Thursday, September 19, 2024

ಪ್ರಾಯೋಗಿಕ ಆವೃತ್ತಿ

ಶೋಷಿತರಿಗೆ ಶಿಕ್ಷಣ ನೀಡಿದ ವಿದ್ಯಾದಾತೆ ಸಾವಿತ್ರಿ ಬಾಯಿ ಫುಲೆ

ಶೋಷಿತ ಸಮುದಾಯಗಳಿಗೆ ಶಿಕ್ಷಣ ನೀಡಿದ ದೇಶದ ಮೊಟ್ಟ ಮೊದಲ ಶಿಕ್ಷಕಿ, ವಿದ್ಯಾದಾತೆ ಸಾವಿತ್ರಿಬಾಯಿ ಫುಲೆ ಎಂದು ಶ್ರೀನಿವಾಸಪುರ ಸರ್ಕಾರಿ ಶಾಲೆ ಮುಖ್ಯಶಿಕ್ಷಕಿ ಆಶಾರಾಣಿ ಸ್ಮರಿಸಿದರು.

ಮಂಡ್ಯ ನಗರದ ವಿದ್ಯಾನಗರದ ಅಂಬೇಡ್ಕರ್ ವಿವಿದ್ದೋದ್ದೇಶ ಸಹಕಾರ ಬ್ಯಾಂಕ್‌ನ ಕಚೇರಿಯಲ್ಲಿ ತಾಲೂಕು ಶಾಖೆ ಆಡಳಿತ ಮಂಡಳಿ ಆಯೋಜಿಸಿದ್ದ ‘ವಿದ್ಯಾದಾತೆ ಸಾವಿತ್ರಿಬಾಯಿ ಫುಲೆ ಜಯಂತಿ’ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ದೀಪ-ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಮನುಸ್ಕೃತಿ ಸಂವಿಧಾನದ ರಾಜಾಡಳಿತ ವ್ಯವಸ್ಥೆಯಲ್ಲಿ ಶೋಷಿತ ಸಮುದಾಯಗಳಿಗೆ ಶಿಕ್ಷಣ ಅಧಿಕಾರ ನಿಷೇಧವಿದ್ದ ಕಾಲಘಟ್ಟದಲ್ಲಿ ಶಿಕ್ಷಣ ಕ್ರಾಂತಿ ಮಾಡಿದ್ದು, ಸಾಮಾನ್ಯ ಸಾಧನೆಯಲ್ಲ, ಆದ್ದರಿಂದ ಸಾವಿತ್ರಿಬಾಯಿ ಫುಲೆ ಅವನ್ನು ಆಧುನಿಕ ಶಿಕ್ಷಣದ ಮೊದಲ ಶಿಕ್ಷಕಿ ಕರೆಯುತ್ತಾರೆ ಎಂದು ಸ್ಮರಿಸಿದರು.

1846-47ರಲ್ಲಿ ಗೆಳತಿ ಫಾತಿಮಾ ಶೇಕ್‌ರೊಂದಿಗೆ ಜೋತಿ ಬಾಫುಲೆ ಅವರ ಒತ್ತಾಸೆಯ ಮೇರೆಗೆ ಅಹ್ಮದ್ ನಗರದಲ್ಲಿ ಶಿಕ್ಷಕರ ತರಬೇತಿ ಪಡೆದು, ಮುಂದೆ ಸಾವಿತ್ರಿ ಬಾಯಿ ಶಿಕ್ಷಕಿಯಾಗಿ 40ಕ್ಕೂ ಹೆಚ್ಚು ಶಾಲೆಗಳು, ವಸತಿ ನಿಲಯಗಳನ್ನು ತೆರೆಯುತ್ತಾರೆ, ಅವರಿಗೆ ನೆರಳಿನಂತೆ ಜೊತೆಯಾಗಿದ್ದ ಫಾತಿಮ ಶೇಕ್ ಕೊಡುಗೆ ಅಪಾರ ಎಂದು ನುಡಿದರು.

ಕದಸಂಸ ಮೈಸೂರು ವಿಭಾಗೀಯ ಸಂಚಾಲಕ ತಗ್ಗಹಳ್ಳಿ ಟಿ.ಡಿ.ಬಸವರಾಜ್ ಮಾತನಾಡಿ, ಬ್ರಾಹ್ಮಣರ ಶಾಸ್ತ್ರಗಳನ್ನು ಕಿತ್ತು ಎಸೆದು ಹಾಕು ಎಂದು ತಮ್ಮ ‘ಕಾವ್ಯ ಅರಳಿದೆ’ ಸಂಕಲನದಲ್ಲಿ ಕರೆ ನೀಡಿ ಬೆಳಕಾಗಿರುವ ಮಾತೆ ಸಾವಿತ್ರಿಬಾಫುಲೆ ಅವರನ್ನು ಸಮಾಜ ಎಂದಿಗೂ ಮರೆಯಬಾರದು ಎಂದರು.

ಕಾರ್ಯಕ್ರಮದಲ್ಲಿ ಎವಿಎಸ್‌ಎಸ್ ತಾಲೂಕು ಶಾಖೆ ಆಡಳಿತ ಮಂಡಳಿ ಅಧ್ಯಕ್ಷ ಗುರುಶಂಕರ್, ಮುಖ್ಯಶಿಕ್ಷಕಿಯರಾದ ಎಸ್.ಎಂ.ಗಿರೀಜಾ, ಸುನೀತಾ, ಜರಿನಾ ಬೇಗಮ್, ನಿವೃತ್ತ ಶಿಕ್ಷಕ ದೊಡ್ಡಸ್ವಾಮಿ, ಬ್ಯಾಂಕ್‌ನ ಸದಸ್ಯರಾದ ಜಯಶಂಕರ್, ಕುಮಾರ್, ಮುರುಗನ್, ಶಿವಪ್ರಸಾದ್, ಉಮ್ಮಡಹಳ್ಳಿ ಉಮೇಶ್, ಸಿಇಓ ವರಲಕ್ಷ್ಮಿ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!