Friday, September 20, 2024

ಪ್ರಾಯೋಗಿಕ ಆವೃತ್ತಿ

ಬಡತನ ಮುಕ್ತ ರಾಷ್ಟ್ರ ಬಿಎಸ್ಪಿಯಿಂದ ಮಾತ್ರ ಸಾಧ್ಯ : ಡಾ.ಎಸ್.ಪಿ. ಶಿವಕುಮಾರ್

ಭಾರತದೇಶದಲ್ಲಿನ ನಿರುದ್ಯೋಗ ಮತ್ತು ಬಡತನ ಮುಕ್ತ ರಾಷ್ಟ್ರ ಮಾಡಲು ಬಿಎಸ್ಪಿ ಆಡಳಿತ ಸರ್ಕಾರಗಳಿಂದ ಮಾತ್ರ ಸಾಧ್ಯ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಕಾರ್ಯದರ್ಶಿ ಡಾ.ಎಸ್.ಪಿ.ಶಿವಕುಮಾರ್ ಹೇಳಿದರು.

ಮಂಡ್ಯ ನಗರದ ಜೆಸಿ ವೃತ್ತದಲ್ಲಿ ಜಿಲ್ಲಾ ಬಿಎಸ್ಪಿ ಆಯೋಜಿಸಿದ್ದ ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರ 67ನೇ ವರ್ಷದ ಜನ್ಮದಿನ ಪ್ರಯುಕ್ತ ಸ್ವಾಭಿಮಾನದ ದಿನಾಚರಣೆ ಮತ್ತು ಸೇವಾಕಾರ್ಯಕ್ಕೆ ಚಾಲನೆ ಹಾಗೂ ಸಿಹಿ ವಿತರಣೆ ಕಾರ್ಯಕ್ರಮವನ್ನು ಪದಾಧಿಕಾರಿಗಳೊಂದಿಗೆ ಬಿಎಸ್‌ಪಿ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಸುಮಾರು 60 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಉಳಿಸಿಕೊಂಡು ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸುತ್ತಿರುವ ಸರ್ಕಾರಗಳು ಜನತೆಗೆ ಬೇಕಾ, ?  ಬಡತನ ಮುಕ್ತ ರಾಷ್ಟ್ರವಾಗಿಸಲು ಅಕ್ಕಿ, ದಿನಸಿ, ಸಾಮಾಗ್ರಿಗಳನ್ನು ನೀಡದರೆ ಸಾಲದು, ತಲಾ 10 ಎಕರೆ ಭೂಮಿ ನೀಡಿ, ಕೃಷಿ ಬೆಳೆಯ ಉದ್ಯಮಕ್ಕೆ ವೈಜ್ಞಾನಿಕ ಬೆಲೆ ನೀಡಿದರೆ ರೈತ ಶ್ರೀಮಂತನಾಗುತ್ತಾನೆ ಎಂದು ನುಡಿದರು.

ಇಲ್ಲಿವರೆಗೆ ಆಡಳಿತ ನಡೆಸಿರುವ ಕಾಂಗ್ರೆಸ್, ಬಿಜೆಪಿ ಸರ್ಕಾರಗಳು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡದೇ ಬರೀ ಓಟ್‌ಬ್ಯಾಂಕ್ ರಾಜಕರಣ ಮಾಡಲು ತಾತ್ಕಾಲಿಕ ಸೌಲಭ್ಯಗಳನ್ನು ನೀಡಿವೆ, ಸಂವಿಧಾನ ಆಶಯಗಳು ಮತ್ತು ಸವಲತ್ತುಗಳನ್ನು ನೀಡಿದ್ದರೆ ಪ್ರಬುದ್ಧ ಭಾರತ ನಿರ್ಮಾಣವಾಗುತ್ತಿತ್ತು, ಭಾರತ ಪ್ರಗತಿ ರಾಷ್ಟ್ರವಾಗುತ್ತಿತ್ತು ಎಂದರು.

