Sunday, November 22, 2026

ಪ್ರಾಯೋಗಿಕ ಆವೃತ್ತಿ

ಸ್ಪೀಡ್ ಸ್ಕೇಟಿಂಗ್ : ರಾಷ್ಟ್ರಮಟ್ಟಕ್ಕೆ ಜಿಗಿದ ”ಚಿನ್ನದ ಕುವರಿ ಮಂಡ್ಯದ ಶಾರ್ವರಿ”

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ಆಟೋಟ ಸ್ಪರ್ಧೆಯಲ್ಲಿ ಸ್ಪೀಡ್ ಸ್ಕೇಟಿಂಗ್ ನಲ್ಲಿ ಮಂಡ್ಯದ ಕುವರಿ ಶಾರ್ವರಿ ಅವರು ಮೂರು ಚಿನ್ನದ ಪದಕ ಗೆಲ್ಲುವ ಮೂಲಕ  ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕಳೆದ ನ.23ರಂದು ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ಸ್ಪೀಡ್ ಸ್ಕೇಟಿಂಗ್ ನಲ್ಲಿ 11 ರಿಂದ 14 ವರ್ಷ ದೊಳಗಿನ ವಿಭಾಗದಲ ಸ್ಫರ್ಧೆಯಲ್ಲಿ ಮಂಡ್ಯನಗರದ ಸೆಂಟ್ ಥಾಮಸ್ ಇಂಗ್ಲಿಷ್ ಶಾಲೆಯಲ್ಲಿ 6ನೇ ತರಗತಿಯ ವಿದ್ಯಾರ್ಥಿನಿ ಎಸ್.ಎಲ್. ಶಾರ್ವರಿ 500 ಮೀಟರ್, 1000 ಮೀಟರ್ ಹಾಗೂ 2000 ಮೀಟರ್ ಗಳ ಮೂರೂ ಸ್ಫರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದರು. ಈ ಮೂಲಕ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳನ್ನು ಗಳಿಸಿ ರಾಷ್ಟಮಟ್ಟಕ್ಕೆ ಆಯ್ಕೆಯಾದರು.

ಈಕೆಗೆ ಚಿನ್ಮಯ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್ ಜಿ.ಹೆಚ್.ತರಬೇತಿ ನೀಡಿದ್ದರು. ಶಾರ್ವರಿ ಅವರ ತಂದೆ ಶಶಿ ಅಪೂರ್ವ ಅವರು ಮಂಡ್ಯದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಹ ಬೋಧಕರಾಗಿ ಕೆಲಸ ನಿರ್ವಹಿಸುತ್ತಿದ್ದು, ರಂಗಭೂಮಿಯಲ್ಲೂ ನಾಟಕ ನಿರ್ದೇಶಕರಾಗಿ ಕ್ರಿಯಾಶೀಲರಾಗಿದ್ದಾರೆ. ತಾಯಿ ಕೆ.ಬಿ.ಲತಾ ಶ್ರೀರಂಗಪಟ್ಟಣ ತಾಲೂಕಿನ T.M. ಹೊಸೂರಿನ ಜ್ಞಾನವಾಹಿನಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಸಹ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