ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ವತಿಯಿಂದ ಐ.ಎ.ಎಸ್. ಮತ್ತು ಪೂರ್ವಭಾವಿ ಪರೀಕ್ಷೆಗಳಿಗೆ 15 ತಿಂಗಳ ಅವಧಿಯ ವಸತಿ ಸಹಿತ ತರಬೇತಿ ಹಾಗೂ 3 ತಿಂಗಳ ಅವಧಿಯ ವಿವಿಧ ಬ್ಯಾಂಕ್ಗಳ ಪ್ರೋಬೇಷನರಿ ಆಫೀಸರ್ ಹುದ್ದೆಗಳ ನೇಮಕ ಪರೀಕ್ಷೆಗೆ ಪ್ರತ್ಯೇಕ ಬ್ಯಾಚ್ಗಳಲ್ಲಿ ಡಿ.18ರಿಂದ ತರಬೇತಿ ಪ್ರಾರಂಭಿಸಲಾಗುತ್ತಿದೆ.
ರಾಜ್ಯದ ಪ್ರಖ್ಯಾತ ವಿಷಯತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು. ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯ ನೀಡಲಾಗುವುದು. ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ಹಾಗೂ ಪದವಿ ಮುಗಿಸಿರುವ ವಿದ್ಯಾರ್ಥಿಗಳಿಗೆ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ನೇಮಕ ಮಾಡಿಕೊಳ್ಳಲಿರುವ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡುವ ಬುನಾದಿ ತರಬೇತಿಯನ್ನು ಡಿ.25ರ ಭಾನುವಾರ ಅಥವಾ ಸರ್ಕಾರಿ ರಜಾ ದಿನಗಳಲ್ಲಿ 10 ದಿನಗಳಂದು ನೀಡಲಾಗುವುದು.
ತರಬೇತಿ ಪಡೆಯಲಿಚ್ಛಿಸುವ ಆಸಕ್ತ ವಿದ್ಯಾರ್ಥಿಗಳು ಹಾಗೂ ಉದ್ಯೋಗಾಕಾಂಕ್ಷಿಗಳು ಡಿ.15ರೊಳಗೆ ಟ್ರಸ್ಟ್ ನ ಸಂಚಾಲಕರು ಡಾ.ಕೆ.ಬಿ.ಬೋರಯ್ಯ ಮೊ.99022-41722, 94480-19306, 94483-83012 ಇಲ್ಲಿಗೆ ಕರೆ ಮಾಡಿ ಹೆಸರು ನೊಂದಾಯಿಸಿಕೊಳ್ಳಲು ಕೋರಲಾಗಿದೆ.