Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಣಜಿಗ ಸಮುದಾಯಕ್ಕೆ 2ಎ ಉದ್ಯೋಗ ಮೀಸಲಾತಿ ಒದಗಿಸಲು ಆಗ್ರಹ

3ಎ ನಲ್ಲಿರುವ ಬಣಜಿಗ ಸಮುದಾಯಕ್ಕೆ 2ಎ ಉದ್ಯೋಗ ಮೀಸಲಾತಿ ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಕೂಡಲೇ 2ಎ ಮೀಸಲಾತಿ ಕಲ್ಪಿಸಬೇಕೆಂದು ಯೋಗಿ ನಾರೇಯಣ ಬಣಜಿಗ (ಬಲಿಜ) ಸಂಘದ ಮುಖಂಡ ಕೆ.ಎನ್.ವಿಜಯ್ ಕೊಪ್ಪ ಆಗ್ರಹಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿರುವ ಸುಮಾರು 60 ಲಕ್ಷ ಬಲಿಜರಲ್ಲಿ ಸಾಕಷ್ಟು ಮಂದಿ ಇವತ್ತಿಗೂ ಕೂಲಿ ಕೆಲಸ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಇನ್ನು ತಮ್ಮ ಪಾರಂಪರಿಕ ವೃತ್ತಿ, ಕಸುಬುಗಳಾದ ಬಳ ಮಲ್ಹಾರ, ಅರಿಶಿಣ, ಕುಂಕುಮ, ಪೂಜಾ ಸಾಮಾಗ್ರಿಗಳ ವ್ಯಾಪಾರ ಮಾಡುವ ಮೂಲಕ ಬಲಿಜಿಗರು ಬದುಕು ಕಂಡುಕೊಂಡಿದ್ದಾರೆ. ಆದ್ದರಿಂದ ಇತರೆ ಜನಾಂಗದವರಿಗೆ ಇರುವಂತೆ ಶಿಕ್ಷಣ, ಉದ್ಯೋಗ ಕ್ಷೇತ್ರಗಳಲ್ಲಿ ಮೀಸಲಾತಿ ಒದಗಿಸಬೇಕೆಂದು ಆಗ್ರಹಿಸಿದರು.

ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ವಿದ್ಯಾಭ್ಯಾಸಕ್ಕೆ ಮಾತ್ರ 25 ಮೀಸಲಾತಿ ನೀಡಿ ಉಳಿದಂತೆ ಉದ್ಯೋಗ ಕ್ಷೇತ್ರಕ್ಕೂ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರೂ ಆದರೆ ಇದುವರೆಗೆ ನೀಡದೇ ಇರುವುದರಿಂದ ನಮ್ಮ ಜನಾಂಗವು ಜನಾಂಗವು ಹಿಂದುಳಿದಿದೆ, ಆದ್ದರಿಂದ ಈಗಿನ ಸರ್ಕಾರ ಬಣಜಿಗ ಸಮುದಾಯಕ್ಕೆ 2ಎ ಉದ್ಯೋಗ ಮೀಸಲಾತಿ ಒದಗಿಸಬೇಕೆಂದು ಆಗ್ರಹಿಸಿದರು.

ವಧು-ವರರ ಸಮಾವೇಶ

ಮೈಸೂರಿನ ಸರಸ್ವತಿಪುರಂನಲ್ಲಿರುವ ಶ್ರೀಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ ವತಿಯಿಂದ ಜ.22ರಂದು ಸಂಘದ ಆವರಣದಲ್ಲಿ, ಬಣಜಿಗ, ಬಲಿಜ ಸಮುದಾಯದ ವಧು-ವರರ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಆಸಕ್ತ ವಧು-ವರರು ಅಥವಾ ಅವರ ಪೋಷಕರು ಸಂಘದ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಕೋರಲಾಗಿದ್ದು, ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರಾದ  ಕೆ.ಜನಾರ್ಧನ ಮೊ.9741790305, ಹೆಚ್.ಪಿ.ಮೋಹನ್ ಮೊ.8310670693 ಸಂಪರ್ಕಿಸುವಂತೆ ಕೋರಿದರು.

ಗೋಷ್ಠಿಯಲ್ಲಿ ಮುಖಂಡರಾದ ಹೆಚ್.ಪಿ.ಮೋಹನ್, ಕೆ.ಎಸ್.ಕೃಷ್ಣಶೆಟ್ಟಿ, ಕೇಶವಮೂರ್ತಿ, ಕೆ.ಜನಾರ್ಧನ ಹಾಗೂ ಎ.ಚನ್ನಕೇಶವ ಹಾಗೂ ಹೆಚ್.ಆರ್.ಗೋಪಾಲ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!