ಮಂಡ್ಯ ತಾಲೂಕಿನ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ತೂಬಿನಕೆರೆ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ 18.48 ಕೋಟಿ ರೂ.ವೆಚ್ಚದಲ್ಲಿ ನೂತನವಾಗಿ 66/11 ಕೆವಿ, 2×20 ಎಂ.ವಿ.ಎ. ವಿದ್ಯುತ್ ಉಪ ಕೇಂದ್ರಕ್ಕೆ ಚೆಸ್ಕಾಂ ಅಧ್ಯಕ್ಷ ಹಾಗೂ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.
ನಂತರ ಮಾತನಾಡಿದ ಅವರು ಈ ಯೋಜನೆ ಯಿಂದ ಹಾಲಿ ಇರುವ 220/66/11 ಕೆ.ವಿ.ತೂಬಿನಕೆರೆ ಮತ್ತು 66/ 11 ಕೆವಿ ಮಂಡ್ಯ ವಿದ್ಯುತ್ ಕೇಂದ್ರದ ಮೇಲಿನ ಹೊರೆಯು ಕಡಿಮೆಯಾಗುತ್ತದೆ.ಹಾಗೂ ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ನೀಡಲು ಅನುಕೂಲವಾಗಲಿದೆ ಎಂದು ಹೇಳಿದರು.
66/11 ಕೆ.ವಿ.ವಿದ್ಯುತ್ ಉಪ ಕೇಂದ್ರ ಪ್ರಾರಂಭಿಸುವುದರಿಂದ ಈ ಭಾಗದಲ್ಲಿ ಬರುವ ಸುಂಡಹಳ್ಳಿ, ಹುಲಿಕೆರೆ, ಹುಲಿಕೆರೆಕೊಪ್ಪಲು, ಕಾಳೇನಹಳ್ಳಿ ,ತೂಬಿನಕೆರೆ, ರಾಗಿಮುದನಹಳ್ಳಿ, ಕೊಡಿಯಾಲ, ಪೀಹಳ್ಳಿ, ನೊದೆಕೊಪ್ಪಲು, ಎಲೆ ಚಾಕನಹಳ್ಳಿ, ಯಲಿಯೂರು,ಯರಹಳ್ಳಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ರೈತಾಪಿ ಜನರ ಕೃಷಿ ಪಂಪ್ ಸೆಟ್ ಗಳಿಗೆ ಕುಡಿಯುವ ನೀರಿನ ಯೋಜನೆಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆಗೆ ಅನುಕೂಲವಾಗಲಿದೆ ರೈತರು ಇದನ್ನು ಉಪಯೋಗಿಸಿಕೊಳ್ಳಬೇಕು ಎಂದು ಹೇಳಿದರು.
ಸಣ್ಣಪುಟ್ಟ ಸಮಸ್ಯೆ ಇದ್ದರೆ ಸಮಸ್ಯೆಯನ್ನು ಬಗೆಹರಿಸಿ ಕೊಂಡು ಕೆಲಸ ಮಾಡುತ್ತೇವೆ. ರೈತರು ಸಹಕಾರ ಕೊಡಬೇಕು.ಈ ಯೋಜನೆಯಿಂದ 10 ರಿಂದ 15 ವರ್ಷಗಳು ಸಮಸ್ಯೆ ಬರಲ್ಲ.ಹೈ ವೋಲ್ಟೇಜ್ ನಲ್ಲಿ ವೋಲ್ಟೇಜ್ ಅನ್ನು ಸಮರ್ಪಕ ವಾಗಿ ನಿಯಂತ್ರಿಸಿಕೊಂಡು ಮುಂದಿನ 6 -8 ತಿಂಗಳಲ್ಲಿ ಕೆಲಸವನ್ನು ಮುಗಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ಯಪಾಲಕ ಇಂಜಿನಿಯರ್ ಕಿಶೋರ್, ಸಹಾಯಕ ಕಾರ್ಯಪಲಕ ಇಂಜಿನಿಯರ್ ಹರ್ಷಿತ್,ಚಂದ್ರಮೌಳಿ, ಮುಖಂಡರಾದ ಕಾಳೇನಹಳ್ಳಿ ಮಂಜುನಾಥ್,ಎಂ.ಯಶಸ್, ಬೋರೇಗೌಡ, ಪಟೇಲ್ ಶಂಕರ್, ಸಿರಿ, ಚಿಕ್ಕಯ್ಯ, ರಾಜಣ್ಣ, ಕೃಷ್ಣ, ರಾಜೇಗೌಡ, ಸತೀಶ್,ಪುರುಷೋತ್ತಮ್ ಸೇರಿದಂತೆ ಮತ್ತಿತರರು ಭಾಗವಹಿಸಿದರು




