Thursday, November 19, 2026

ಪ್ರಾಯೋಗಿಕ ಆವೃತ್ತಿ

ರಾಜ್ಯಪಾಲರಿಗೆ ಜೀರೋ ಟ್ರಾಫಿಕ್: ಬಸವಳಿದ ರೋಗಿ


  • ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗಾಗಿ ಜೀರೋ ಟ್ರಾಫಿಕ್
  • ಹಳ್ಳದಲ್ಲಿ ಹೂತುಕೊಂಡ ಆಂಬುಲೆನ್ಸ್

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಜೀರೋ ಟ್ರಾಫಿಕ್ ಮಾಡಿದ ಪರಿಣಾಮ, ಮಂಡ್ಯದ ಹೊರವಲಯದಲ್ಲಿ ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಕೆಲಕಾಲ ಬಸವಳಿದ ಘಟನೆ ಇಂದು ನಡೆದಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಮಧ್ಯಾಹ್ನ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದರು.
ಈ ಹಿನ್ನೆಲೆಯಲ್ಲಿ ಪೊಲೀಸರು ಜೀರೋ ಟ್ರಾಫಿಕ್ ಮಾಡಿದ್ದರು. ಇದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ಸಂಚಾರ ದಟ್ಟಣೆಯಿಂದ ಕೂಡಿತ್ತು. ಇತ್ತ ವಿ.ಸಿ.ಫಾರ್ಮ್‌ನ ಕೃಷಿ ಮೇಳದಿಂದಲೂ ವಾಹನಗಳು ಆಗಮಿಸುತ್ತಿದ್ದ ಹಿನ್ನಲೆಯಲ್ಲಿ ಸಂಚಾರ ದಟ್ಟನೆ ಹೆಚ್ಚಾಯಿತು.

ಈ ವೇಳೆ ಮಂಡ್ಯದಿಂದ ತುರ್ತಾಗಿ ಮೈಸೂರಿಗೆ ರೋಗಿಯನ್ನು ಕರೆದುಕೊಂಡು ಆ್ಯಂಬುಲೆನ್ಸ್ ಹೋಗುವಾಗ ಇಂಡುವಾಳು ಗ್ರಾಮದ ಸಮೀಪ ಟ್ರಾಫಿಕ್ ತಪ್ಪಿಸಲು ರಸ್ತೆ ಬದಿಗೆ ಇಳಿಸಿದಾಗ ಗ್ಯಾಸ್ ಸಂಪರ್ಕಕ್ಕಾಗಿ ಪೈಪ್‌ಲೈನ್ ಅಳವಡಿಸಲು ತೆಗೆದಿದ್ದ ಗುಂಡಿಗೆ ಹೂತುಕೊಂಡಿದೆ. ಸುಮಾರು 20 ನಿಮಿಷ ಚಾಲಕ ಆಂಬುಲೆನ್ಸ್ ಮೇಲೆತ್ತಲು ಪರದಾಡಿದ್ದಾನೆ. ಇದನ್ನು ಕಂಡ ಜನರು ಚಾಲಕನಿಗೆ ಸಹಾಯ ಮಾಡಲು ಮುಂದಾಗಿ, ಟ್ರ್ಯಾಕ್ಟರ್‌ಗೆ ಹಗ್ಗಕಟ್ಟಿ ಎಳೆಯುವಾಗ ಹಗ್ಗವೂ ತುಂಡಾಗಿದೆ. ಬಳಿಕ ಜನರೇ ಸೇರಿ ಗುಂಡಿಯಿಂದ ಆಂಬುಲೆನ್ಸ್ ಮೇಲೆತ್ತಿದ್ದರು. ನಂತರ ಆಂಬುಲೆನ್ಸ್ ಮೈಸೂರಿಗೆ ತೆರಳಿತು.

ಗಣ್ಯರಿಗೆ ಪೋಲಿಸರು ಜೀರೋ ಟ್ರಾಫಿಕ್ ಕೊಟ್ಟಿದ್ದರಿಂದ ಆಂಬುಲೆನ್ಸ್ ಹಳ್ಳದಲ್ಲಿ ಹೂತು ಕೊಂಡಿತು. ರಾಜ್ಯಪಾಲರು ನಮ್ಮಂತೆಯೇ ಮನುಷ್ಯರಲ್ಲವೇ? ಒಂದು ವೇಳೆ ರೋಗಿ ಗಂಭೀರ ಸ್ಥಿತಿಯಲ್ಲಿದ್ದರೆ ಅರ್ಧ ಗಂಟೆ ಯಲ್ಲೇ ಆತನ ಪ್ರಾಣ ಹೋಗುತ್ತಿತ್ತು. ರಾಜ್ಯಪಾಲರಿಗೆ ಜೀರೋ ಟ್ರಾಫಿಕ್ ಮಾಡಿಕೊಟ್ಟದ್ದು ಸರಿಯಲ್ಲವೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