Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಮೀಣ ಬದುಕಿನ ಮೇಲೆ ಬೆಳಕು ಚೆಲ್ಲುವ ಕನ್ನಡ ಸಾಹಿತ್ಯ

ಕನ್ನಡ ಸಾಹಿತ್ಯ ಗ್ರಾಮೀಣ ಬದುಕಿನ ಮೇಲೆ ಹೆಚ್ಚು ಬೆಳಕು ಚೆಲ್ಲುತ್ತದೆ, ಗ್ರಾಮೀಣ ಭಾಗದ ಹೂರಣಗಳನ್ನು ತೆರೆದ ಪುಸ್ತಕದಂತೆ ಕನ್ನಡ ಸಾಹಿತ್ಯ ನೀಡುತ್ತವೆ ಎಂದು ಪ್ರಾಧ್ಯಾಪಕ ಡಾ.ಸಿ.ಎಚ್.ಯತೀಶ್ವರ್ ತಿಳಿಸಿದರು.

ನಾಗಮಂಗಲ ತಾಲೂಕಿನ ಶ್ರೀಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ಕಾಲೇಜಿನಲ್ಲಿ ಕನ್ನಡ ವಿಭಾಗ ಗ್ರಂಥಾಲಯ ಮತ್ತು ಮೀನಾಕ್ಷಿ ಗಿರಿರಾಜ್ ಪ್ರತಿಷ್ಠಾನ ಚನ್ನರಾಯಪಟ್ಟಣ, ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಗಿರಿರಾಜ್ ರವರ ಕರುಣಾಕರ ಮತ್ತು ಲಚ್ಚವ್ವ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ಸಾಹಿತ್ಯದ ಭಂಡಾರವು ಅನೇಕ ದಿಗ್ಗಜರುಗಳು ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಜ್ಞಾನ ಬರಹವನ್ನು ನೀಡಿದ್ದಾರೆ. ಪ್ರಸ್ತುತ ಸಾಹಿತ್ಯದ ಇಂದಿನ ಬರಹಗಳು ಗ್ರಾಮೀಣ ಬದುಕಿನ ಆಸುಪಾಸಿನ ಹೂರಣಗಳನ್ನು ತೆರೆದಿಡುವಂತಹ ಸಾಹಿತ್ಯದ ಮೌಲ್ಯತೆ ಯುವ ಜನಾಂಗಕ್ಕೆ ಅಗತ್ಯವಾಗಿದೆ ಎಂದು ತಿಳಿಸಿದರು.

ಸಮಾರಂಭದಲ್ಲಿ ಶ್ರೀಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದ ಸ್ವಾಮೀಜಿ ಕೃತಿ ಬಿಡುಗಡೆ ಮಾಡಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಡಾ. ಎಚ್.ಎಸ್ ರವೀಂದ್ರ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಹೊನ್ನ ಶೆಟ್ಟಿ, ಗಿರಿರಾಜ್, ದಿನೇಶ್ ಹರಗನಹಳ್ಳಿ ಹಾಗೂ ಕಾಲೇಜು ಸಿಬ್ಬಂದಿ ವರ್ಗದವರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!