Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಕೇಟಿಂಗ್ : ಪಾಂಡವಪುರ ಮಕ್ಕಳು ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಪಾಂಡವಪುರ ರೋಲರ್ ಸ್ಕೇಟಿಂಗ್ ಕ್ಲಬ್‌ನ
ಮಕ್ಕಳು ಪದಕಗಳ್ನು ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ನ.16ರಿಂದ 19ರವರೆಗೆ ಬೆಂಗಳೂರಿನಲ್ಲಿ ನಡೆದ 39ನೇ ರಾಜ್ಯಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪಾಂಡವಪುರ
ರೋಲರ್ ಸ್ಕೇಟಿಂಗ್ ಕ್ಲಬ್ ವತಿಯಿಂದ ಮಂಡ್ಯ ಜಿಲ್ಲೆಯನ್ನು ಸುಮಾರು 16 ಮಕ್ಕಳು ಪ್ರತಿನಿಧಿಸಿದ್ದು, ಅದರಲ್ಲಿ
ಉತ್ತಮ ಪ್ರದರ್ಶನ ನೀಡಿ ಪದಕಗಳನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಗಮನಸೆಳೆದಿದ್ದಾರೆ.

ಕೆನ್ನಾಳು ಚಿನ್ಮಯ್, ದರಸಗುಪ್ಪೆ ತ್ರಿಭುವನ್, ಪಾಂಡವಪುರ ಪವನ್‌ಕುಮಾರ್, ವನವಿತ್, ಹಿರೇಮರಳಿ
ವನ್ಯ, ಪಾಂಡವಪುರ ದೀಕ್ಷಿತ್, ಕಿರಂಗೂರು ಯಶ್ವಂತ್, ಸ್ವನಿತ್, ಗಾನವಿ, ಐತಾಖಾನ್, ಹನೀಷ್, ರೂಪಲ, ಶ್ರೀರಂಗಪಟ್ಟಣ ಲಹರಿ, ಮಹದೇಶ್ವರಪುರ ವಿಸೃತ್, ಹಿರೇಮರಳಿ ದುವನ್‌ಗೌಡ, ಒಂದು ಬೆಳ್ಳಿ ಪದಕ, ಹಿರೇಮರಳಿ ವನ್ಯ ಒಂದು ಕಂಚು, ಪಾಂಡವಪುರ ಮೋನಿಷಾ ಎರಡು ಬೆಳ್ಳಿ ಪದಕವನ್ನು ಪಡೆದು 60ನೇ ರಾಷ್ಟ್ರ ಮಟ್ಟದ ಸ್ಕೇಟಿಂಗ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ಪಾಂಡವಪುರ ರೋಲರ್ ಸ್ಕೇಟಿಂಗ್ ಕ್ಲಬ್ ಕಳೆದ 5 ವರ್ಷಗಳಿಂದಲೂ ದರಸಗುಪ್ಪೆ ಮುರಳಿ
ಅವರನತೃತ್ವದಲ್ಲಿ ನಡೆಯುತ್ತಿದ್ದ ನೂರಾರು ಮಕ್ಕಳು ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಭಾಗವಹಿಸಿ ತಾಲೂಕಿಗೆ
ಕೀರ್ತಿ ತಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!