Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಮಯ-ಪ್ರತಿಭೆ ಎಲ್ಲವನ್ನೂ ಗುಲಾಮಗಿರಿಯ ಸುಧಾರಣೆಗೆ ವಿನಿಯೋಗಿಸುವವರೇ ಧ್ಯನರು : ಬಿ.ಆರ್.ಅಂಬೇಡ್ಕರ್ ಕೊನೆಯ ಸಂದೇಶ

ಗುಲಾಮಗಿರಿಯ ವಿಮೋಚನೆಗಾಗಿ ನಿಮ್ಮಲ್ಲಿ “ಉದಾತ್ತವಾದ ಧ್ಯೇಯ ಮತ್ತು ಗುರಿಗಳಿರಬೇಕು”. ಯಾರ (ದಲಿತರ) ನಡುವೆ ಹುಟ್ಟಿದರೋ ಅವರ ಕರ್ತವ್ಯಕ್ಕೆ ಜಾಗೃತರಾದ ನೀವೇ ಧನ್ಯರು. ದೀನದಲಿತರು ತಮ್ಮ “ಮಾನವ ಹಕ್ಕುಗಳನ್ನು” ಭದ್ರಪಡಿಸುವವರೆಗೆ ಭಾರೀ ಆಪತ್ತುಗಳು, ಅವಮಾನಗಳು, ಬಿರುಗಾಳಿಗಳು ಮತ್ತು ಅಪಾಯಗಳ ನಡುವೆಯೂ ತಮ್ಮ ಹೋರಾಟವನ್ನು ಮುಂದುವರೆಸಬೇಕು. ಇವು ಬಾಬಾ ಸಾಹೇಬ್ ಅವರು ತನ್ನ ಅನುಯಾಯಿಗಳಿಗೆ ನೀಡಿದ ಕೊನೆಯ ಸಂದೇಶ.

ಬಾಬಾ ಸಾಹೇಬರು ಪರಿನಿಬ್ಬಾಣ (ಡಿ.6,1956) ಹೊಂದಿದ್ದ 66 ವರ್ಷಗಳ ನಂತರ ಅವರ ಅಂತಿಮ ಸಂದೇಶವನ್ನು ಜನತೆಯ ಮುಂದಿಡಲು ನುಡಿ ಕರ್ನಾಟಕ.ಕಾಮ್ ಒಂದು ಸಣ್ಣ ಪ್ರಯತ್ನ ಮಾಡಿದೆ. ಅವರ ಅನುಯಾಯಿಗಳು ಇವುಗಳನ್ನು ಓದಿ, ಅರ್ಥೈಸಿಕೊಂಡು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂಬುದೇ ನಮ್ಮ ಆಶಯ.

ಬಾಬಾ ಸಾಹೇಬರ ವಾಕ್ಯಗಳಲ್ಲೇ ಓದಿ…..

“ನನ್ನ ಜೀವನದುದ್ದಕ್ಕೂ ಅವಿತರ ದುಃಖಗಳು ಮತ್ತು ಅಂತ್ಯವಿಲ್ಲದ ಹೋರಾಟದ ಮೂಲಕ ನನ್ನ ವಿರೋಧಿಗಳೊಂದಿಗೆ ಹೋರಾಡಿ ಹೋರಾಟದ ರಥವನ್ನು ಇಲ್ಲಿಯವರೆಗೆ ತಂದಿದ್ದೇನೆ”. ಬಹಳ ಕಷ್ಟಪಟ್ಟು ಈ ರಥವನ್ನು ಇಂದು ಕಾಣುವ ಸ್ಥಳಕ್ಕೆ ತಂದಿದ್ದೇನೆ. ಈ ರಥ ತನ್ನ ದಾರಿಯಲ್ಲಿ ಬರಬಹುದಾದ ಅಡೆತಡೆಗಳ ನಡುವೆಯೂ ಮುಂದೆ ಸಾಗಲಿ.

