Thursday, September 19, 2024

ಪ್ರಾಯೋಗಿಕ ಆವೃತ್ತಿ

ಗ್ರಾಮೀಣ ಪ್ರದೇಶದ ಜನರು ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ

ವರದಿ:ಪ್ರಭು ವಿ.ಎಸ್

ಗ್ರಾಮಾಂತರ ಪ್ರದೇಶದ ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಚಿತ್ರನಟ ಶ್ರೀನಗರ ಕಿಟ್ಟಿ ಸಲಹೆ ನೀಡಿದರು.

ಮದ್ದೂರು ತಾಲೂಕಿನ ಕೆ.ಹೊನ್ನಲಗೆರೆ ಸರಕಾರಿ ಶಾಲಾ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಎಚ್.ಬಿ.ಜಯರಾಮು ಅವರ ಮೊದಲನೇ ವರ್ಷದ ಪುಣ್ಯಸ್ಮರಣೆ ಪ್ರಯುಕ್ತ ಶಂಕರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೆಂಗಳೂರು ಹಾಗೂ ರೋಟರಿ ವತಿಯಿಂದ ಹಮ್ಮಿಕೊಂಡಿದ್ದ ಬೃಹತ್ ಆರೋಗ್ಯ ಮತ್ತು ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ನಮಗೆ ಹಣ, ಐಶ್ವರ್ಯಕ್ಕಿಂತ ಆರೋಗ್ಯ ಮುಖ್ಯ.ಉತ್ತಮ ಆರೋಗ್ಯ ಇದ್ದಾಗ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ ಎಂಬುವುದನ್ನು ಅರಿತು ಪ್ರತಿಯೊಬ್ಬರು ಆರೋಗ್ಯ ಬಗ್ಗೆ ಗಮನವಹಿಸಿ ಸುಖಮಯ ಜೀವನ ನಡೆಸಬೇಕೆಂದು ಸಲಹೆ ನೀಡಿದರು.

ಮುನ್ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, ಪ್ರಪಂಚದಲ್ಲಿ ರಕ್ತಕ್ಕೆ ಪರ್ಯಾಯವಾದ ವಸ್ತು ಬೇರೆ ಯಾವುದು ಇಲ್ಲದ ಕಾರಣ ಆರೋಗ್ಯವಂತರು ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿರುವ ಜೀವಗಳಿಗೆ ಆಸರೆಯಾಬೇಕು ಎಂದು ಮನವಿ ಮಾಡಿದರು.

Nudikarnataka.com

ಕೆ.ಹೊನ್ನಲಗೆರೆ ಸೇರಿದಂತೆ ಸುತ್ತಮುತ್ತಲ ಹಲವಾರು ಹಳ್ಳಿಗಳ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಂಡರು ಹಾಗೂ ನೂರಾರು ಯುವಕರು ರಕ್ತದಾನ ಮಾಡಿ ಗಮನ ಸೆಳೆದರು. ಮನ್ ಮುಲ್ ನಿರ್ದೇಶಕಿ ಕು.ರೂಪ,ಡಾ.ಸುನೀಲ್ ಮಾತನಾಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ಮಾದನಯಕನಹಳ್ಳಿ ರಾಜಣ್ಣ,ವೈದ್ಯರಾದ ಭಾಸ್ಕರ್, ರೋಹಿತ್, ಸುಬ್ಬು, ರೋಟರಿ ಸುರೇಶ, ಜೆ.ಕೆ. ಗ್ರೂಪ್ ಮಾಲೀಕ ಪ್ರಮೋದ್, ಪ್ರಸಾದ್,ಮುಖಂಡರಾದ ಸುಪ್ರೀತ್,ಸಂತೋಷ್ ಎಚ್.ಬಿ.ಮಹದೇವ, ಎಚ್.ಬಿ.ಶಿವಣ್ಣ, ಎಚ್.ಬಿ.ರಮೇಶ್, ಎಚ್.ಪಿ.ಸ್ವಾಮಿ,ಅಂಕಪ್ಪ ಬ್ಯಾಡ್ರಳ್ಳಿ ಪುಟ್ಟಸ್ವಾಮಿ,ಸತೀಶ್, ಡೈಮಂಡ್ ಬಾಯ್ಸ್ ಪದಾಧಿಕಾರಿಗಳು ಹೊನ್ನಲಗೆರೆ ಗ್ರಾಮಸ್ಥರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!