Friday, September 20, 2024

ಪ್ರಾಯೋಗಿಕ ಆವೃತ್ತಿ

ಡಾ.ಬಿ.ಆರ್.ಅಂಬೇಡ್ಕರ್ ಸೈದ್ಧಾಂತಿಕ ಬದ್ದತೆ ಕುರಿತು ವಿಚಾರ ಸಂಕಿರಣ

ಡಾ.ಬಿ.ಆರ್.ಅಂಬೇಡ್ಕರ್ ಸೈದ್ಧಾಂತಿಕ ಬದ್ದತೆ ಮತ್ತ ಹೋರಾಟಗಳ ಕುರಿತು ವಿಚಾರ ಸಂಕಿರಣ ಹಾಗೂ ಸಾಹಿತಿ ಕೆ.ರಾಜು ಅವರ ಪುಸ್ತಕಗಳ ಬಿಡುಗಡೆ ಸಮಾರಂಭ ನ.20ರಂದು ಬೆಳಿಗ್ಗೆ 10.30ಕ್ಕೆ ಮಂಡ್ಯನಗರ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ನಡೆಯಲಿದೆ ಎಂದು ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ಹೇಳಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಮಾಜಿ ಶಾಸಕ ಡಿ.ಎಸ್.ವೀರಯ್ಯ ಸಮಾರಂಭ ಉದ್ಘಾಟಿಸುವರು. ಜಿ.ಪಂ.ಮಾಜಿ ಅಧ್ಯಕ್ಷ ಬಿ.ಬಸವರಾಜು ಅಧ್ಯಕ್ಷತೆ ವಹಿಸುವರು. ಮಹಾತ್ಮರಲ್ಲಿ ಮಹಾತ್ಮ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕ‌ರ್ ಪುಸ್ತಕವನ್ನು ಸಾಹಿತಿ ಪ್ರೊ.ಕೆ.ಭಗವಾನ್ ಬಿಡುಗಡೆ ಮಾಡುವರು. ನೊಂದ ನುಡಿ ಕವಿತೆಗಳು ಪುಸ್ತಕವನ್ನು ಡಾ.ಬಾನಂದೂರು ಕೆಂಪಯ್ಯ ಬಿಡುಗಡೆ ಮಾಡುವರು ಎಂದರು.

ಡಾ.ಬಿ.ಆರ್. ಅಂಬೇಡ್ಕರ್ ಅವರ ಸೈದ್ಧಾಂತಿಕ ಬದ್ಧತೆ ಮತ್ತು ಹೋರಾಟಗಳು ವಿಚಾರ ಕುರಿತು ಉರಿಲಿಂಗ ಪೆದ್ದಿ ದಲಿತ  ಮಹಾ ಸಂಸ್ಥಾನ ಮಠ ಜ್ಞಾನಪ್ರಕಾಶ್ ಸ್ವಾಮೀಜಿ ವಿಚಾರ ಮಂಡನೆ ಮಾಡುವರು. ಮುಖ್ಯ ಅತಿಥಿಗಳಾಗಿ ದಲಿತ ಮುಖಂಡರಾದ ಗುರುಪ್ರಸಾದ್ ಕೆರಗೋಡು, ವೆಂಕಟಗಿರಿಯಯ್ಯ, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್ ಭಾಗವಹಿಸುವರು ಎಂದರು.

ಹೆಸರಾಂತ ಗಾಯಕ ಡಾ.ಬಾನಂದೂರು ಕೆಂಪಯ್ಯ, ಸ್ವಾಮಿ ಗಾಮನಹಳ್ಳಿ, ಡಾ.ಮಾದೇಶ್, ಡಾ.ಸುರೇಶ್,  ಮೀನಾಕ್ಷಿ ಮಂಡ್ಯ, ಕೊತ್ತತ್ತಿ ಮಹದೇವ್, ವಸಂತರಾಜ್ ಗಾಂಧಿನಗರ, ಚಂದ್ರಹಾಸ್ ಹಾಗೂ ನವೀನ್ ಕುಮಾರ್ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿಸಿದರು. ಹಲವು ಸಾಧಕರಿಗೆ ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ವೆಂಕಟೇಶ್, ರುದ್ರಪ್ಪ, ಕೆ.ರಾಜು, ಸೋಮಣ್ಣ, ಹುರುಗಲವಾಡಿ ರಾಮಯ್ಯ ಹಾಗೂ ಸದಾಶಿವ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!