ಬಿಎಸ್ಪಿ ರಾಜ್ಯ ಕಾರ್ಯದರ್ಶಿ ವಕೀಲ ಎಂ.ಎಸ್.ವೆಂಕಟೇಶ್ ಮಾತನಾಡಿ, ಇಂದು ದೇಶಾದ್ಯಂತ ಜನತೆ ಸಂಕ್ರಾಂತಿ ಹಬ್ಬ ಆಚರಿಸುತ್ತಿದ್ದಾರೆ, ಅದರ ನಡೆವೆ ಬಿಎಸ್ಪಿ ಪದಾಧಿಕಾರಿಗಳು, ಕಾರ್ಯಕರ್ತರು ವರಿಷ್ಠೆ ಮಾಯಾವತಿ ಅವರ ಜನ್ಮದಿನವನ್ನು ಸಮಾಜಮುಖಿಯಾಗಿ ಆಚರಿಸುತ್ತಾ, ಸೇವಾಕಾರ್ಯದಲ್ಲಿ ತೊಡಗಿದ್ದೇವೆ ಎಂದರು.

ದೇಶದಲ್ಲಿರುವ ಜ್ವಲಂತ ಸಮಸ್ಯೆಗಳಿಗೆ ಸೂಕ್ತ ಪರಿಹಾರ, ಸಂವಿಧಾನವನ್ನು ಸಮರ್ಪಕವಾಗಿ ಜಾರಿ ಮಾಡುವುದಾಗಿದೆ. ಆಡಳಿತ ನಡೆಸುವ ಸರ್ಕಾರಗಳಿಗೆ ಇದು ಬೇಕಿಲ್ಲ, ಕಾರ್ಪೋರೇಟ್ ಕಂಪನಿಗಳ ಉದ್ದಾರಕ್ಕೆ ಆಡಳಿತ ನಡೆಸಿ ಜನರನ್ನು ನರಕಯಾತೆಯಲ್ಲಿರಿಸಿದ್ದಾರೆ. ಇಂತಹ ಆಡಳಿತ ನಡೆಸುವ ಸರ್ಕಾರಗಳಿಂದ ರಾಷ್ಟ್ರದ ಪ್ರಗತಿ ಅಸಾಧ್ಯವೆಂದರು.

ಮುಂದಿನ ದಿನಗಳಲ್ಲಿ ಜನತೆ ರಾಷ್ಟ್ರದ 3ನೇ ದೊಡ್ಡ ಪಕ್ಷವಾಗಿ ಬೆಳೆದಿರುವ ಬಹುಜನ ಸಮಾಜ ಪಕ್ಷಕ್ಕೆ ಅಧಿಕಾರ ನೀಡಿ, ವರಿ‍ಷ್ಠೆ ಮಾಯಾವತಿ ಅವರನ್ನು ಪ್ರಧಾನಮಂತ್ರಿ ಮಾಡಿದಾಗ ಮಾತ್ರ ಜನರ ಬದುಕು ಶ್ರೀಮಂತಗೊಳ್ಳುತ್ತದೆ ಎಂದರು. ಇದೇ ಸಂದರ್ಭದಲ್ಲಿ ಬಿಎಸ್ಪಿ ಕಾರ್ಯಕರ್ತರು ಸಾರ್ವಜನಿಕರಿಗೆ, ಸಿಹಿ ವಿತರಿಸಿದರು, ಜ್ಞಾನಸಿಂಧು ವೃದ್ದಾಶ್ರಮದಲ್ಲಿ ವಯೋವೃದ್ದರಿಗೆ ಹಣ್ಣು-ಹಂಪಲು ವಿತರಿಸಿದರು.

ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ್, ಮಂಡ್ಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅನಿಲ್‌ಕುಮಾರ್, ಜಿಲ್ಲಾ ಕಾರ್ಯದರ್ಶಿ ಸುರೇಶ್‌ ಎಸ್.ಆರ್.ಪಟ್ಟಣ, ಉಪಾಧ್ಯಕ್ಷ ರೋಹಿತ್, ಉಸ್ತುವಾರಿ ಚಲುವರಾಜ್, ವಿರಭದ್ರ, ಆನಂದ್, ಶ್ಯಾಮ ಸುಂದರ್, ಕುಮಾರ್, ಗೋವಿಂದರಾಜ್, ಮಧು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!