Sunday, May 19, 2024

ಪ್ರಾಯೋಗಿಕ ಆವೃತ್ತಿ

ನಾಲ್ವಡಿ ಸಾಧನೆ ಮಕ್ಕಳಿಗೆ ತಲುಪಿದರೆ ಸಾರ್ಥಕ : ನಿರ್ಮಲಾನಂದಶ್ರೀ

”ಮೈರೆಯೊಂದುಂಟೆ ಮೈಸೂರು ದೊರೆಯ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯ” ಈ ಹಾಡು ಅದ್ಧುತವಾದ ಸಾಹಿತ್ಯ ಹೊಂದಿರುವ ಜೊತೆಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸಾಧನೆಗಳನ್ನು ತಿಳಿಸುವ ಗೀತೆಯಾಗಿದೆ, ಇದು, ಇಂದಿನ ಶಾಲಾ-ಕಾಲೇಜುಗಳ ಮನಸ್ಸಿಗೆ ಇಳಿದು, ಅವರಿಗೆ ನಾಲ್ವಡಿ ಅವರ ಸಾಧನೆಗಳು ತಿಳಿದರೆ, ನಮ್ಮ ಬದುಕು ಸಾರ್ಥಕವಾಗುತ್ತದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದ  ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಂಡ್ಯ ತಾಲ್ಲೂಕಿನ ಕೊತ್ತತ್ತಿ ಗ್ರಾಮದ ಶ್ರೀರಾಮಮಂದಿರ ಆವರಣದಲ್ಲಿ ಇಂದು ನಡೆದ ನಾಲ್ವಡಿ ಅವರ ನೆನಪೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.

ಮರೆಯೊದುಂಟೆ ಮೈಸೂರು ದೊರೆಯ ಹಾಡನ್ನು ಹುರುಗಲವಾಡಿ ರಾಮಯ್ಯ ಹಾಡಿದರು, ಅದನ್ನು ಕೇಳುತ್ತಿದ್ದರೆ ಮತ್ತೇ ಮತ್ತೇ ಕೇಳಬೇಕೆನಿಸುತ್ತದೆ, ನಾವು ಶಾಲಾ ಕಾಲೇಜುಗಳ ಸಭೆ ಸಮಾರಂಭಗಳಲ್ಲಿ ಎಂತೆಂದದ್ದೋ ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿ ಕುಣಿಸುತ್ತಿದ್ದೇವೆ, ಆದರೆ ಇಂತಹ ಹಾಡುಗಳಿಗೆ ನೃತ್ಯ ರೂಪಕ ಅಳವಡಿಸಿದರೆ, ಅದಕ್ಕೆ ಮಕ್ಕಳಿಂದ ನೃತ್ಯ ಮಾಡಿಸಿದರೆ ನಾಲ್ವಡಿ ಅವರ ಸಾಧನೆಗಳು ಮಕ್ಕಳ ಮನಸ್ಸಿಗೆ ಇಳಿಯುತ್ತವೆ, ಅತಂಹ ಕೆಲಸಗಳು ಆಗಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ:ಉಗ್ನಿ ಅಂಬು ಬೆಳೆದು ಕಾಣದಂತಾಗಿರುವ ವಿದ್ಯುತ್ ಕಂಬಗಳು: ಸಾರ್ವಜನಿಕರ ಆಕ್ರೋಶ

ನಮ್ಮ ದೊಡ್ಡ ಸ್ವಾಮೀಗಳು ಹೇಳಿದ್ದರು, ಕೇಳಿದ್ದನ್ನು ಕೊಡವವರು ದೇವರು ಎಂದು, ಆದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಜೆಗಳು ಕೇಳದಿದ್ದರೂ, ಸ್ವತಃ ಎಲ್ಲವನ್ನು ಅವರೇ ನೀಡಿದ್ಧಾರೆ. ಅವರು ಸಾಮಾನ್ಯರಲ್ಲ, ಅಸಾಮಾನ್ಯ ವ್ಯಕ್ತಿ. ಆದ್ದರಿಂದ ನಾಲ್ವಡಿ ಹೆಸರಿನಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಾದರೂ ನಾವು ಅಲ್ಲಿಗೆ ತೆರಳುತ್ತೇನೆ, ಅಷ್ಟೊಂದು ಅಭಿಮಾನ ತಮಗೆ ಅವರ ಮೇಲಿದೆ ಎಂದು ನುಡಿದರು.

ಡಾ.ಶಿವರಾಮು ಅವರು ನಾಲ್ವಡಿ ಅವರು ಕುರಿತು ಉಪನ್ಯಾಸ ನೀಡಿದರು. ಕರ್ನಾಟಕ ಸಂಘದ ಜಯಪ್ರಕಾಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ತಹಶೀಲ್ದಾರ್ ಕುಂಞ ಅಹಮದ್ ಸೇರಿದಂತೆ ಗಣ್ಯರು ವಿವಿಧ ಕ್ಷೇತ್ರಗಳ ಸಾಧಕರಾದ ಕಾರಸವಾಡಿ ಸುರೇಶ್, ಕೆ.ಜವರೇಗೌಡ, ಹೆಚ್.ಸಿ.ಮಧುಸೂದನ್, ಚಂದ್ರಶೇಖರ್, ಲಂಕೇಶ್ ಮಂಗಲ, ಎಲ್.ಸಂದೇಶ್, ಮಂಜುಳ, ದೇವಮ್ಮ ಜವರೇಗೌಡ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿ.ಪಂ.ಮಾಜಿ ಅಧ್ಯಕ್ಷ ತಗ್ಗಹಳ್ಳಿ ವೆಂಕಟೇಶ್,  ನಾಲ್ವಡಿ ಟ್ರಸ್ಟ್ ನ ಪದಾಧಿಕಾರಿಗಳಾದ ತಗ್ಗಹಳ್ಳಿ ಮಂಜು, ಲೋಕೇಶ್ ಮಲ್ಲಿಗೆರೆ, ಸದ್ದಾಂ, ಮಾರಸಿಂಗನಹಳ್ಳಿ ಪ್ರತಾಪ್, ಶಕುಂತಲಾ ಕೊತ್ತತ್ತಿ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!