Thursday, November 19, 2026

ಪ್ರಾಯೋಗಿಕ ಆವೃತ್ತಿ

ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ

ಮಂಡ್ಯ ನಗರದ ಮುನಿಸಿಪಲ್ ಪ್ರೌಢಶಾಲಾ ಆವರಣದಲ್ಲಿ ಮಂಗಳವಾರ ಎಸ್.ಸಿ., ಎಸ್.ಟಿ ಪಂಗಡದ ದ್ವಿತೀಯ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಅನ್ನು ಡಿ.ಡಿ.ಪಿ.ಯು ಎಸ್.ಉಮೇಶ್ ವಿತರಿಸಿದರು.

ಈ ವೇಳೆ ಮಾತನಾಡಿದ ಅವರು, ಅಂಗನವಾಡಿ ಇಂದ ಯೂನಿವರ್ಸಿಟಿ ವರೆಗೆ ಉಚಿತ ಶಿಕ್ಷಣವನ್ನು ಸರಕಾರ ನೀಡುತ್ತಿದೆ. ಹಳ್ಳಿಗಳ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಉತ್ತಮ ಗುಣ ಮಟ್ಟದ ಸಮವಸ್ತ್ರ, ಶೂ, ಉತ್ತಮ ಗುಣಮಟ್ಟದ ಉಚಿತ ಬಿಸಿಯೂಟ ನೀಡುತ್ತದೆ. ಸರಕಾರದ ಈ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಯಾವುದೇ ವಿಷಯವನ್ನು ಆಯ್ಕೆ ಮಾಡಿಕೊಂಡಾಗ ಆ ವಿಷಯದ ಬಗ್ಗೆ ಪರಿಣಿತಿ ಹೊಂದುವುದು ಮುಖ್ಯವಾಗುತ್ತದೆ. ಕಲೆ, ವಾಣಿಜ್ಯ ವಿಭಾಗದ ವಿಷಯಗಳನ್ನು ತೆಗೆದುಕೊಂಡವರು ಕೀಳರಿಮೆಯಿಂದ ಇರಬಾರದು. ಹಾಗೆಯೇ ವಿಜ್ಞಾನ ವಿಷಯ ತೆಗೆದುಕೊಂಡದಕ್ಕೆ ಬೀಗಬಾರದು. ತಮ್ಮ ತಮ್ಮ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದುಕೊಳ್ಳಬೇಕು. ಆ ವಿಷಯಗಳಲಿ ಪರಿಣಿತರಾಗಬೇಕು ಎಂದು ತಿಳಿಸಿದರು.

ಸರ್.ಎಂ.ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಡಾ.ಸರ್ವಪಲ್ಲಿ ರಾಧಾಕೃಷ್ಣನ್, ಸರ್ ಸಿ.ವಿ.ರಾಮನ್ ಅವರಂತಹ ಮಹನೀಯರಂತೆ ಆದರ್ಶಮಯ ಜೀವನ ನಡೆಸಬೇಕು. ಅವರಂತೆ ಈ ದೇಶಕ್ಕೆ ಕೊಡುಗೆ ನೀಡಬೇಕು. ತಂದೆ, ತಾಯಿ ಹಾಗೂ ಈ ದೇಶಕ್ಕೆ ಹೊರೆಯಾಗಬಾರದು. ತಂದೆ ತಾಯಂದಿರನ್ನು ಗೌರವಿಸಿ, ಅವರಿಗೆ ಹೆಮ್ಮೆ ತರುವಂತ ಕೆಲಸ ಮಾಡಬೇಕು ಎಂದು ಹೇಳಿದರು. ಈ ವೇಳೆ 25 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜು ಪ್ರಾಶುಪಾಲರ ಸಂಘದ ಅಧ್ಯಕ್ಷ ಡಿ.ನಾಗರಾಜು, ಇಲಾಖೆಯ ಶಾಖಾಧಿಕಾರಿ ರಾಜೇಗೌಡ, ಸಂಘದ ಖಚಾಂಚಿ ಗುರುಲಿಂಗಯ್ಯ, ಸ್ವಾಮಿ, ಎಸ್.ನಾಗೇಶ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