನಾವು ಗೌರವಿಸಬೇಕು. ಭಾರತದಲ್ಲಿ 1925 ರಿಂದ ಈಚೆಗೆ ಹುಟ್ಟಿದ ಎಲ್ಲರೂ ಹಿಂದುಗಳೇ. ಬಣ್ಣ ಮತ್ತು ಚರ್ಮಗಳಿಂದ ಅವರನ್ನು ತುಚ್ಚೀಕರಿಸಬಾರದು. ಅವರ ಆಹಾರ ಪದ್ದತಿ ಮತ್ತು ಸಂಸ್ಕೃತಿ ಎಲ್ಲವನ್ನು ಗೌರವಿಸಬೇಕು. ಮಾತ್ರವಲ್ಲ, ಎಲ್ಲಾ ಧರ್ಮದವರನ್ನು ಜೊತೆಗೆ ಕರೆದೊಯ್ಯುವ ಏಕೈಕ ದೇಶ ನಮ್ಮದಾಗಬೇಕು ಎಂದು ಕರೆಕೊಟ್ಟಿದ್ದಾರೆ.

ಬಿಜೆಪಿ ಪಕ್ಷವು ಒಂದು ದೇಶ ಒಂದು ಧರ್ಮದ ಸಿದ್ದಾಂತದ ಅಡಿಯಲ್ಲಿ ದೇಶವನ್ನು ನಡೆಸಲು ಮುಂದಾಗಿರುವ ಅವದಿಯಲ್ಲೇ ಇದೀಗ ಅದೇ ಪಕ್ಷದ ಪರೋಕ್ಷ ಗುರುವಾದ ಮೋಹನ್ ಭಾಗವತ್ ರು ಈ ರೀತಿ ಹೇಳಿರುವುದು ಪಕ್ಷಕ್ಕೆ ಬಾಯಿಕಟ್ಟಿದಂತೆ ಆಗಿದೆ.

ಈ ಹಿಂದೆ ಸತೀಶ್ ಚಾರಕಿಹೋಳಿ ಹೇಳಿದ ಹಿಂದು ಪದ ಪರ್ಶಿಯನ್ ಮೂಲದ್ದು ಅದು ಕೆಟ್ಟ ಅರ್ಥಕೊಡುವ ಪದವಾಗಿದೆ ಎಂದಾಗ, ಬಿಜೆಪಿಯ ಅನೇಕ ನಾಯಕರು ಪ್ರತಿಕ್ರಿಯೆ ನೀಡಿ ವಾಗ್ವಾದ ಸೃಷ್ಠಸಿದ್ದರು. ಆದರೆ ಅವರ ಮುಖ್ಯಸ್ಥರೇ ಹೇಳಿರುವ ಮಾತಿಗೆ ಏನು ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಸುಪ್ರೀಂ ಕೋರ್ಟ್ ಮತ್ತು ಜಾರಕಿಹೊಳಿ ಹೇಳಿದಂತೆಯೇ ಹಿಂದೂ ಎನ್ನುವುದು ಒಂದು ಜೀವನ ಶೈಲಿ ಎಂದು ತಮ್ಮ ಭಾ‍ಷಣದುದ್ದಕ್ಕೂ ಮೋಹನ್ ಭಾಗವತ್ ರು ಹೇಳಿರುವುದು ಪಕ್ಷಕ್ಕೆ ನುಂಗಲಾರದ ಸಂಕಟದಂತಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!