Thursday, September 19, 2024

ಪ್ರಾಯೋಗಿಕ ಆವೃತ್ತಿ

ಸ್ಯಾಂಟ್ರೋ ರವಿಯನ್ನು ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ!

ಸ್ಯಾಂಟ್ರೋ ರವಿಯನ್ನ ಪೊಲೀಸರು ಹುಡುಕುತ್ತಿದ್ದಾರಂತೆ! ಗೃಹ ಇಲಾಖೆಯ ವರ್ಗಾವಣೆಯ ಹೊಣೆ ಹೊತ್ತವನು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದು ಪರಮ ಹಾಸ್ಯವಲ್ಲವೇ! ಪೊಲೀಸರು ಆತನನ್ನು ಒಮ್ಮೆ ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ! ಸಿಡಿ ಸರ್ಕಾರದ ಸಂಪೂರ್ಣ ಜಾತಕ ಆತನ ಬಳಿ ಇರುವಾಗ ಆತನ ತನಿಖೆ ಸಾಧ್ಯವೇ? ಎಂದು ಕರ್ನಾಟಕ ಕಾಂಗ್ರೆಸ್ ಬಿಜೆಪಿ ಸರ್ಕಾರದ ಅಕ್ರಮಗಳನ್ನು ಟ್ವೀಟ್ ಮೂಲಕ ಜನರ ಮುಂದಿಟ್ಟಿದೆ.

“>

ಸರ್ಕಾರದ ಚೀಫ್ ಬ್ರೋಕರ್ ಸ್ಯಾಂಟ್ರೋ ರವಿಯನ್ನು ಇನ್ನೂ ಬಂಧಿಸಲಾಗಿಲ್ಲ, ಪತ್ನಿಯ ದೂರಿನ ಹೊರತಾಗಿ ಬೇರೆ ದೂರು ದಾಖಲಾಗಿಲ್ಲ, ತನಿಖೆಗೆ ಮುಂದಾಗಿಲ್ಲ. ಸಿಎಂ ಬೊಮ್ಮಾಯಿ ಮಗನ ಸ್ವೀಟ್ ಬ್ರದರ್‌ನನ್ನು ರಕ್ಷಿಸುತ್ತಿರುವುದು ಯಾರು ? ಬೊಮ್ಮಾಯಿ ಅವರೇ? ಆತನನ್ನು ಮುಟ್ಟಿದರೆ ‘ಸಿಡಿ ಕ್ರಾಂತಿ’ ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ? ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.

ಬಿಜೆಪಿ ಮುಖಂಡರ ಕಿತ್ತಾಟದಲ್ಲಿ ಎಲ್ಲವೂ ಹೊರಬರುತ್ತಿದೆ. ಕರ್ನಾಟಕದ ಸುಬ್ರಹ್ಮಣ್ಯಸ್ವಾಮಿಯಾದ ಯತ್ನಾಳ್ ಸಿಡಿ ಬ್ಲಾಕ್ಮೇಲ್ ಮಾಡಿ ನಿರಾಣಿ ಮಂತ್ರಿಯಾಗಿದ್ದಾರೆ ಎಂದಿದ್ದಾರೆ, ಯಾರ ಸಿಡಿ? ಸಿಡಿ ಮಾಡಿಕೊಟ್ಟಿದ್ದು ಸ್ಯಾಂಟ್ರೋ ರವಿಯೇ? ನಿರಾಣಿ ಹಣ ಕೊಟ್ಟಿದ್ದು ಯಾರಿಗೆ? ಆ ಹಣದ ಬಗ್ಗೆ ಇಡಿ ತನಿಖೆ ಏಕಿಲ್ಲ? ಬೊಮ್ಮಾಯಿ ಅವರೇ ಉತ್ತರಿಸಬೇಕಿದೆ ಕಾಂಗ್ರೆಸ್ ಕಾಲೆಳೆದಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!