”ನನ್ನ ಅನುಯಾಯಿಗಳು ಹೋರಾಟದ ರಥವನ್ನು ಮುಂದೆ ತೆಗೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ, ಅವರು ಅದನ್ನು ಅಲ್ಲಿಯೇ ಬಿಡಬೇಕು. ಆದರೆ ಯಾವುದೇ ಸಂದರ್ಭದಲ್ಲೂ ಅವರು ಹಿಂದಿರುಗಿಸಲು ಅನುಮತಿಸಬಾರದು. ಇದು ನನ್ನ ಜನರಿಗೆ ನನ್ನ ಸಂದೇಶವಾಗಿದೆ. ”

“ನಮ್ಮ ಸಮಾಜದಲ್ಲಿ ಶಿಕ್ಷಣದಲ್ಲಿ ಸ್ವಲ್ಪ ಪ್ರಗತಿಯಾಗಿದೆ. ಶಿಕ್ಷಣವನ್ನು ಪಡೆಯುವ ಮೂಲಕ, ಕೆಲವರು ಉನ್ನತ ಸ್ಥಾನಗಳನ್ನು ತಲುಪಿದ್ದಾರೆ; ಆದರೆ ಈ ವಿದ್ಯಾವಂತರು ನನಗೆ ಮೋಸ ಮಾಡಿದ್ದಾರೆ. ಉನ್ನತ ಶಿಕ್ಷಣವನ್ನು ಪಡೆದ ನಂತರ ಅವರು ಮತ್ತೇ ಮರಳಿ ತನ್ನ ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ ಎಂದು ನಾನು ಅವರಿಂದ ಆಶಿಸುತ್ತಿದ್ದೆ; ಆದರೆ ಅವರು ಇಂದು ದೊಡ್ಡ ಗುಮಾಸ್ತರ ಗುಂಪಾಗಿದ್ದಾರೆ. ಅವರೆಲ್ಲರೂ ತಮ್ಮನ್ನು ಮತ್ತು ತಮ್ಮ ಕುಟುಂಬವನ್ನು ಪೋಷಿಸುವಲ್ಲಿ ನಿರತರಾಗಿದ್ದಾರೆ. ಇದು ನನ್ನನ್ನು ನಿರಾಸನನ್ನಾಗಿ ಮಾಡಿದೆ.

ನನ್ನ ಸಮುದಾಯದ ವಿದ್ಯಾವಂತರು ತಾವು ಪಡೆದುಕೊಂಡ ಹಣ, ಆಸ್ತಿ, ಅಂತಸ್ತು, ಶಿಕ್ಷಣ, ಗೌರವ, ಉದ್ಯೋಗ ಎಲ್ಲವನ್ನೂ ತನ್ನ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ದೊರಕಿಸಿಕೊಡಲು ಶ್ರಮಿಸಬೇಕು. ಅವರು ಪಡೆದದ್ದನ್ನು (Pay back to society) ಮರಳಿ ಸಮಾಜಕ್ಕೆ ಸಂದಾಯ ಮಾಡಬೇಕು. ಆಗ ನಾನು ಕಂಡ ಕನಸು ನನಸಾಗುತ್ತದೆ.

ಸಾಮಾಜಿಕ ಗೌರವವನ್ನು ಪಡೆಯಲು ಕೇವಲ ಶೈಕ್ಷಣಿಕ ಪ್ರಗತಿಯೊಂದೇ ಸಾಕಾಗುವುದಿಲ್ಲ. ಸಾಮಾಜಿಕ ಗೌರವವನ್ನು ಪಡೆಯಲು ಸಾಮಾಜಿಕ ಚಳುವಳಿಯನ್ನು ಬಲಪಡಿಸಬೇಕು. ನಮ್ಮ ಸಾಮಾಜಿಕ ಆಂದೋಲನವು ಪ್ರಬಲವಾಗಿದ್ದರೆ, ಜನ್ಮದ ಆಧಾರದ ಮೇಲೆ ನಮ್ಮನ್ನು ಸಾಮಾಜಿಕವಾಗಿ ಅವಮಾನಿಸಲು ಯಾರೂ ಧೈರ್ಯ ಮಾಡುವುದಿಲ್ಲ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!