Thursday, September 19, 2024

ಪ್ರಾಯೋಗಿಕ ಆವೃತ್ತಿ

ಮನೆಗಳ್ಳನ ಬಂಧನ:18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶ

ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿ ಪೊಲೀಸರು ಕುಖ್ಯಾತ ಮನೆಗಳ್ಳನ ಬಂಧಿಸಿದ್ದು, ಆತನಿಂದ 18 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿಯ ಆಭರಣ, ಆಟೋ, 4 ಬೈಕ್ ವಶ ಪಡಿಸಿಕೊಂಡಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ ಗ್ರಾಮದ ಮಹಮ್ಮದ್ ರಫೀಕ್ ಬಂಧಿತ ಆರೋಪಿ.

ದಿನಾಂಕ:4-01-2003ರಂದು ಕೆ.ಎಂ.ದೊಡ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ ಶ್ರೀಮತಿ ಸುನೀತಾ ಎಂಬುವವರ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲನ್ನು ಹೊಡೆದು ಚಿನ್ನಾಭರಣ,ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.ಆಗ ಆರೋಪಿ ಮೊಹಮ್ಮದ್‌ ರಫೀಕ್ ಸಿಕ್ಕಿಬಿದ್ದ.

ಈತ ಜಿಲ್ಲೆ ಸೇರಿದಂತೆ ಎಂಟು ಪೋಲಿಸ್ ಠಾಣೆಗಳ ವ್ಯಾಪ್ತಿಯ ಸುಮಾರು ಮನೆಗಳಲ್ಲಿ ಕಳವು ಮಾಡಿದ್ದ.ಈತನಿಂದ ಸುಮಾರು 18 ಲಕ್ಷ ರೂ. ಬೆಲೆ ಬಾಳುವ 271 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿಯ ಡಾಬು, ಒಂದು ಗೂಡ್ಸ್ ಆಟೋ ಹಾಗೂ ಕೃತ್ಯಕ್ಕೆ ಬಳಸಿದ್ದ 2 ಬೈಕ್, 5 ಸಾವಿರ ರೂ. ನಗದು ಹಣವನ್ನು ಪೊಲೀಸರು ವಶಪಡಿಸಿಕೊಂದಿದ್ದಾರೆ.

ಮಂಡ್ಯ ಎಸ್ಪಿ ಎನ್.ಯತೀಶ್, ಎಎಸ್ಪಿ ವೇಣುಗೋಪಾಲ್, ಮಳವಳ್ಳಿ ಉಪ ವಿಭಾಗದ ಡಿವೈಎಸ್ಪಿ ನವೀನ್ ಅವರ ಮಾರ್ಗದರ್ಶನದಲ್ಲಿ ಕೆ.ಎಂ.ದೊಡ್ಡಿ ಠಾಣೆಯ ಇನ್ಸ್‌ಪೆಕ್ಟರ್ ಶಿವಮಲವಯ್ಯ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಳಾದ ಭೀಮಪ್ಪ ಬನಾಸಿ, ರಾಮಸ್ವಾಮಿ, ಎಎಸ್‍ಐ ಕರಿಗಿರಿಗೌಡ, ಸಿಬ್ಬಂದಿಗಳಾದ ಪ್ರಭುಸ್ವಾಮಿ, ಮೋಹನ್ ಕುಮಾರ್, ವಿಠ್ಠಲ್ ಕರಿಗಾರ್, ಸುಬ್ರಮಣಿ, ನರಸಿಂಹ ಮೂರ್ತಿ, ಸಿಡಿಆರ್ ವಿಭಾಗದ ರವಿಕಿರಣ್ ಮತ್ತು ಲೋಕೇಶ್ ಅವರು ಕಾರ್ಯಾಚರಣೆ ನಡೆಸಿ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!