Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಧಿವೇಶನಕ್ಕಿಂತ ಪಂಚರತ್ನ ಯಾತ್ರೆ ನನಗೆ ಮುಖ್ಯ : ಎಚ್.ಡಿ.ಕುಮಾರಸ್ವಾಮಿ

ಕಳೆದ ಹಲವು ಅಧಿವೇಶನಗಳಲ್ಲಿ ಮಾತನಾಡಿದ ಯಾವ ವಿಚಾರವೂ ಅನುಷ್ಠಾನ ಗೊಂಡಿಲ್ಲ. ಹಾಗಾಗಿ ನನಗೆ ಅಧಿವೇಶನಕ್ಕಿಂತ ರೈತರು, ಜನಸಾಮಾನ್ಯರಿಗೆ ತರಲು ಹೊರಟಿರುವ ಪಂಚರತ್ನ ರಥಯಾತ್ರೆ ನನಗೆ ಬಹಳ ಮುಖ್ಯವೆಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ‌.ಕುಮಾರಸ್ವಾಮಿ ತಿಳಿಸಿದರು.

ಮಂಡ್ಯ ತಾಲ್ಲೂಕಿನ ಹನಕೆರೆ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,75 ವರ್ಷದಿಂದ ಈ ದೇಶದಲ್ಲಿ ಹಾಗಿರುವ ಅನಾಹುತ ಸರಿಪಡಿಸಬೇಕು. ಅಧಿವೇಶನದಲ್ಲಿ ಕುಳಿತು ಮಾತನಾಡಿದ್ರೆ ಬಗೆಹರಿಯಲ್ಲ.
ಎಷ್ಟು ವಿಧಾನ ಸಭಾ ಕಲಾಪದಲ್ಲಿ ಮಾತನಾಡಿರುವುದನ್ನ ಈ ಸರ್ಕಾರ ಜಾರಿ ಮಾಡಿದೆ ಎಂದು ಪ್ರಶ್ನೆ ಮಾಡಿದರು.

ನನಗೆ ಕಳೆದ ಮೂರು ದಿನಗಳಿಂದ ಮಂಡ್ಯ ಜಿಲ್ಲೆಯ ಜನರು ಅತ್ಯಂತ ಅಭೂತಪೂರ್ವವಾಗಿ ಸ್ವಾಗತ ನೀಡಿದ್ದಾರೆ. ನಮ್ಮ ಮಂಡ್ಯ ಭಾಗದಲ್ಲಿ ಕಳೆದ ಚುನಾವಣೆಗಿಂತ ಹೆಚ್ಚಿನ ಒಲವು ಈ ಬಾರಿ ಕಾಣುತ್ತಿದೆ. ಅವರ ಕಷ್ಟ- ಸುಖಗಳಲ್ಲಿ ಭಾಗಿಯಾಗುವ ಪಂಚರತ್ನ ಯಾತ್ರೆಯೇ ನನಗೆ ಅಧಿವೇಶನಕ್ಕಿಂತ ಹೆಚ್ಚು ಮುಖ್ಯ ಎಂದರು.

ಈಗಿನ ಸರ್ಕಾರಗಳು ರೈತರನ್ನ ಕಡೆಗಣೆನೆ ಮಾಡಿದೆ.ಗ್ರಾಮೀಣ ಪ್ರದೇಶಗಳಲ್ಲಿ ಜೆಡಿಎಸ್ ಪಕ್ಷ ಅನಿವಾರ್ಯವಾಗಿದೆ. ರೈತರು, ಹಿಂದುಳಿದವರು, ದೀನ ದಲಿತರು ತಮ್ಮ ಅಭಿವೃದ್ಧಿಗೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕೆಂದು ಹೇಳುತ್ತಿದ್ದಾರೆ ಎಂದರು.

