ಮಂಡ್ಯ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಫೆ.6ರಂದು ಅರಸು ಸಂಘದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎ.ಎಂ.ಮಲ್ಲರಾಜೇ ಅರಸ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಅರಸು ಸಮುದಾಯದ ಸಂಘಟನೆ ಮತ್ತು ಸೇವಾ ಕಾರ್ಯಗಳ ಅನುಷ್ಠಾನಕ್ಕಾಗಿ ಮಂಡ್ಯ ಜಿಲ್ಲಾ ಅರಸು ಸಂಘವನ್ನು ಸ್ಥಾಪಿಸಲಾಗಿದೆ.ಫೆ 6 ರಂದು ಬೆಳಗ್ಗೆ 10ಕ್ಕೆ ಕಂದಾಯ ಮತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಅವರು ಸಂಘ ಮತ್ತು ಸಮಾರಂಭ ಉದ್ಘಾಟಿಸುವರು.
ಕ್ರೀಡಾ ಸಚಿವ ಕೆ.ಸಿ.ನಾರಾಯಣಗೌಡ ಅವರು ಸಂಘದ ನಾಮಫಲಕ ಅನಾವರಣ ಮಾಡಿದರೆ, ಸಂಸದೆ ಸುಮಲತಾ ಅಂಬರೀಶ್ ನಾಡದೇವತೆ ಶ್ರೀಚಾಮುಂಡೇಶ್ವರಿ ಭಾವಚಿತ್ರಕ್ಕೆ ಪುಷಾರ್ಚನೆ ಮಾಡುವರು. ಮೈಸೂರು ರಾಜವಂಶಸ್ಥ ಶ್ರೀಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗವಹಿಸುವರು.
ಮಂಟೇಸ್ವಾಮಿ ಮಠದ ಮಳವಳ್ಳಿ ಶಾಖೆಯ ಮಠಾಧಿಪತಿ ಶ್ರೀಎಂ.ಎಲ್.ವರ್ಚಸ್ವಿ ಶ್ರೀಕಂಠ ಸಿದ್ದಲಿಂಗ ರಾಜೇಅರಸ್, ಬೊಪ್ಪೇಗೌಡನಪುರ ಮಠದ ಪೀಠಾಧಿಪತಿ ಶ್ರೀ ಜ್ಞಾನಾನಂದ ಚನ್ನರಾಜೇ ಅರಸ್, ಕುರುಬನಕಟ್ಟೆ ಕ್ಷೇತ್ರದ ಪೀಠಾಧಿಪತಿ ಶ್ರೀವರುಣ್ ಲಿಂಗರಾಜೇ ಅರಸ್, ತಮಿಳುನಾಡಿನ ದ್ರೋಣಗಿರಿ ಮಠದ ಶ್ರೀ ಅಶೋಕ ರಾಜೇಂದ್ರ ಸ್ವಾಮೀಜಿ, ದ್ರೋಣಕೆರೆ ಮಠದ ಶ್ರೀ ಸುಬ್ರಹ್ಮಣ್ಯ ರಾಜೇಂದ್ರ ಸ್ವಾಮೀಜಿ, ಬಿ.ಜಿ.ಪುರ ಮಂಟೇಶ್ವರಿ ಮಠದ ಆಡಳಿತಾಧಿಕಾರಿ ಭರತ್ ಅರಸ್ ಸಾನಿಧ್ಯ ವಹಿಸುವರು ಎಂದರು.
ನಾಡನ್ನಾಳಿದ ಮಹಾಪ್ರಭುಗಳ ಭಾವಚಿತ್ರಗಳಿಗೆ ಶಾಸಕರಾದ ಎಂ.ಶ್ರೀನಿವಾಸ್, ಡಿ.ಸಿ.ತಮ್ಮಣ್ಣ, ಡಾ.ಕೆ.ಅನ್ನದಾನಿ, ರವೀಂದ್ರ ಶ್ರೀಕಂಠಯ್ಯ ಪುಷ್ಪನಮನ ಸಲ್ಲಿಸುವರು. ಶಾಸಕರಾದ ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ದಿನೇಶ್ಗೂಳಿಗೌಡ, ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಪಿ.ಉಮೇಶ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಭಾಗವಹಿಸುವರು ಎಂದು ವಿವರಿಸಿದರು.
ಗೋಷ್ಟಿಯಲ್ಲಿ ಸಂಘದ ಕಾರ್ಯದರ್ಶಿ ದೇವರಾಜೇ ಅರಸ್, ಸಹ ಕರ್ಯದರ್ಶಿ ಕೃಷ್ಣರಾಜೇ ಅರಸ್, ಜಂಟಿ ಕರ್ಯದರ್ಶಿ ಪುಟ್ಟಬುದ್ದಿರಾಜೇ ಅರಸ್, ಆಂತರಿಕ ಲೆಕ್ಕ ಪರಿಶೋಧಕ ಎಸ್.ರಾಮರಾಜೇ ಅರಸ್ ಹಾಜರಿದ್ದರು.




