Thursday, September 19, 2024

ಪ್ರಾಯೋಗಿಕ ಆವೃತ್ತಿ

ಸಾಲ ಮನ್ನಾ ಮಾಡದ ರೈತ ವಿರೋಧಿ ಬಜೆಟ್ : ದಿನೇಶ್ ಗೂಳಿಗೌಡ

ಇದು ಜನವಿರೋಧಿ, ರೈತ ವಿರೋಧಿ ಬಜೆಟ್‌ ಆಗಿದೆ. ಇಲ್ಲಿ ರೈತರಿಗೆ ನೆರವಾಗುವಂತಹ ಯಾವುದೇ ಕೊಡುಗೆ ಯನ್ನು ನೀಡಲಾಗಿಲ್ಲ. ಇಂದು ಅತಿವೃಷ್ಟಿ, ಅನಾವೃಷ್ಟಿಗಳ ಕಾರಣದಿಂದ ರೈತರು ಸಂಕಷ್ಟದಲ್ಲಿದ್ದಾರೆ. ಪ್ರತಿ ಹಾದಿಯಲ್ಲಿಯೂ ಕಷ್ಟಪಡುತ್ತಲೇ ಇದ್ದಾರೆ. ರೈತರ ಆದಾಯವನ್ನು ದ್ವಿಗುಣ ಮಾಡುವುದು ಇರಲಿ, ಈಗ ಇರುವ ಸಂಕಷ್ಟದಿಂದಲೂ ಪರಿಹರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ದಿನೇಶ್‌ ಗೂಳಿಗೌಡ ಪ್ರತಿಕ್ರಿಯಿಸಿದ್ದಾರೆ.

ಇಂದು ರೈತರು ಯಾವುದೇ ಬೆಳೆ ಬೆಳೆದರೂ ಸೂಕ್ತ ದರ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಕೇಂದ್ರ ಸರ್ಕಾರ ಬರಲಿದೆ ಎಂಬ ವಿಶ್ವಾಸದಲ್ಲಿ ಜನರು ಇದ್ದರು. ಆದರೆ, ಯಾವುದೇ ರೀತಿಯ ಬೆಂಬಲ ಬೆಲೆಯನ್ನೂ ಹೆಚ್ಚು ಮಾಡಿಲ್ಲ. ಇದು ಕೃಷಿಕರಿಗೆ ಮಾಡಿದ ಅನ್ಯಾಯ ಮಾಡಲಾಗಿದೆ. ಇನ್ನು ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯ ಬಗ್ಗೆಯೂ ಘೋಷಿಸಿಲ್ಲ ಎಂದಿದ್ದಾರೆ.

ಈ ಬಾರಿ ಸಾಲ ಮನ್ನಾ ಮಾಡಲಾಗುವುದು ಎಂಬ ನಿರೀಕ್ಷೆಯೂ ಇತ್ತು. ಆದರೆ, ಅಂತಹ ಕ್ರಮವನ್ನೂ ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ. ಮನಮೋಹನ್‌ ಸಿಂಗ್‌ ನೇತೃತ್ವದ ಯುಪಿಎ ಸರ್ಕಾರ ಇದ್ದಾಗ 72 ಸಾವಿರ ಕೋಟಿ ರೂಪಾಯಿ ಮನ್ನಾ ಮಾಡಿ ರೈತರ ಪರವಾಗಿ ಧಾವಿಸಿತ್ತು. ಆದರೆ, ಸರ್ಕಾರ ಅಂತಹ ಯಾವುದೇ ನಿರ್ಧಾರವನ್ನು ಕೈಗೊಂಡಿಲ್ಲ. ಇದೊಂದು ನೀರಸ ಬಜೆಟ್‌ ಆಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!