Thursday, September 19, 2024

ಪ್ರಾಯೋಗಿಕ ಆವೃತ್ತಿ

ದಂತದ ಆರೋಗ್ಯ ಕಾಪಾಡಿಕೊಡಿಕೊಳ್ಳಲು ಡಾ.ವೆಂಕಟೇಶ್ ಸಲಹೆ

ಮನುಷ್ಯನ ಆರೋಗ್ಯ ಉತ್ತಮ ಉತ್ತವಾಗಿರಬೇಕಾದರೆ, ಬಾಯಿಯ ಆರೋಗ್ಯ ಉತ್ತವಾಗಿರಬೇಕು. ಹಾಗಾಗಿ ಹಲ್ಲಿನ ಬಗ್ಗೆ ಅರಿತುಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎನ್ ಕೆ ವೆಂಕಟೇಶ್ ಸಲಹೆ ನೀಡಿದರು.

ಶ್ರೀರಂಗಪಟ್ಟಣದ ಟೌನ್ ವ್ಯಾಪ್ತಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಶ್ರೀರಂಗಪಟ್ಟಣ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ‘ದಂತ ತಪಾಸಣೆ ಹಾಗೂ ಬಾಯಿ ಆರೋಗ್ಯ’ ಕುರಿತ ಅರಿವು ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಿರಿಯ ದಂತ ಆರೋಗ್ಯ ಅಧಿಕಾರಿ ಡಾ.ಸ್ಮಿತಾ, ವಿಡಿಯೋ ಚಿತ್ರಣಗಳ ಮೂಲಕ ಹಲ್ಲಿನ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ಅಗತ್ಯತೆ, ಪ್ರತಿನಿತ್ಯ ಹಲ್ಲುಗಳನ್ನು ಎರಡು ಬಾರಿ ಸ್ವಚ್ಚಗೊಳಿಸಿಕೊಳ್ಳವ ಜೊತೆಗೆ, ನಾಲಿಗೆಯನ್ನು ಹೇಗೆ ಸ್ವಚ್ಚಗೊಳಿಸಿಕೊಳ್ಳಬೇಕೆಂದು ಹೇಳಿದರು.

ಸಮಾರಂಭದಲ್ಲಿ ದಂತ ವೈದ್ಯೆ ಡಾ.ಅನುಪಮ, ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ತಿಮ್ಮರಾಜು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್ ಡಿ ಬೆನ್ನೂರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲ ಅಶೋಕ ಕುಮಾರ್, ಎಸ್ ಡಿ ಎಂ ಸಿ ಅಧ್ಯಕ್ಷ ಸೋಮಶೇಖರ ಕೂಡಲಕುಪ್ಪೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಮಂಗಳಾ, ಶಿವಮ್ಮ, ಕೃಷ್ಣೆಗೌಡ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ, ಸಾಮಾಜಿಕ ಕಾರ್ಯಕರ್ತ ಮೋಹನ ಕುಮಾರ್ ಉಪಸ್ಥಿತರಿದ್ದರು. ಒಟ್ಟು 221 ಮಕ್ಕಳು ದಂತ ತಪಾಸಣೆಗೆ ಚಿಕಿತ್ಸೆಗೆ ಒಳಗಾದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!