ಚುನಾವಣಾ ಗಿಮಿಕ್

ಪಂಚಮಶಾಲಿ ಹೋರಾಟದ ಮದ್ಯಂತರ ವರದಿ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು,
ಇದರೊಳಗೆ ಚುನಾವಣೆ ಗಿಮಿಕ್ ಇದೆ. ಪಂಚಮಸಾಲಿಗಳಿಗೆ ತಾತ್ಕಾಲಿಕವಾಗಿ ತುಪ್ಪ ಸವರುವ ಕೆಲಸವನ್ನು ಸರ್ಕಾರ ಮಾಡ್ತಿದೆ. ವೈಜ್ಞಾನಿಕವಾಗಿ ಕಾನೂನು ವ್ಯಾಪ್ತಿಯಲ್ಲಿ ಸಮುದಾಯಕ್ಕೆ ಸ್ಪಂದಿಸುವ ಕೆಲಸವನ್ನು ಮಾಡಬೇಕು. ಪಂಚಮಶಾಲಿ ಸಮಾಜ ಕೃಷಿ ನಂಬಿ ಬದುಕುವ ಸಮಾಜ. ವಾಸ್ತವಾಂಶ ಅರಿತು ಸರ್ಕಾರ ನಿರ್ಧಾರಕ್ಕೆ ಬರಬೇಕು.ಅವರ ದಾರಿತಪ್ಪಿಸಬಾರದು ಎಂದರು.

ಪ್ರಚೋದನೆ ಸರಿಯಲ್ಲ

ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದದಲ್ಲಿ ಕರ್ನಾಟಕಕ್ಕೆ ಚೀನಾದಂತೆ ನುಗ್ಗಿಸುತ್ತೇವೆ ಎಂಬ ರಾಜಕೀಯ ನಾಯಕನ ಪ್ರಚೋದನಾಕಾರಿ ಹೇಳಿಕೆ ಸರಿಯಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ, ಒಕ್ಕೂಟದ ವ್ಯವಸ್ಥೆಯಿದ್ದು,
ವೀರಾವೇಶದ ಹೇಳಿಕೆಯಂತೆ ಆ ರೀತಿ ಮಾಡಲು ಸಾಧ್ಯವಿಲ್ಲ ಎಂದರು.

ನಾವು ಹಿಂದೆ ನಿಲ್ತೇವೆ

ಒಕ್ಕಲಿಗರ ಸಮಾಜದ ಬದುಕು ನಮಗೆ ಗೊತ್ತಿಲ್ಲ. ಒಕ್ಕಲಿಗರ ಸಮಾಜದ ಬದುಕಿನ ಬಗ್ಗೆ ಐದು ವರ್ಷ ವಿಶ್ರಾಂತಿಯಲ್ಲಿದ್ದವರು ಇಂದು ಬಹಳ ರಿಸರ್ಚ್ ಮಾಡಿ, ಕಾಳಜಿ ಹೊಂದಿ ನೆನ್ನೆ ಹೇಳಿಕೆ ಕೊಟ್ಟಿದ್ದಾರೆ.
ಅವರು ಒಕ್ಕಲಿಗರಿಗೆ ನ್ಯಾಯ ಕೊಡಿಸಲು ಮುಂದೆ ಇದ್ರೆ ನಾವು ಹಿಂದೆ ನಿಂತು ಕೆಲಸ ಮಾಡ್ತೇವೆ ಎಂದು ವ್ಯಂಗ್ಯವಾಡಿದರು.

ಈ ಸಂದರ್ಭದಲ್ಲಿ ಶಾಸಕ ಎಂ.ಶ್ರೀನಿವಾಸ್, ಮನ್ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು, ಉಪಾಧ್ಯಕ್ಷ ರಘುನಂದನ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮುಖಂಡರಾದ ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಎಚ್.ಎನ್.ಯೋಗೇಶ್, ಮುದ್ದನಘಟ್ಟ ಮಹಾಲಿಂಗೇಗೌಡ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!