ಮಂಡ್ಯ ಜಿಲ್ಲೆಯ ಪುರಾಣ ಪ್ರಸಿದ್ಧ ಐತಿಹಾಸಿಕ ತಾಣ ಶ್ರೀರಂಗಪಟ್ಟಣ ನಗರದ ಬಾಬುರಾಯನ ಕೊಪ್ಪಲು ಗೇಟ್ನಿಂದ ನಗುವನನಳ್ಳಿ ಗೇಟ್ ತನಕ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳಿಗೆ ಉಗ್ನಿ ಅಂಬು ಬೆಳೆದು ವಿದ್ಯುತ್ ಕಂಬವೇ ಕಾಣದಂತಾಗಿದೆ.
ಇದರ ನಿರ್ವಹಣೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಕರ್ತವ್ಯ. ಇವರ ಬೇಜವಾಬ್ದಾರಿಯಿಂದ ಈ ಅವಸ್ತೆಗೆ ಕಾರಣವಾಗಿದೆ ಎಂದು ಸ್ಥಳೀಯರು ಮಾಧ್ಯಮಕ್ಕೆ ದೂರಿದ್ದಾರೆ.
ಇದನ್ನೂ ಓದಿ:ನಾಲ್ವಡಿ ಸಾಧನೆ ಮಕ್ಕಳಿಗೆ ತಲುಪಿದರೆ ಸಾರ್ಥಕ : ನಿರ್ಮಲಾನಂದಶ್ರೀ
ಸುಮಾರು ನೂರಕ್ಕೂ ಹೆಚ್ಚು ವಿದ್ಯುತ್ಕಂಭಗಳಿದ್ದು ವಿದ್ಯುತ್ ದೀಪಗಳು ಕೆಟ್ಟಿರುವ ಕಾರಣ ಶ್ರೀರಂಗಪಟ್ಟಣ ಹೆದ್ದಾರಿ ಕಗ್ಗತ್ತಲಿನಂತಿದೆ. ಈ ವಿದ್ಯುತ್ ಕಂಬಗಳಿಗೆ ಉಗ್ನಿ ಅಂಬು ಬೆಳೆದು ನಿಂತಿರುವುದೇ ಸಾಕ್ಷಿ, ಈ ಹೆದ್ದಾರಿಯಲ್ಲಿ ದೇಶ ವಿದೇಶಗಳಿಂದ ಸಂಚರಿಸುವ ಪ್ರವಾಸಿಗರು, ಮಂತ್ರಿಗಳು, ನ್ಯಾಯಾಧೀಶರುಗಳು ಹೀಗೆ ಅನೇಕರು ಪ್ರತಿನಿತ್ಯ ಸಂಚರಿಸುತ್ತಾರೆ.
ಇಂತಹ ಪುರಾಣ ಪ್ರಸಿದ್ಧ ಐತಿಹಾಸಿಕ ತಾಣ ಶ್ರೀರಂಗಪಟ್ಟಣದ ಗೌರವವನ್ನು ಸ್ಥಳೀಯ ಶಾಸಕರಾಗಲಿ ಅಥವಾ ಮಂಡ್ಯ ಜಿಲ್ಲಾಧಿಕಾರಿಯಾಗಲಿ ಸಂಬಂಧ ಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಹೇಳಿ ಕೆಟ್ಟು ನಿಂತಿರುವ ವಿದ್ಯುತ್ ದೀಪಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.




